– ಡ್ಯಾನ್ಸ್ ಮಾಸ್ಟರ್ ವಿರುದ್ಧ ಪೋಕ್ಸೋ ಪ್ರಕರಣ
ಚಿಕ್ಕಮಗಳೂರು: ಲವ್ ಜಿಹಾದ್ ವಿಚಾರವಾಗಿ ಡ್ಯಾನ್ಸ್ ಮಾಸ್ಟರ್ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ 7 ಜನ ಭಜರಂಗದಳ ಕಾರ್ಯಕರ್ತರನ್ನು ಆಲ್ದೂರು (Alduru) ಪೊಲೀಸರು (Police) ಬಂಧಿಸಿದ್ದಾರೆ.
Advertisement
ಉಜಿರೆಯ ಖಾಸಗಿ ಕಾಲೇಜಿನ ಡ್ಯಾನ್ಸ್ ಮಾಸ್ಟರ್ ಆಗಿರುವ ಮುಸ್ಲಿಂ ಯುವಕ ರೂಮನ್ ಎಂಬಾತ ಅಪ್ರಾಪ್ತೆಯ ಜೊತೆ ಸುತ್ತಾಡುತ್ತಿದ್ದ. ಯುವಕನ ಜೊತೆ ಅಪ್ರಾಪ್ತೆಯ ಫೋಟೋಗಳು ಹಾಗೂ ವೀಡಿಯೋಗಳು ವೈರಲ್ ಆಗಿದ್ದವು. ಇದೇ ಕಾರಣಕ್ಕೆ ಭಜರಂಗದಳದ ಕಾರ್ಯಕರ್ತರು ಆತನ ಮೇಲೆ ಗುರುವಾರ ಹಲ್ಲೆ ನಡೆಸಿದ್ದರು ಎನ್ನಲಾಗಿದೆ. ಇದೀಗ ಭಜರಂಗದಳ ಜಿಲ್ಲಾ ಸಂಚಾಲಕ ಸಿಡಿ ಶಿವಕುಮಾರ್, ಸ್ವರೂಪ್ ಕಾರ್ತಿಕ್, ಮಧು, ರಂಜಿತ್ ಮತ್ತು ಪರೀಕ್ಷಿತ್ ಪ್ರಜ್ವಲ್ ಎಂಬವರನ್ನು ಆಲ್ದೂರು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಹದಿಹರೆಯದವರ ಮದ್ಯ ನಶೆಗೆ ಅಡ್ಡಾದಿಡ್ಡಿ ಓಡಿದ ಕಾರ್ – ಎಂಟು ಬೈಕ್‌ಗಳು ಜಖಂ
Advertisement
Advertisement
ಆಲ್ದೂರು ಸಮೀಪದ ಗಾಳಿಗಂಡಿಯ ಯುವಕ ರೂಮನ್, ತನ್ನನ್ನು ಭಜರಂಗ ದಳದ ಕಾರ್ಯಕರ್ತರು ಆಲ್ದೂರಿಗೆ ಕರೆಸಿ ಬಳಿಕ ಅಪಹರಿಸಿ ಹಲ್ಲೆ ನಡೆಸಿದ್ದಾರೆ ಎಂದು ದೂರು ದಾಖಲಿಸಿದ್ದ. ಅಲ್ಲದೇ ಇದೀಗ ಡ್ಯಾನ್ಸ್ ಮಾಸ್ಟರ್ ರೂಮನ್ ವಿರುದ್ಧ ಸಹ ಬಾಲಕಿಯ ಪೋಷಕರು ಆಲ್ದೂರು ಪೊಲೀಸ್ ಠಾಣೆಯಲ್ಲಿ ಪೋಕ್ಸೋ (POCSO) ಪ್ರಕರಣ ದಾಖಲಿಸಿದ್ದಾರೆ.
Advertisement
ಮುಂಜಾಗ್ರತಾ ಕ್ರಮವಾಗಿ ಆಲ್ದೂರು ಪಟ್ಟಣದಲ್ಲಿ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದಾರೆ. ಇದನ್ನೂ ಓದಿ: ನಟಿ ಸೋನಾಕ್ಷಿ ಟೀಮ್ ವಿರುದ್ಧ ಜಾಮೀನು ರಹಿತ ವಾರೆಂಟ್