– ಗುಂಡಿಯಲ್ಲಿಯೇ ಮೃತದೇಹ ಬಿಟ್ಟು ಪರಾರಿಯಾದ ಜನ!
ಬೆಂಗಳೂರು: ಶವ ಸಂಸ್ಕಾರಕ್ಕೆಂದು ತೆರಳಿದ್ದವರ ಮೇಲೆ ಹೆಜ್ಜೇನು ದಾಳಿ ಮಾಡಿದ ಪರಿಣಾಮ ಓರ್ವ ವ್ಯಕ್ತಿ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಕರ್ನಾಟಕ ತಮಿಳುನಾಡು ಗಡಿ ಕೆಂಪಟ್ಟಿಯಲ್ಲಿ ನಡೆದಿದೆ.
ಕೆಂಪಟ್ಟಿ ಗ್ರಾಮದ ನಿವಾಸಿ ರಾಜಪ್ಪ (55) ಮೃತ ದುರ್ದೈವಿ. ಈ ಘಟನೆಯಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಸೆಂಟ್ ಜಾನ್ ಆಸ್ಪತ್ರೆಗೆ ಸಾಗಿಸಲಾಗಿದೆ.
Advertisement
ಘಟನೆಯ ವಿವರ:
ಕೆಂಪಟ್ಟಿ ಗ್ರಾಮದ ನಿವಾಸಿ ರಾಮಕ್ಕ (102) ಮಂಗಳವಾರ ರಾತ್ರಿ ಮೃತಪಟ್ಟಿದ್ದರು. ಹೀಗಾಗಿ ಅವರ ಅಂತ್ಯಸಂಸ್ಕಾರವನ್ನು ಇಂದು ನೆರವೇರಿಸಲು ನಿರ್ಧರಿಸಲಾಗಿತ್ತು. ಆದರೆ ಶವ ಸಂಸ್ಕಾರಕ್ಕೆ ತೋಡಿದ್ದ ಗುಂಡಿಯ ಸಮೀಪದ ಮರದಲ್ಲಿ ಹೆಜ್ಜೇನು ಇತ್ತು. ಶವವನ್ನು ಹೊತ್ತು ಸ್ಮಶಾನಕ್ಕೆ ತರುವಾಗ ಪಟಾಕಿ ಹಾಗೂ ಹೂವಿನ ವಾಸನೆಗೆ ಜೇನು ಹುಳು ಎದ್ದ ಜನರ ಮೇಲೆ ದಾಳಿ ಮಾಡಿವೆ.
Advertisement
ಜೇನು ಹುಳು ಇಪ್ಪತ್ತಕ್ಕೂ ಹೆಚ್ಚು ಜನರ ಮೇಲೆ ದಾಳಿ ಮಾಡಿದ್ದು, ಓರ್ವ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಘಟನೆಯಿಂದಾಗಿ ಶವವನ್ನು ಗುಂಡಿಯಲ್ಲಿಯೇ ಬಿಟ್ಟು ಜನರು ಅಲ್ಲಿಂದಲೇ ಕಾಲ್ಕಿತ್ತಿದ್ದಾರೆ. ಗಾಯಾಳುಗಳನ್ನು ತಕ್ಷಣವೇ ಆನೇಕಲ್‍ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಆದರೆ ಇಬ್ಬರ ಸ್ಥಿತಿ ಚಿಂತಾಜನಕವಾಗಿದ್ದರಿಂದ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಸೆಂಟ್ ಜಾನ್ ಆಸ್ಪತ್ರೆಗೆ ಸಾಗಿಸಲಾಗಿದೆ. ಈ ಕುರಿತು ಮಾಹಿತಿ ಪಡೆದು ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv