CinemaDistrictsKarnatakaLatestMain PostSandalwood

ಬೆಳಗಾವಿ ಭಾಗದ ದಿಟ್ಟ ಅಧಿಕಾರಿಯ ಪಾತ್ರದಲ್ಲಿ ಧನಂಜಯ್

Advertisements

ಡವ ರಾಸ್ಕಲ್ ಸಿನಿಮಾದ ಟೂರ್ ಮುಗಿಸಿಕೊಂಡು, ಸದ್ಯ ಹೊಸ ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ ನಟ ಧನಂಜಯ್. ಈಗ ಅವರು ತಮ್ಮ 25ನೇ ಸಿನಿಮಾ ಹೊಯ್ಸಳದ ಚಿತ್ರೀಕರಣದಲ್ಲಿ ತೊಡಗಿದ್ದು, ಈ ಚಿತ್ರದಲ್ಲಿ ಅವರದ್ದು ವಿಶೇಷ ಪಾತ್ರವಂತೆ. ಇದನ್ನೂ ಓದಿ : Exclusive – ಸಿನಿಮಾವಾಗ್ತಿದೆ ಮಾಜಿ ಡಾನ್, ಹಾಲಿ ಕನ್ನಡಪರ ಹೋರಾಟಗಾರನ ಜೀವನ ಕಥೆ

ನಾನಾ ಸಿನಿಮಾಗಳಲ್ಲಿ ಧನಂಜಯ್ ಪೊಲೀಸ್ ಅಧಿಕಾರಿಯ ಪಾತ್ರ ಮಾಡಿದ್ದಾರೆ. ಆದರೆ, ಹೊಯ್ಸಳದಲ್ಲಿ ಅವರದ್ದು ಮತ್ತೊಂದು ರೀತಿಯ ಪೊಲೀಸ್ ಅಧಿಕಾರಿಯ ಕ್ಯಾರೆಕ್ಟರ್ ಅಂತೆ. ಬೆಳಗಾವಿ ಭಾಗದ ದಕ್ಷ ಪೊಲೀಸ್ ಅಧಿಕಾರಿಯಾಗಿ ಧನಂಜಯ್ ತೆರೆಯ ಮೇಲೆ ಕಾಣಿಸಿಕೊಳ್ಳುತ್ತಿರುವುದು ವಿಶೇಷ. ಇದನ್ನೂ ಓದಿ : ನನ್ನ ಮುಗಿಸ್ಬಿಡ್ತೀನಿ ಅಂತಾನೆ: ಗಂಭೀರ ಆರೋಪ ಮಾಡಿದ ನಟಿ ಸಂಜನಾ

ಬೆಳಗಾವಿ ಭಾಗದಲ್ಲೇ ಸಿನಿಮಾದ ಕಥೆ ನಡೆಯುವುದರಿಂದ ಆ ಭಾಗದ ಸುತ್ತಮುತ್ತ ಶೂಟಿಂಗ್ ಆರಂಭವಾಗಿದೆ. ಧನಂಜಯ್ ಅವರ 25ನೇ ಸಿನಿಮಾ ಇದಾಗಿದ್ದರಿಂದ ಸಹಜವಾಗಿ ಅಭಿಮಾನಿಗಳಿಗೂ ಕುತೂಹಲ ಹೆಚ್ಚಿದೆ. ಇದನ್ನೂ ನೋಡಿ : ನಟ ಚೇತನ್‌ಗೆ ನೀಡಿದ್ದ ಗನ್ ಮ್ಯಾನ್ ಹಿಂಪಡೆದ ಸರ್ಕಾರ

ಈ ಹಿಂದೆ ಗಣೇಶ್ ಗಾಗಿ ‘ಗೀತಾ’ ಸಿನಿಮಾ ಮಾಡಿದ್ದ ನಿರ್ದೇಶಕ ವಿಜಯ್.ಎನ್ ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದು, ಕೆ.ಆರ್.ಜಿ  ಸ್ಟುಡಿಯೋಸ್ ನಿರ್ಮಾಣ ಸಂಸ್ಥೆಯು ಇದನ್ನು ತಯಾರಿಸುತ್ತಿದೆ. ಈ ಹಿಂದೆ ಧನಂಜಯ್ ಅವರ ರತ್ನನ್ ಪ್ರಪಂಚ ಸಿನಿಮಾ ಮಾಡಿದ್ದು ಇದೇ ಸಂಸ್ಥೆ. ಇದನ್ನೂ ಓದಿ : ಪ್ರಭಾಸ್‍ಗೆ ಮಿರ್ಚಿ ಪ್ರಶ್ನೆ ಕೇಳಿದ ದೀಪಿಕಾ ಪಡುಕೋಣೆ!

ಒಂದರ ಮೇಲೊಂದು ಸಿನಿಮಾಗಳನ್ನು ಒಪ್ಪಿಕೊಳ್ಳುವ ಮೂಲಕ ಧನಂಜಯ್ ಅಭಿಮಾನಿಗಳಿಗೆ ಸರ್ ಪ್ರೈಸ್ ನೀಡುತ್ತಿದ್ದಾರೆ. ತಿಂಗಳಲ್ಲಿ ಐದಕ್ಕಿಂತಲೂ ಹೆಚ್ಚು ಕಥೆಗಳನ್ನು ಅವರು ಇದೀಗ ಕೇಳುತ್ತಿದ್ದಾರಂತೆ.

Leave a Reply

Your email address will not be published.

Back to top button