ಮಂಸೋರೆ ನಿರ್ದೇಶನದ ಹೊಸ ಸಿನಿಮಾದಲ್ಲಿ ಸಾಯಿ ಪಲ್ಲವಿ ನಟಿಸಲಿದ್ದಾರೆ ಎಂದು ಸುದ್ದಿ ಆಗಿತ್ತು. ಸಾಯಿ ಪಲ್ಲವಿ ಕೂಡ ಕಥೆಯನ್ನು ಕೇಳುತ್ತಿದ್ದಾರೆ, ಸದ್ಯದಲ್ಲೇ ಸಿನಿಮಾ ಸೆಟ್ಟೇರಲಿದೆ ಎನ್ನುವಲ್ಲಿಗೆ ಸುದ್ದಿ ಹರಡಿತ್ತು. ಆನಂತರ ಮಂಸೋರೆ ಬೇರೆ ಚಿತ್ರದತ್ತ ಹೊರಳಿದರು. ಇದನ್ನೂ ಓದಿ : 12 ವರ್ಷಗಳ ನಂತರ ಕನ್ನಡಕ್ಕೆ ಖುಷ್ಬು : ರವಿಚಂದ್ರನ್ ಪತ್ನಿಯಾಗಿ ನಟನೆ
ದಕ್ಷಿಣದ ಹೆಸರಾಂತ ಈ ತಾರೆ ಅನೇಕ ಸ್ಟಾರ್ ನಟರ ಚಿತ್ರಗಳಲ್ಲಿ ನಟಿಸಿದ್ದಾರೆ. ತೆಲುಗು, ತಮಿಳು, ಮಲಯಾಳಂ ಚಿತ್ರಗಳ ಮೂಲಕ ಅಪಾರ ಅಭಿಮಾನಿಗಳನ್ನೂ ಹೊಂದಿದ್ದಾರೆ. ಮೂಲತಃ ಡಾನ್ಸರ್ ಆಗಿದ್ದ ಸಾಯಿ ಪಲ್ಲವಿ 2005ರಲ್ಲಿ ತೆರೆಕಂಡ ತಮಿಳಿನ ಕಸ್ತೂರಿ ಮಾನ್ ಚಿತ್ರದ ಮೂಲಕ ಚಿತ್ರೋದ್ಯಮಕ್ಕೆ ಕಾಲಿಟ್ಟವರು. ಮಾಡಿದ್ದು ಕಡಿಮೆ ಸಂಖ್ಯೆಯ ಚಿತ್ರಗಳಾದರೂ, ಅಪರೂಪದ ನಟಿಯರ ಸಾಲಿನಲ್ಲಿ ಇವರಿಗೆ ಸ್ಥಾನ ಸಿಕ್ಕಿದೆ. ಇದನ್ನೂ ಓದಿ : ಎಪ್ರಿಲ್ 2ನೇ ವಾರದಲ್ಲಿ ನಟಿ ಕಾವ್ಯ ಶಾ ಮದ್ವೆ : ಮಾಧ್ಯಮ ಲೋಕದ ಹುಡುಗನ ಜತೆ ಸಪ್ತಪದಿ
ಸದ್ಯ ರಾಣಾ ದುಗ್ಗುಬಾಟಿ ಸಿನಿಮಾದಲ್ಲಿ ನಟಿಸುತ್ತಿರುವ ಸಾಯಿ ಪಲ್ಲವಿಯ ನಿಜವಾದ ಹೆಸರು ಪಲ್ಲವಿ ಸೆಂತಮಾರೈ. ಮೂಲತಃ ಇವರು ತಮಿಳುನಾಡಿನ ನೀಲಗಿರಿ ಜಿಲ್ಲೆಯ ಕೊಟಗಿರಿಯವರು. ತಂದೆ ಸೆಂತಮಾರೈ ಕಣ್ಣನ್ ತಾಯಿ ರಾಧಾ. ಈ ದಂಪತಿ ಸಾಯಿ ಬಾಬಾ ಅವರ ದೊಡ್ಡ ಭಕ್ತರು. ಹಲವು ವರ್ಷಗಳಿಂದ ಸಾಯಿಬಾಬಾ ಟ್ರಸ್ಟ್ ನಲ್ಲಿಯೂ ಕೆಲಸ ಮಾಡಿದ್ದಾರೆ. ಹೀಗಾಗಿ ಪಲ್ಲವಿ ಕೂಡ ಅಪ್ಪನೊಂದಿಗೆ ಸಾಯಿಬಾಬಾ ಆಶ್ರಮಕ್ಕೆ ಈಗಲೂ ಹೋಗುತ್ತಾರೆ. ಸಾಯಿಬಾಬಾ ಅವರ ಕಾರಣದಿಂದಾಗಿ ಪಲ್ಲವಿ ಅವರ ಹೆಸರಿನ ಹಿಂದೆ ‘ಸಾಯಿ’ ಪಲ್ಲವಿ ಎಂದು ಹೆಸರು ಸೇರಿಕೊಂಡಿದೆ. ಇದನ್ನೂ ಓದಿ : ಬೆಳಗಾವಿ ಭಾಗದ ದಿಟ್ಟ ಅಧಿಕಾರಿಯ ಪಾತ್ರದಲ್ಲಿ ಧನಂಜಯ್
ಈವತ್ತಿಗೂ ಅಪ್ಪ ಅಮ್ಮನೊಂದಿಗೆ ಸಾಯಿ ಬಾಬಾ ದೇವಸ್ಥಾನಕ್ಕೆ ಪಲ್ಲವಿ ತಪ್ಪದೇ ಹೋಗುತ್ತಾರೆ. ಅಲ್ಲಿನ ಆಶ್ರಮಗಳಲ್ಲಿ ಸೇವೆ ಮಾಡುತ್ತಾರೆ. ನಿತ್ಯವೂ ಸಾಯಿಯನ್ನು ನೆನೆಯುತ್ತಾರಂತೆ ಸಾಯಿ ಪಲ್ಲವಿ.