ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್‌ಗೆ (Gurukiran) ಬೆಂಗಳೂರು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಘೋಷಣೆ ಮಾಡಿದೆ. ನಾಳೆ ನಡೆಯಲಿರೋ ಬೆಂಗಳೂರು ವಿವಿಯ 59ನೇ ಘಟಿಕೋತ್ಸವದಲ್ಲಿ ಗುರುಕಿರಣ್ ಅವರಿಗೆ ಗೌರವ ಡಾಕ್ಟರೇಟ್ ನೀಡಿ ಸನ್ಮಾನಿಸಲಾಗುತ್ತದೆ ಅಂತ ಬೆಂಗಳೂರು ವಿವಿ ಕುಲಪತಿ ಡಾ.ಜಯಕರ್ ತಿಳಿಸಿದ್ದಾರೆ.
ಘಟಿಕೋತ್ಸವದ ಹಿನ್ನಲೆಯಲ್ಲಿ ಜ್ಞಾನಜ್ಯೋತಿ ಸಭಾಂಗಣದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಕಲೆ, ಸಂಗೀತ ಕ್ಷೇತ್ರದ ಸಾಧನೆಗೆ ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ಮತ್ತು ಕ್ರೀಡೆ, ಸಮಾಜ ಸೇವೆ ಕ್ಷೇತ್ರದಲ್ಲಿನ ಸಾಧನೆಗೆ ಕೆ.ಎಸ್.ರಾಜಣ್ಣ ರಾಜ್ಯ ಮಾಜಿ ಆಯುಕ್ತರು,ರಾಜ್ಯ ಅಂಗವಿಕಲ ವ್ಯಕ್ತಿಗಳ ಅಧಿನಿಯಮ, ಕರ್ನಾಟಕ ಸರ್ಕಾರ ಇವರಿಗೆ ಬೆಂಗಳೂರು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪದವಿ ಘೋಷಿಸಿದೆ ಅಂತ ತಿಳಿಸಿದರು. ಇದನ್ನೂ ಓದಿ:15 ವರ್ಷಗಳ ದಾಂಪತ್ಯಕ್ಕೆ ಅಂತ್ಯ- ಡಿವೋರ್ಸ್ ಬಗ್ಗೆ ಅಧಿಕೃತವಾಗಿ ತಿಳಿಸಿದ ಜಯಂ ರವಿ
ಈ ಬಾರಿ 31382 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗ್ತಿದೆ. 140 ಜನರಿಗೆ ಪಿಹೆಚ್‌ಡಿ ಪ್ರದಾನ ಮಾಡಲಾಗುತ್ತದೆ ಅಂತ ಮಾಹಿತಿ ನೀಡಿದ್ರು. ಕಾರಣಾಂತರಗಳಿಂದ ರಾಜ್ಯಪಾಲರು ನಾಳೆಯ ಘಟಿಕೋತ್ಸವಕ್ಕೆ ಗೈರಾಗಲಿದ್ದಾರೆ. ಯುಜಿಸಿಯ ವೈಸ್ ಚಾನ್ಸೆಲರ್ ಡಾ.ದೀಪಕ್ ಕುಮಾರ್ ಶ್ರೀವಾಸ್ತವ್ ಮುಖ್ಯ ಆತಿಥಿಗಳಾಗಿ ಭಾಗಿಯಾಗಲಿದ್ದಾರೆ ಅಂತ ಮಾಹಿತಿ ನೀಡಿದ್ರು.
ಸ್ನಾತಕೋತ್ತರ ವಿಭಾಗದಲ್ಲಿ ಅನ್ನಪೂರ್ಣ. ಎಸ್ ರಸಾಯನಶಾಸ್ತ್ರ ವಿಭಾಗ ಬೆಂಗಳೂರು ವಿವಿ 9 ಚಿನ್ನದ ಪದಕ,ವಿಶಾಲಾಕ್ಷಿ ವೈ.ಬಿ.- ತ್ರಿವೇಣಿ ಇನ್ಸ್ಟಿಟ್ಯೂಟ್ ಆಫ್ ಕಾಮರ್ಸ್ ಮತ್ತು ಮ್ಯಾನೇಜ್ಮೆಂಟ್ 6 ಚಿನ್ನದ ಪದಕ ಮತ್ತು ರಂಜಿತಾ.ಎಸ್- ಹಿಂದಿ ವಿಭಾಗ, ಬೆಂಗಳೂರು ವಿವಿ 5 ಚಿನ್ನದ ಪದಕ ಪಡೆದಿದ್ದಾರೆ. ಸ್ನಾತಕ ವಿಭಾಗದಲ್ಲಿ ಅನುರಾಧ ಬಿಎಸ್ಸಿ ಜಿಂದಾಲ್ ಪದವಿ ಮಹಿಳಾ ಕಾಲೇಜು 9 ಚಿನ್ನದ ಪದಕ. ರಂಜಿತ.ವಿ,ಬಿಕಾಂ,ತ್ರಿವೇಣಿ ಇನ್ಸ್ಟಿಟ್ಯೂಟ್ ಆಫ್ ಕಾಮರ್ಸ್ ಮತ್ತು ಮ್ಯಾನೇಜ್ಮೆಂಟ್ 6 ಚಿನ್ನದ ಪದಕ ಮತ್ತು ಮಾಧವ ಆರ್. ಕಾಮತ್ ಟೆಕ್ನಾಲಜಿ, ಮೆಕಾನಿಕಲ್ ಇಂಜಿನಿಯರಿಂಗ್ ವಿಭಾಗ, ಬೆಂಗಳೂರು ವಿವಿ 6 ಚಿನ್ನದ ಪದಕ ಪಡೆದಿದ್ದಾರೆ ಅಂತ ಮಾಹಿತಿ ನೀಡಿದರು.