ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಕಂಗನಾ ರಣಾವತ್ ಮತ್ತೊಂದು ಬಾಂಬ್ ಸಿಡಿಸಿದ್ದಾರೆ. ಪ್ರತಿ ಬಾರಿಯೂ ಬಾಲಿವುಡ್ (Bollywood) ನಟ, ನಟಿಯರು ಹಾಗೂ ನಿರ್ದೇಶಕರ ವಿರುದ್ಧ ಹಾರಿಹಾಯುತ್ತಿದ್ದ ಕಂಗನಾ ಈ ಬಾರಿ ರಾಜಕಾರಣಿಗಳು, ರಾಜಕೀಯ ವಿರೋಧಿಗಳು ಹಾಗೂ ತುಕಡೆ ತುಕಡೆ ಗ್ಯಾಂಗ್ (Tukade Tukade Gang) ವಿರುದ್ಧ ಮಾತನಾಡಿದ್ದಾರೆ. ಇವರನ್ನು ವಿರೋಧಿಸಿದ್ದಕ್ಕಾಗಿ ಭಾರೀ ಪ್ರಮಾಣದಲ್ಲಿ ದಂಡ ತೆತ್ತಿರುವ ಕುರಿತು ಮಾತನಾಡಿದ್ದಾರೆ.
ನಟನೆಯಷ್ಟೇ ಕಾಂಟ್ರವರ್ಸಿಗೂ ಫೇಮಸ್ ಆಗಿರುವ ಕಂಗನಾ (Kangana Ranaut), ತಾವು ನಂಬಿಕೊಂಡ ಸಿದ್ದಾಂತಕ್ಕೆ ಬದ್ಧರಾಗಿ ಯಾವಾಗಲೂ ಮಾತನಾಡುತ್ತಾರೆ. ಹಾಗಾಗಿಯೇ ಕಂಗನಾ ಮೇಲೆ ಮುಗಿಬಿದ್ದವರ ಸಂಖ್ಯೆ ಬಹಳ. ಅವರ ವೈಯಕ್ತಿಕ ಬದುಕು ಹಾಗೂ ಸಿನಿಮಾ ಬದುಕಿನ ಮೇಲೆ ಅವರ ಮಾತೇ ಸಾಕಷ್ಟು ಕೆಟ್ಟ ಪರಿಣಾಮವನ್ನು ಬೀರಿವೆ. ಅದು ಯಾವ ಪ್ರಮಾಣದಲ್ಲಿ ಎನ್ನುವುದನ್ನು ಈ ಬಾರಿ ಕಂಗನಾ ಹೇಳಿಕೊಂಡಿದ್ದಾರೆ. ಇದನ್ನೂ ಓದಿ:ಬಾಯ್‌ಫ್ರೆಂಡ್ ಪರಿಚಯಿಸಿದ ಕೀರ್ತಿ ಸುರೇಶ್- ಹುಡುಗ ಯಾರು?
‘ನಾನು ದೇಶ ವಿರೋಧಿಗಳ ಬಗ್ಗೆ ಮಾತನಾಡಿದ್ದಕ್ಕೆ, ತುಕಡೆ ತುಕಡೆ ಗ್ಯಾಂಗ್ ವಿರುದ್ಧ ತಿರುಗಿ ಬಿದ್ದಿದ್ದಕ್ಕೆ ಈ ವರ್ಷದಲ್ಲಿ ಕನಿಷ್ಠ 30 ರಿಂದ 40 ಕೋಟಿ ರೂಪಾಯಿಗಳನ್ನು (Money) ಕಳೆದುಕೊಂಡಿದ್ದೇನೆ. ಕನಿಷ್ಠ 25 ಜಾಹೀರಾತುಗಳಿಂದ (Advertising) ನಾನು ಆಚೆ ಬಂದಿದ್ದೇನೆ. ಈ ದೇಶ ವಿರೋಧಿಗಳ ಬಗ್ಗೆ ಮಾತನಾಡಿದ್ದಕ್ಕೆ ರಾತ್ರೋರಾತ್ರಿ ಜಾಹೀರಾತುಗಳಿಂದ ನನ್ನನ್ನು ಕೈ ಬಿಟ್ಟರು. ಆದರೂ, ನಾನು ಮಾತನಾಡುವುದನ್ನು ನಿಲ್ಲಿಸುವುದಿಲ್ಲ’ ಎಂದಿದ್ದಾರೆ.
ಕಂಗನಾ ಈ ಮಾತುಗಳನ್ನು ಆಡುವುದಕ್ಕೆ ಕಾರಣ ಎಲಾನ್ ಮಸ್ಕ್ ಸಂದರ್ಶನ. ಶ್ರೀಮಂತ ಉದ್ಯಮಿ ಎಲಾನ್ ಸಂದರ್ಶನವೊಂದರಲ್ಲಿ ‘ನಾನು ಅನಿಸಿದ್ದನ್ನು ಹೇಳಿದ್ದರಿಂದ ಸಾಕಷ್ಟು ಹಣವನ್ನು ಕಳೆದುಕೊಂಡೆ’ ಎಂದಿದ್ದಾರೆ. ಈ ಮಾತುಗಳಿಗೆ ಉತ್ತರ ಎನ್ನುವಂತೆ ತಾವೂ ಹಣ ಕಳೆದುಕೊಂಡಿದ್ದರ ಬಗ್ಗೆ ಕಂಗನಾ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.