ವಿಶೇಷವೇನಿಲ್ಲ, ಆದರೂ ರುಚಿಯಾಗಿ ಏನಾದರೂ ತಿನ್ನಬೇಕು ಅನ್ನಿಸುತ್ತದೆ. ಹಾಗಾದರೆ ನೀವು ಹೋಟೆಲ್ನಲ್ಲಿ ನಾಲಿಗೆ ಚಪ್ಪರಿಸಿ ತಿನ್ನುವ ಬಾಳೆಕಾಯಿ ಕಬಾಬ್ ಮನೆಯಲ್ಲಿ ಮಾಡಿ ಸವಿಯಿರಿ.
Advertisement
ಬೇಕಾಗುವ ಸಾಮಗ್ರಿಗಳು:
*ಬಾಳೆಕಾಯಿ- 4
* ಮೈದಾ- 2 ಕಪ್
* ಅರಿಶಿಣ ಪುಡಿ- 1 ಚಮಚ
* ಏಲಕ್ಕಿ ಪುಡಿ- ಸ್ವಲ್ಪ
* ಸಕ್ಕರೆ- ಸ್ವಲ್ಪ
* ರುಚಿಗೆ ತಕ್ಕಷ್ಟು ಉಪ್ಪು
* ಜೀರಿಗೆ- 1 ಚಮಚ
* ಅಡುಗೆ ಎಣ್ಣೆ- 2 ಕಪ್
Advertisement
ಮಾಡುವ ವಿಧಾನ:
Advertisement
* ಬಾಳೆಕಾಯಿ ಸಿಪ್ಪೆ ತೆಗೆದು ಕಟ್ ಮಾಡಿಕೊಳ್ಳಬೇಕು.
* ಮೈದಾಹಿಟ್ಟು, ಅರಿಶಿಣ, ಉಪ್ಪು, ಏಲಕ್ಕಿ ಪುಡಿ, ಸಕ್ಕರೆ ಸೇರಿಸಿ ದೋಸೆ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಬೇಕು. ಇದನ್ನೂ ಓದಿ: ಮಂಗಳೂರು ಸ್ಟೈಲ್ ಚಿಕನ್ ಸುಕ್ಕಾ ಮಾಡೋ ಸುಲಭ ವಿಧಾನ
Advertisement
* ಬಾಣಲೆಯಲ್ಲ ಅಡುಗೆ ಎಣ್ಣೆಯನ್ನು ಹಾಕಿ ಕಾಯಿಸ ಬೇಕು
* ನಂತರ ಹಿಟ್ಟಿನ ಮಿಶ್ರಣದಲ್ಲಿ ಬಾಳೆಕಾಯಿಗಳನ್ನು ಅದಕ್ಕಿ ಬೋಂಡಾದಂತೆ ಕರಿಯಬೇಕು. ಇದನ್ನೂ ಓದಿ: ಅಕ್ಕಿ ರೊಟ್ಟಿಗೆ ಕಾಂಬಿನೇಷನ್ ಖಾರವಾದ ಚಿಕನ್ ಮಸಾಲ
* ಈಗ ರುಚಿ ರುಚಿಯಾದ ಬಾಳೆಕಾಯಿ ಕಬಾಬ್ ಸವಿಯಲು ಸಿದ್ಧವಾಗುತ್ತದೆ.