ಸಿನಿಮಾದ ಕಂಟೆಂಟ್ ಮತ್ತು ಮೇಕಿಂಗ್ ಚೆನ್ನಾಗಿ ಇದ್ದರೆ ಖಂಡಿತವಾಗಿಯೂ ಜನರು ಚಿತ್ರಮಂದಿರಕ್ಕೆ ಬರುತ್ತಾರೆ. ಅದಕ್ಕೆ ಲೇಟೆಸ್ಟ್ ಉದಾಹರಣೆ ಎಂದರೆ, ಆಪನ್ ಹೈಮರ್ ಸಿನಿಮಾ ಸಾಕ್ಷಿಯಾಗಿದೆ. ಹಾಲಿವುಡ್‌ನ ಈ ಚಿತ್ರಕ್ಕಾಗಿ ಜನರು ಮುಗಿಬಿದ್ದು ಟಿಕೆಟ್ ಬುಕ್ ಮಾಡುತ್ತಿದ್ದಾರೆ. ಕ್ರಿಸ್ಟೋಫರ್ ನೋಲನ್ ನಿರ್ದೇಶನದ ‘ಆಪನ್ ಹೈಮರ್’ (Oppen Heimer) ಸಿನಿಮಾ ಜುಲೈ 21ರಂದು ತೆರೆಗೆ ಅಬ್ಬರಿಸುತ್ತಿದೆ. ಕೆಲವು ಕಡೆಗಳಲ್ಲಿ ಟಿಕೆಟ್ ಬೆಲೆ ದುಬಾರಿ ಆಗಿದೆ. ಚಿತ್ರದ ಟಿಕೆಟ್‌ಗೆ 2 ಸಾವಿರ ರೂ. ಕೊಟ್ಟು ಖರೀದಿ ಮಾಡ್ತಿದ್ದಾರೆ.
Advertisement
ಹಾಲಿವುಡ್‌ನ ಪ್ರತಿಭಾನ್ವಿತ ಡೈರೆಕ್ಟರ್ ಕ್ರಿಸ್ಟೋಫರ್ ನೋಲನ್ (Christopher Nolan) ಅವರು ಅಭಿಮಾನಿಗಳಿಗೆ ಹೊಸತನ ನೀಡುತ್ತಾರೆ. ಮೇಕಿಂಗ್ ವಿಚಾರದಲ್ಲಿ ಅವರು ಎಂದಿಗೂ ಕಾಂಪ್ರಮೈಸ್ ಆಗದೇ ಹೊಸ ವಿಚಾರವನ್ನೇ ತಮ್ಮ ಸಿನಿಮಾದಲ್ಲಿ ತೋರಿಸುತ್ತಾರೆ. ಹಾಗಾಗಿ ಕ್ರಿಸ್ಟೋಫರ್ ನೋಲನ್ ನಿರ್ದೇಶನ ಮಾಡಿರುವ ‘ಆಪನ್ ಹೈಮರ್’ ಸಿನಿಮಾ ಮೇಲೆ ದೊಡ್ಡ ಮಟ್ಟದ ನಿರೀಕ್ಷೆಯಿದೆ.
Advertisement
Advertisement
ಈ ಸಿನಿಮಾದಲ್ಲಿ ಕಿಲಿಯನ್ ಮರ್ಫಿ, ರಾಬರ್ಟ್ ಡೌನಿ ಜೂನಿಯರ್, ಎಮಿಲಿ ಬ್ಲಂಟ್, ಮ್ಯಾಟ್ ಡೇಮನ್ ಅನೇಕರು ಅಭಿನಯಿಸಿದ್ದಾರೆ. ಜೆ.ರಾಬರ್ಟ್ ‘ಆಪನ್ ಹೈಪರ್’ ಅವರ ಪಾತ್ರವನ್ನು ಕಿಲಿಯನ್ ಮರ್ಫಿ ನಿಭಾಯಿಸಿದ್ದಾರೆ. ರಾಬರ್ಟ್ ಡೌನಿ ಜೂನಿಯರ್ ಅವರು ಡಿಫರೆಂಟ್ ಗೆಟಪ್‌ನಲ್ಲಿ ಬರುತ್ತಿದ್ದಾರೆ. ಟ್ರೈಲರ್‌ಗೆ ನೋಡಿ ಫ್ಯಾನ್ಸ್ ಫಿದಾ ಅಗಿದ್ದಾರೆ. ಹಾಗಾಗಿ ಸಿನಿಮಾ ಬಗ್ಗೆ ಕೌತುಕ ಮೂಡಿದೆ. ಈಗಾಗಲೇ ಲಕ್ಷಾಂತರ ಟಿಕೆಟ್‌ಗಳು ಭಾರತದಲ್ಲಿ ಸೋಲ್ಡ್ ಔಟ್ ಆಗಿದೆ.
Advertisement
2ನೇ ಮಹಾಯುದ್ಧದಲ್ಲಿ ಅಮೆರಿಕವು ಜಪಾನ್ ಮೇಲೆ 2 ಬಾರಿ ಆಟಂ ಬಾಂಬ್ ಹಾಕಿತ್ತು. ಅದರ ಹಿಂದಿರುವ ವಿವರಗಳನ್ನು ‘ಆಪನ್ ಹೈಮರ್’ ಸಿನಿಮಾದಲ್ಲಿ ತೋರಿಸಲಾಗುತ್ತಿದೆ. ಬೆಂಗಳೂರು ಮಾತ್ರವಲ್ಲದೇ ದೆಹಲಿ, ಮುಂಬೈನಲ್ಲೂ ಈ ಚಿತ್ರದ ಕ್ರೇಜ್ ಜೋರಾಗಿದೆ. ಟಿಕೆಟ್‌ಗಳು ಸೋಲ್ಡ್ ಔಟ್ ಆಗಿದೆ. ಒಂದು ವರದಿ ಪ್ರಕಾರ, ಮುಂಬೈನ ಕೆಲವು ಮಲ್ಟಿಫ್ಲೆಕ್ಸ್‌ನಲ್ಲಿ ಮೊದಲ ದಿನದ ಟಿಕೆಟ್‌ಗಳು 2,450 ರೂಪಾಯಿಗೆ ಸೇಲ್ ಆಗಿದೆ. ಬೆಂಗಳೂರಿನ ಪಿವಿಆರ್‌ನಲ್ಲಿ 2 ಸಾವಿರಕ್ಕೆ ಟಿಕೆಟ್ ಸೇಲ್ ಆಗುತ್ತಿದೆ.