ಬೆಂಗಳೂರು: ಡೀಸೆಲ್ ರೇಟ್ ಜಾಸ್ತಿ ಆಯ್ತು. ಪೆಟ್ರೋಲ್ ಕೂಡ ದಿನನಿತ್ಯ ದರ ಹೆಚ್ಚಾಗುತ್ತಾನೆ ಇದೆ. ಇದರ ಜೊತೆ ಗ್ಯಾಸ್ ಸಿಲಿಂಡರ್ ದರ ಕೂಡ ಜಾಸ್ತಿ ಆಗಿದೆ. ಮನೆಯಲ್ಲಿ ಯಾರ್ ಅಡುಗೆ ಮಾಡಿ ಊಟ ಮಾಡ್ತಾರೆ ಅಂತ ಹೋಟೆಲ್‍ಗೆ ಹೋದ್ರೆ ಅಲ್ಲೂ ನಿಮ್ಮ ನಾಲಿಗೆ ಸುಡೋದು ಗ್ಯಾರಂಟಿ.
ನಮ್ಮ ಬೆಂಗಳೂರು ಮಂದಿ ವೀಕೆಂಡ್ ಬಂದರೆ ಮನೆಯಲ್ಲಿ ಗ್ಯಾಸ್ ಹಚ್ಚೋದು ಬಹುತೇಕ ಕಡಿಮೆ. ಬೆಳ್ಳಂಬೆಳಗ್ಗೆ ಬೇಗ ಎದ್ದು ತಿಂಡಿ ರೆಡಿ ಮಾಡೋದ್ಯಾರು ಅಂತ ಹೋಟೆಲ್ ಕಡೆ ಹೋಗೋರೆ ಜಾಸ್ತಿ. ಇಂತವರು ಇನ್ಮುಂದೆ ಜೇಬಲ್ಲಿ ಸ್ವಲ್ಪ ಜಾಸ್ತಿ ದುಡ್ಡು ಇಟ್ಕೊಂಡು ಹೋಗಿ, ಯಾಕಂದ್ರೆ ಬೆಂಗಳೂರಿನ ಶೇ. 50 ರಷ್ಟು ಹೋಟೆಲ್‍ಗಳಲ್ಲಿ ಊಟ ತಿಂಡಿ ಬೆಲೆ ಸೈಲೆಂಟಾಗಿ ಐದು ರೂಪಾಯಿವರೆಗೆ ದರ ಹೆಚ್ಚಳ ಮಾಡಲಾಗಿದೆ.
Advertisement
ಎಷ್ಟು ಹೆಚ್ಚಳವಾಗಿದೆ?
ಈ ಮೊದಲು ಒಂದು ಪ್ಲೇಟ್ ಇಡ್ಲಿಗೆ 20 ರೂ. ಇತ್ತು. ಈಗ ಒಂದು ಪ್ಲೇಟ್ ಇಡ್ಲಿ 25 ರೂ.ಗೆ ಸಿಗುತ್ತದೆ. ಅಂತೆಯೇ ಉದ್ದಿನ ವಡೆ 20 ರೂ. ದಿಂದ 25 ರೂ, ರೈಸ್ ಬಾತ್ 30 ರಿಂದ 35ಕ್ಕೆ ಮತ್ತು 50 ರಿಂದ 55 ರೂ.ಗೆ ಏರಿಕೆ ಕಂಡಿದೆ.
Advertisement
Advertisement
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಹೋಟೆಲ್ ಮತ್ತು ರೆಸ್ಟೋರೆಂಟ್ ಮಾಲೀಕರ ಸಂಘದ ಅಧ್ಯಕ್ಷರು, ನಮ್ಮ ಸಂಘದ ಕಡೆಯಿಂದ ಯಾರಿಗೂ ದರ ಹೆಚ್ಚಳ ಮಾಡಿ ಅಂತ ಆದೇಶಿಸಿಲ್ಲ. ಆದರೆ ಅವರವರ ಖರ್ಚು ವೆಚ್ಚಗಳಿಗೆ ಅನುಗುಣವಾಗಿ ಈಗಾಗಳೇ ದರ ಹೆಚ್ಚಳ ಮಾಡಿಕೊಂಡಿದ್ದಾರೆ. ಅಲ್ಲದೇ ಸದ್ಯದ ವಾಣಿಜ್ಯ ಬಳಕೆ ಸಿಲಿಂಡರ್ ದರ ಹೆಚ್ಚಳ ಆಗ್ತಿರೋದ್ರಿಂದ ಊಟ ತಿಂಡಿ ದರ ಹೆಚ್ಚಳ ಅನಿವಾರ್ಯ ಎಂದು ಸಮರ್ಥಿಸಿಕೊಳ್ಳುತ್ತಾರೆ.
Advertisement
ಕಳೆದ ವರ್ಷಕ್ಕೆ ಹೋಲಿಸಿದರೆ ವಾಣಿಜ್ಯ ಬಳಕೆ ಗ್ಯಾಸ್ ದರ 500 ರಿಂದ 800 ರೂಪಾಯಿ ವರೆಗೆ ಹೆಚ್ಚಳವಾಗಿದೆ. ದಿನವೊಂದಕ್ಕೆ ಹತ್ತು ಸಿಲಿಂಡರ್ ಬಳಸುವ ಹೋಟೆಲ್‍ಗಳಿಗೆ ಏನಿಲ್ಲವೆಂದ್ರು ತಿಂಗಳಿಗೆ ಒಂದೂವರೆ ಲಕ್ಷ ದಷ್ಟು ಹೊರೆಯಾಗತ್ತೆ. ಇದನ್ನ ಗ್ರಾಹಕರ ಮೇಲೆ ಹೋಟೆಲ್ ಮಾಲೀಕರು ವಿಧಿಸುತ್ತಿದ್ದಾರೆ. ಈ ಬಗ್ಗೆ ಗ್ರಾಹಕರು ಅಸಹಾಯಕತೆ ವ್ಯಕ್ತಪಡಿಸ್ತಿದ್ದಾರೆ. ವಾರದಲ್ಲಿ ಒಂದಿನ ಫ್ಯಾಮಿಲಿ ಜೊತೆ ಹೊರಗೆ ಹೋಗಿ ಊಟ ಮಾಡೋಣ ಅಂದರೆ ಕಷ್ಟವಾಗುತ್ತಿದೆ ಅಂತಿದ್ದಾರೆ.
ಯಾವ ವಸ್ತುಗಳ ಬೆಲೆ ಹೆಚ್ಚಳವಾಗಲೀ ಅದರ ನೇರ ಎಫೆಕ್ಟ್ ತಟ್ಟೋದು ಜನಸಾಮಾನ್ಯರಿಗೆ ಅನ್ನೋದಂತೂ ಸತ್ಯ. ಸೋ ಜೇಬಲ್ಲಿ ಕಾಸು ಜಾಸ್ತಿ ಇದ್ದರೆ ಹೋಟೆಲ್ ಗೆ ಹೋಗಿ, ಇಲ್ಲ ಅಂದ್ರೆ ಮನೆಯಲ್ಲೆ ಅಡುಗೆ ಮಾಡಿಕೊಂಡು ಫ್ಯಾಮಿಲಿ ಜೊತೆ ಕೂತು ನೆಮ್ಮದಿ ಇಂದ ಊಟ ಮಾಡಿ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv