ನವದೆಹಲಿ: ಕೇಂದ್ರ ಸರ್ಕಾರವೂ 75ನೇ ಸ್ವಾಂತಂತ್ರ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸಲು ಈಗಾಗಲೇ ಸಿದ್ಧಗೊಂಡಿದ್ದು ಅಜಾದಿ ಕಾ ಅಮೃತ ಮಹೋತ್ಸವದ ಅಡಿಯಲ್ಲಿ ಅನೇಕ ಕಾರ್ಯಕ್ರಮವನ್ನುಜಾರಿಗೆ ತರುತ್ತಿದೆ. ಹರ್ ಘರ್ ತಿರಂಗ (ಪ್ರತಿ ಮನೆಯಲ್ಲೂ ಬಾವುಟ)ವು ಅಜಾದಿ ಕಾ ಅಮೃತ ಮಹೋತ್ಸವ ಅಡಿಯಲ್ಲಿ ಬರುವ ಮಹತ್ವದ ಕಾರ್ಯಕ್ರಮವಾಗಿದೆ. ಇದೀಗ ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಸೂಚನೆಯೊಂದನ್ನು ಬಿಡುಗಡೆ ಮಾಡಿದೆ.
ಹೌದು.. ಹರ್ ಘರ್ ತಿರಂಗ ಆಚರಿಸುವ ಉತ್ಸಾಹದಲ್ಲಿ ಯಾವುದೇ ಪ್ರಮಾದ ಅಥವಾ ದೇಶ ದ್ರೋಹದ ಕೆಲಸವಾಗದಿರಲಿ ಎಂದು ಬಾವುಟವನ್ನು ಮಡಿಸುವ ಸರಿಯಾದ ಮಾರ್ಗದ ಬಗ್ಗೆ ಪಟ್ಟಿಯೊಂದನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಬಾವುಟವನ್ನು ಹಂತ ಹಂತವಾಗಿ ಯಾವ ರೀತಿಯಾಗಿಮಡಿಸಬೇಕು ಎನ್ನುವ ಎಲ್ಲಾ ಕ್ರಮಗಳನ್ನು ನೀಡಿದೆ. ಅವು ಈ ರೀತಿ ಆಗಿದೆ.
Advertisement
Advertisement
ಮೊದಲಿಗೆ ರಾಷ್ಟ್ರಧ್ವಜವನ್ನು ಅಡ್ಡಲಾಗಿ ಇರಿಸಬೇಕು. ನಂತರ ಮಧ್ಯದಲ್ಲಿರುವ ಬಿಳಿ ಪಟ್ಟಿಯ ಅಡಿಯಲ್ಲಿ ಕೇಸರಿ ಹಾಗೂ ಹಸಿರು ಪಟ್ಟಿಗಳನ್ನು ಮಡಿಸಬೇಕು. ಅದಾದ ಬಳಿಕ ಕೇಸರಿ ಮತ್ತು ಹಸಿರು ಬಣ್ಣದ ಪಟ್ಟಿಯೊಂದಿಗೆ ಅಶೋಕ ಚಕ್ರ ಮಾತ್ರ ಕಾಣುವ ರೀತಿಯಲ್ಲಿ ಬಿಳಿ ಬಣ್ಣದ ಪಟ್ಟಿಯನ್ನು ಮಡಿಸಬೇಕು. ಇದಾದ ನಂತರ ಮಡಿಸಿದ ರಾಷ್ಟ್ರ ಧ್ವಜವನ್ನು ಅಂಗೈ ಅಥವಾ ತೋಳುಗಳ ಮೇಲೆ ತೆಗೆದುಕೊಂಡು ಹೋಗಬೇಕು. ಈ ಎಲ್ಲಾ ನಿಯಮಗಳು ರಾಷ್ಟ್ರಧ್ವಜವನ್ನು ಮಡಿಸುವಾಗ ಅನುಸರಿಸಲೇ ಬೇಕಾದ ಕ್ರಮಗಳಾಗಿವೆ. ಇದನ್ನೂ ಓದಿ: ಆಜಾದಿ ಕಾ ಅಮೃತ ಮಹೋತ್ಸವಕ್ಕೆ ಉಗ್ರರ ಕರಿ ನೆರಳು – ಕೆಂಪುಕೋಟೆಯ ಸುತ್ತ 1,000 ಅಧಿಕ ಸಿಸಿಟಿವಿ ಕ್ಯಾಮೆರಾ
Advertisement
Advertisement
75ನೇ ಸ್ವಾತಂತ್ರ್ಯೋತ್ಸವದ ಸಂಭ್ರಮದ ಹಿನ್ನೆಲೆಯಲ್ಲಿ ಮಂಗಳವಾರದಂದು ಪ್ರಧಾನಿ ಮೋದಿ ಅವರು ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ರಾಷ್ಟ್ರಧ್ವಜವನ್ನು ತಮ್ಮ ಪ್ರೊಫೈಲ್ ಪಿಕ್ಚರ್ ಆಗಿ ಬದಲಾಯಿಸಿಕೊಂಡಿದ್ದರು. ಅಷ್ಠ ಅಲ್ಲದೇ ಈ ಅಭಿಯಾನದಲ್ಲಿ ಎಲ್ಲರೂ ಪಾಲ್ಗೊಳ್ಳುವಂತೆ ಮನವಿ ಮಾಡಿದ್ದರು. ಈ ಅಭಿಯಾನಕ್ಕೆ ಈಗಾಗಲೇ ದೇಶಾದ್ಯಂತ ಉತ್ತಮ ಸ್ಪಂದನೆ ದೊರೆಯುತ್ತಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಸೇರಿದಂತೆ ಅನೇಕ ಬಿಜೆಪಿ ನಾಯಕರು ಭಾಗಿಯಾಗಿದ್ದಾರೆ.
Har Ghar Tiranga…Ghar Ghar Tiranga…
Celebrate our Tiranga with this melodious salute to our Tricolour , the symbol of our collective Pride & Unity as our Nation completes 75 years of independence ????????#HarGharTiranga #AmritMahotsav pic.twitter.com/ECISkROddI
— Ministry of Culture (@MinOfCultureGoI) August 3, 2022
ಕೇವಲ ಬಿಜೆಪಿಯೊಂದೇ ಅಲ್ಲದೇ ಕಾಂಗ್ರೆಸ್‍ನವರು ಈ ಅಭಿಯಾನಕ್ಕೆ ಕೈ ಜೋಡಿಸಿದ್ದು, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ ಅನೇಕ ಕಾಂಗ್ರೆಸ್ ನಾಯಕರು ತಮ್ಮ ಪ್ರೊಫೈಲ್‍ನಲ್ಲಿ ಮಾಜಿ ಪ್ರಧಾನಿ ಜವಾಹರ್ ಲಾಲ್ ನೆಹರು ಅವರು ರಾಷ್ಟ್ರಧ್ವಜವನ್ನು ಹಿಡಿದಿರುವ ಫೋಟೋವನ್ನು ಹಾಕಿದ್ದಾರೆ. ಅಷ್ಟೇ ಅಲ್ಲದೇ ರಾಹುಲ್ ಗಾಂಧಿ ನಮ್ಮ ತಿರಂಗ, ನಮ್ಮ ದೇಶದ ಹೆಮ್ಮೆ, ರಾಷ್ಟ್ರಧ್ವಜ ಪ್ರತಿಯೊಬ್ಬ ಭಾರತೀಯನ ಹೃದಯದಲ್ಲೂ ಇದೆ ಎಂದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ರಾಷ್ಟ್ರಧ್ವಜದ ಮೇಲೆ ಕಾಂಗ್ರೆಸ್‍ನವರಿಗೆ ಇರುವುದು ಹುಸಿ ಪ್ರೇಮ: ಬಿಜೆಪಿ