ವಿಜಯಪುರ: ರಾತ್ರಿಯಿಡಿ ಭಾರೀ ಮಳೆ (Heavy Rain) ಸುರಿದ ಪರಿಣಾಮ ಮನೆಯ ಮೇಲ್ಛಾವಣಿ (Roof) ಕುಸಿದು ಮನೆಯಲ್ಲಿ ಮಲಗಿದ್ದ ಗೃಹಿಣಿ ಸಾವನ್ನಪ್ಪಿದ ಘಟನೆ ವಿಜಯಪುರದಲ್ಲಿ ನಡೆದಿದೆ.
ವಿಜಯಪುರ ಜಿಲ್ಲೆ ತಿಕೋಟಾ ತಾಲೂಕಿನ ಬಾಬಾನಗರದಲ್ಲಿ ಘಟನೆ ನಡೆದಿದೆ. ಸಂಗೀತಾ ಗಂಡ ಬಾಳಾಸಾಹೇಬ ಪಾಟೀಲ್ (30) ಮೃತ ಮಹಿಳೆ. ಇದನ್ನೂ ಓದಿ: ಹನಿಮೂನ್ಗೆ ತೆರಳಿದ್ದ ದಂಪತಿ ನಾಪತ್ತೆ ಕೇಸ್ – ಪತ್ನಿ ಅರೆಸ್ಟ್
ಭಾನುವಾರ ತಡರಾತ್ರಿ ಮನೆಯಲ್ಲಿ ಮಲಗಿದ್ದಾಗ ಅವಘಡ ಸಂಭವಿಸಿದೆ. ಮಳೆಯಿಂದಾಗಿ ಮನೆ ಸೋರುತ್ತಿದ್ದ ವೇಳೆ ಮನೆಯಿಂದ ಎದ್ದು ಹೊರ ಬಂದು ಪತಿ ಹಾಗೂ ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ. ಆದರೆ ಗೃಹಿಣಿ ಸಂಗೀತಾ ಮೇಲೆ ಮೇಲ್ಛಾವಣಿ ಬಿದ್ದ ಕಾರಣ ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ. ತದನಂತರ ಸ್ಥಳೀಯರು ಮಣ್ಣಲ್ಲಿ ಮುಚ್ಚಿಹೋಗಿದ್ದ ಸಂಗೀತಾ ಮೃತದೇಹವನ್ನು ಹೊರತೆಗೆದಿದ್ದಾರೆ. ಇದನ್ನೂ ಓದಿ: ಎಕ್ಸ್ಪ್ರೆಸ್ ವೇಯಲ್ಲಿ ಕಾರುಗಳ ನಡುವೆ ಅಪಘಾತ – ಇಬ್ಬರು ಸಾವು, ನಾಲ್ವರು ಗಂಭೀರ
ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ತಿಕೋಟ ತಾಲೂಕು ಆಸ್ಪತ್ರೆಗೆ ರವಾನಿಸಲಾಗಿದೆ. ತಿಕೋಟಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ಹಾಸನ| ನಿಲ್ಲಿಸಿದ್ದ ಕಾರಿನ ಡೋರ್ ತೆಗೆದು 6.30 ಲಕ್ಷ ಹಣ ಎಗರಿಸಿದ ಕಳ್ಳ