ಬೆಂಗಳೂರು: ಬುಧವಾರ ರಾತ್ರಿ ಜಿಸಿ ನಗರದಲ್ಲಿ ದುಷ್ಕರ್ಮಿಗಳಿಂದ ಕೊಲೆಯಾದ ಸಂತೋಷ್ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಆರೋಪಿಸಿದ್ದಾರೆ.
ನಗರದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಸತ್ತ ಮೇಲೆ ಪಕ್ಷಕ್ಕೆ ಎಲ್ಲರನ್ನೂ ಸೇರಿಸುತ್ತಾರೆ. ಮೃತ ಸಂತೋಷ ಕೊಲೆಯಲ್ಲಿ ಬಿಜೆಪಿಯವರು ರಾಜಕೀಯ ಮಾಡುತ್ತಿದ್ದು. ಇದು ರಾಜಕೀಯ ಕೊಲೆ ಅಲ್ಲ, ವ್ಯವಹಾರಕ್ಕಾಗಿ ನಡೆದಿರುವ ಕೊಲೆಯಾಗಿದ್ದು ಮೃತ ಸಂತೋಷ್ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ ಮತ್ತು ಕುಟುಂಬ ಸದಸ್ಯನಿಗೆ ಉದ್ಯೋಗ ನೀಡುವುದಾಗಿ ತಿಳಿಸಿದರು.
Advertisement
Advertisement
ಮೃತ ಸಂತೋಷ್ ಹಾಗೂ ಆರೋಪಿಗಳು ಕಳೆದ ಐದು ವರ್ಷಗಳಿಂದ ಗೆಳೆಯರು. ಅವರ ಕೊಲೆ ವ್ಯವಹಾರಿಕ ಕಾರಣಗಳಿಂದ ನಡೆದಿದೆ. ನಮ್ಮ ಸರ್ಕಾರದ ಅವಧಿಯಲ್ಲಿ 66 ಕೊಲೆಗಳು ನಡೆದಿವೆ, ಬಿಜೆಪಿಯವರ ಸರ್ಕಾರದ ಅವಧಿಯಲ್ಲಿ 96 ಕೊಲೆ ನಡೆದಿದೆ. ಸಂತೋಷ ಪ್ರಕರಣ ಸಿಸಿಬಿಯಿಂದ ತನಿಖೆ ನಡೆಯಲಿದೆ. ತನಿಖೆ ನಡೆದ ನಂತರ ಸತ್ಯಾಂಶ ತಿಳಿಯಲಿದೆ ಎಂದರು.
Advertisement
ಬೆಂಗಳೂರು ಮಹಿಳೆ ಹಾಗೂ ಸಾರ್ವಜನಿಕರಿಗೆ ಸುರಕ್ಷಿತವಲ್ಲ ಎಂದು ಮಾಜಿ ಗೃಹ ಸಚಿವ ಆರ್ ಆಶೋಕ್ ಹೇಳಿಕೆ ನೀಡುತ್ತಾರೆ. ಆದರೆ ರಾಜ್ಯದಲ್ಲಿ ಕ್ರೈಂ ನಿಯಂತ್ರಿಸಬಹುದೇ ಹೊರತು ಸಂಪೂರ್ಣವಾಗಿ ನಿಲ್ಲಿಸಲು ಸಾಧ್ಯವಿಲ್ಲ. ಬೇಕಾದರೆ ಅವರು ದಾಖಲೆ ಇಟ್ಟುಕೊಂಡು, ಚಚೆ9 ಮಾಡಲು ಕರೆಯಬಹುದು ನಾವು ಚರ್ಚೆಗೆ ಸಿದ್ಧ ಎಂದು ಬಿಜೆಪಿ ನಾಯಕರಿಗೆ ಬಹಿರಂಗ ಸವಾಲ್ ಎಸೆದರು.
Advertisement
ಓವೈಸಿ ಜೊತೆ ನಾವು ಮಾತುಕತೆ ನಡೆಸಿಲ್ಲ ಎನ್ನುವ ಬಿಜೆಪಿ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ ನಾಯಕರು ಸುಳ್ಳು ಹೇಳಲ್ಲ, ಅವರು ಸತ್ಯಹರಿಶ್ಚಂದ್ರ ಮನೆಯವರು. ನಾನು ಅಶೋಕ್ ಅವರ ಡಿಎನ್‍ಎ ಟೆಸ್ಟ್ ಮಾಡಿಸಿದ್ದೀನಿ. ಅಶೋಕ್ ಸತ್ಯಹರಿಶ್ಚಂದ್ರ ಸಂಬಂಧಿಕರು ಡಿಎನ್‍ಎ ಟೆಸ್ಟ್ ಬಳಿಕ ಗೊತ್ತಾಗಿದೆ. ಅಶೋಕ್ ಸುಳ್ಳು ಹೇಳುವುದೇ ಇಲ್ಲ. ಅವರೊಬ್ಬರೇ ಸತ್ಯ ಹರಿಶ್ಚಂದ್ರರು. ಆದರೆ ನಾವು ಆಗಾಗ ಸ್ಪಲ್ಪ ಸುಳ್ಳು ಹೇಳುತ್ತೇವೆ ಎಂದು ವ್ಯಂಗ್ಯ ಮಾಡಿದರು. ಇದನ್ನೂ ಓದಿ: ಬಂಟಿಂಗ್ಸ್ ಗಲಾಟೆಗೆ ಬಿಜೆಪಿ ಕಾರ್ಯಕರ್ತ ಸಂತೋಷ್ ಕೊಲೆ: ಪ್ರತಾಪ್ ಸಿಂಹ
ಸಂತೋಷ್ ಬಿಜೆಪಿ ಕಾರ್ಯಕರ್ತನಲ್ಲ ಎನ್ನುವ ಸುದ್ದಿಗಳು ಹರಿದಾಡಿತ್ತು. ಆದರೆ ಎರಡು ತಿಂಗಳ ಹಿಂದೆ ಸಂತೋಷ್ ಬಿಜೆಪಿ ಸದಸ್ಯನಾಗಿ ಸೇರ್ಪಡೆಯಾಗಿದ್ದರು ಎನ್ನುವ ವಿಚಾರ ತಿಳಿದು ಬಂದಿದೆ. ಇದನ್ನೂ ಓದಿ: ಈಗ ಉತ್ತರ ನೀಡದೇ ಇದ್ರೆ ಜನ ಉತ್ತರ ಕೊಡ್ತಾರೆ: ಸಿಎಂಗೆ ಡಿವಿಎಸ್ ಪಂಚ ಪ್ರಶ್ನೆ
https://www.youtube.com/watch?v=5tvjHPH30oI