ಗೃಹಿಣಿ ಸಾವು ಕೇಸ್‌ಗೆ ಟ್ವಿಸ್ಟ್ – ಪತಿಯೇ ಮಾಸ್ಟರ್ ಮೈಂಡ್, ಸ್ನೇಹಿತನ ಪತ್ನಿಯ ಕೊಲೆ ರಹಸ್ಯವೂ ಬಯಲು

Public TV
2 Min Read
Murder

ಬೆಂಗಳೂರು: ಮಹಾಲಕ್ಷ್ಮಿ ಲೇಔಟ್‌ನ  ಗೃಹಿಣಿಯ (House Wife) ಅನುಮಾನಾಸ್ಪದ ಸಾವು ಪ್ರಕರಣದಲ್ಲಿ ಪತ್ನಿಯೇ ಕೊಲೆ (Murder) ಮಾಡಿರುವುದು ಬೆಳಕಿಗೆ ಬಂದಿದ್ದು ಕಥೆ ರೋಚಕ ತಿರುವು ಪಡೆದುಕೊಂಡಿದೆ.

ಪ್ರೇಮಲತಾ (35) ಮೃತ ಗೃಹಿಣಿ. ಸಂಜೆ ಮಕ್ಕಳು ಶಾಲೆಯಿಂದ ವಾಪಸ್ ಮನೆಗೆ ಬಂದು ನೋಡಿದ್ದಾಗ ಪ್ರಕರಣ ಬೆಳಕಿಗೆ ಬಂದಿತ್ತು. ಸಾವಿನ (Death) ಬಗ್ಗೆ ಹಲವಾರು ಅನುಮಾನಗಳಿಗೆ ಕಾರಣವಾಗಿತ್ತು. ಆಕೆಯ ಪತಿಯೇ ಕೊಲೆ ಮಾಡಿರುವುದಾಗಿ ಶಂಕೆ ಸಹ ವ್ಯಕ್ತವಾಗಿತ್ತು. ಆದರೆ ಈಗ ಪ್ರಕರಣದಲ್ಲಿ ಗಂಡನೇ ಕೊಲೆ ಮಾಡುವಂತೆ ಸ್ನೇಹಿತನಿಗೆ ಸುಪಾರಿ ಕೊಟ್ಟಿರುವ ವಿಚಾರ ತನಿಖೆಯಿಂದ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಈಶ್ವರಪ್ಪ ಮಾತು ಕೇಳಿದರೆ ದೊಡ್ಡ ಅನಾಹುತಕ್ಕೆ ಹೋಗುತ್ತದೆ: ಎಂ.ಬಿ ಪಾಟೀಲ್

Murder

ನಡೆದಿದ್ದೇನು?
ಕಳೆದ ಮಂಗಳವಾರ (ಫೆ.6) ರಂದು ಪ್ರೇಮಲತಾ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಸಾವಿನ ಹಿಂದೆ ಹಲವಾರು ಅನುಮಾನಗಳ ಶಂಕೆ ವ್ಯಕ್ತವಾಗಿತ್ತು. ಗಂಡನಾದ ಶಿವಶಂಕರ್ ಕೊಲೆ ಮಾಡಿ ನೇಣು ಬಿಗಿದು ಕೊಲೆ ಮಾಡಿದ್ದಾನೆ ಎಂದು ಆಕೆಯ ಕುಟುಂಬಸ್ಥರು ದೂರು ನೀಡಿದ್ದರು. ಇದನ್ನೂ ಓದಿ: ಮೊಂಡುವಾದ ಬಿಟ್ಟು ರಾಜ್ಯಕ್ಕೆ ಅನ್ಯಾಯವಾಗುತ್ತಿರೋದನ್ನ ಹರೀಶ್ ಪೂಂಜಾ ಒಪ್ಪಿಕೊಳ್ಳಬೇಕು: ದಿನೇಶ್ ಗುಂಡೂರಾವ್

ತನಿಖೆಯಲ್ಲಿ ಸತ್ಯ ಬಯಲು:
ಶಿವಶಂಕರ್‌ಗೆ ವಿನಯ್ ಎಂಬ ಸ್ನೇಹಿತನಿದ್ದನು. ಆರೋಪಿ ವಿನಯ್ ತುಮಕೂರಿನ ಹುಣಸಮಾರನ ಹಳ್ಳಿಯವನು. ಕಳೆದ ವರ್ಷ ವಿನಯ್ ತನ್ನ ಪತ್ನಿಯ ಶೀಲ ಶಂಕಿಸಿ ಕೊಲೆ ಮಾಡಿ ಆತ್ಮಹತ್ಯೆ ಎಂದು ಹೇಳಿ ಬಿಂಬಿಸಿದ್ದನು. ವಿನಯ್ ಪತ್ನಿಯನ್ನು ಕೆರೆಗೆ ತಳ್ಳಿ ಕೊಲೆ ಮಾಡಿ ಆತ್ಮಹತ್ಯೆ ಎಂದು ಬಿಂಬಿಸಿ ಎಲ್ಲರನ್ನು ನಂಬಿಸಿದ್ದನು. ಈ ಪ್ರಕರಣದಲ್ಲಿ ವಿನಯ್ ಯಾವುದೇ ಅನುಮಾನ ಬಾರದಂತೆ ತಪ್ಪಿಸಿಕೊಂಡಿದ್ದ. ಇದನ್ನೂ ಓದಿ: ಐಪಿಎಸ್‌ ಪ್ರತಾಪ್ ರೆಡ್ಡಿ ದಿಢೀರ್‌ ರಾಜೀನಾಮೆ – ನಿವೃತ್ತಿಗೆ ಎರಡು ತಿಂಗಳು ಬಾಕಿ ಇರುವಾಗ ಗುಡ್‌ಬೈ

Murder 1

ಇದೇ ರೀತಿ ಶಿವಶಂಕರ್‌ಗೂ ಪತ್ನಿ ಮೇಲೆ ಅನುಮಾನವಿತ್ತು. ಅದೇ ಕಾರಣಕ್ಕೆ ಮನೆಯ ಎಲ್ಲಾ ಕಡೆಗಳಲ್ಲೂ ಸಿಸಿಟಿವಿ ಹಾಕಿಸಿದ್ದನು. ಪತ್ನಿಯ ಮೇಲೆ ಇರುವ ಅನುಮಾನದ ಬಗ್ಗೆ ಶಿವಶಂಕರ್ ವಿನಯ್‌ಗೆ ತಿಳಿಸಿದ್ದಾನೆ. ಆಗ ವಿನಯ್ ನಾನು ಪತ್ನಿಯನ್ನು ಯಾವ ರೀತಿ ಕೊಲೆ ಮಾಡಿ ತಪ್ಪಿಸಿಕೊಂಡಿದ್ದೇ ಎಂಬುದನ್ನು ಹೇಳಿದ್ದಾನೆ. ಈ ಮಾತು ಕೇಳಿದ ಶಿವಶಂಕರ್ ನನ್ನ ಹೆಂಡತಿಯನ್ನು ನೀನೇ ಕೊಲೆ ಮಾಡಬೇಕು. ಆದರೆ ಒಬ್ಬನೇ ಕೊಲೆ ಮಾಡಲು ನನ್ನಿಂದ ಸಾಧ್ಯವಿಲ್ಲ ಎಂದಿದ್ದಾನೆ. ಬಳಿಕ ವಿನಯ್‌ಗೆ ನೀನು ಕೊಲೆ ಮಾಡು ನಾನು ಸಹಾಯ ಮಾಡುತ್ತೇನೆ ಎಂದು ಶಿವಶಂಕರ್ ಸುಪಾರಿ ನೀಡಿ ಇಬ್ಬರು ಕೊಲೆಗೆ ಸಂಚು ರೂಪಿಸಿದ್ದರು. ಇದನ್ನೂ ಓದಿ: ಚೌಧರಿ ಚರಣ್ ಸಿಂಗ್, ಪಿವಿ ನರಸಿಂಹ ರಾವ್‌, ಸ್ವಾಮಿನಾಥನ್‌ಗೆ ಭಾರತ ರತ್ನ

ಪ್ಲ್ಯಾನ್ ಪ್ರಕಾರ ವಿನಯ್ ಮಂಗಳವಾರ ಕೊಲೆ ಮಾಡಲು ಶಿವಶಂಕರ್ ಮನೆಗೆ ಬಂದಿದ್ದ. ಶಿವಶಂಕರ್ ಅಂದು ಮನೆಯಲ್ಲಿದ್ದ ಎಲ್ಲ ಸಿಸಿಟಿವಿಗಳನ್ನು ಆಫ್ ಮಾಡಿ ಹೋಗಿದ್ದ. ಬಳಿಕ ಮನೆಗೆ ಬಂದ ವಿನಯ್ ಪ್ರೇಮಲತಾ ಅವರ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ನಂತರ ಮೃತದೇಹವನ್ನು ನೇಣು ಹಾಕಿ ಸ್ಥಳದಿಂದ ಪರಾರಿಯಾಗಿದ್ದಾನೆ. ಬಳಿಕ ಮನೆಗೆ ಬಂದ ಶಿವಶಂಕರ್ ಪತ್ನಿ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದಾಳೆ ಎಂದು ಬಿಂಬಿಸಿಲು ಪ್ರಯತ್ನಿಸಿದ್ದ,. ಆದರೆ ಇದೀಗ ಆರೋಪಿಗಳು ಪೊಲೀಸರ ಬಲೆಗೆ ಬಿದ್ದಿದ್ದಾರೆ. ಮಹಾಲಕ್ಷ್ಮಿ ಲೇಔಟ್ ಪೊಲೀಸರು ಆರೋಪಿಗಳನ್ನು ಬಂಧಿಸಿ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಅಪ್ರಾಪ್ತೆ ಜೊತೆ ಡ್ಯಾನ್ಸ್ ಮಾಸ್ಟರ್ ಫೋಟೋ – ಭಜರಂಗದಳದ ಕಾರ್ಯಕರ್ತರಿಂದ ಹಲ್ಲೆ 7 ಜನ ಅರೆಸ್ಟ್

Share This Article