ಭಾರತೀಯ ಪುರುಷರ ಹಾಕಿ ತಂಡವು ಶನಿವಾರದ ನಡೆದ ಪುರುಷರ ಹಾಕಿ ಫೈವ್ಸ್ (Asian Hockey 5s WC Qualifiers) ಏಷ್ಯಾಕಪ್ 2023ರ ಫೈನಲ್ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನ ಬಗ್ಗುಬಡಿದಿದೆ. ಈ ಮೂಲಕ ಭಾರತ ಎಫ್‌ಐಎಚ್ ಪುರುಷರ ಹಾಕಿ-5 ವಿಶ್ವಕಪ್-2024 ಟೂರ್ನಿಗೆ ಅರ್ಹತೆ ಪಡೆದುಕೊಂಡಿದೆ.
Here are your winners ???? ????
Congratulations to the Indian Men’s team for defeating arch rivals Pakistan and clinching Gold at the Men’s Hockey5s Asia Cup 2023.#HockeyIndia #IndiaKaGame #Hockey5s pic.twitter.com/cs98rJFhJX
— Hockey India (@TheHockeyIndia) September 2, 2023
Advertisement
ಫೈನಲ್ ಪಂದ್ಯ ಕೊನೆಯವರೆಗೂ ರೋಚಕತೆಯಿಂದ ಕೂಡಿತ್ತು, ಇತ್ತಂಡಗಳೂ ಕೂಡ 4-4 ಗೋಲುಗಳನ್ನು ಬಾರಿಸಿ ಪಂದ್ಯದ ಮುಕ್ತಾಯದಲ್ಲಿ ಸಮಬಲ ಸಾಧಿಸಿದ್ದವು. ಹೀಗಾಗಿ ಪೆನಾಲ್ಟಿ ಶೂಟೌಟ್ ಮೂಲಕ ವಿಜೇತರನ್ನು ಘೋಷಿಸಲಾಯ್ತು. ಶೂಟೌಟ್ ಮೂಲಕ ಭಾರತವು 2 ಗೋಲುಗಳನ್ನು ಕಲೆಹಾಕಿತು. ಹೀಗಾಗಿ ಅಂತಿಮವಾಗಿ ಪಾಕಿಸ್ತಾನವನ್ನ 6-4 ಗೋಲುಗಳಿಂದ ಸೋಲಿಸಿದ ಭಾರತವು, ಏಷ್ಯನ್ ಹಾಕಿ ಫೈವ್ಸ್ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು. ಇದನ್ನೂ ಓದಿ: Asia Cup 2023: ಮಳೆಗೆ ಜಯ, ಭಾರತ-ಪಾಕ್ ಪಂದ್ಯ ರದ್ದು – ಸೂಪರ್-4ಗೆ ಹಾರಿದ ಪಾಕ್
Advertisement
Advertisement
ಇದರೊಂದಿಗೆ ಹಾಕಿ ಫೈವ್ಸ್ ಮಾದರಿಯಲ್ಲಿ ನಡೆದ ಮೂರು ಪಂದ್ಯಗಳಲ್ಲಿ ಭಾರತ ಪಾಕಿಸ್ತಾನವನ್ನು ಸೋಲಿಸಿದ ಇತಿಹಾಸವನ್ನೂ ಭಾರತ ತಂಡ ಬರೆಯಿತು. ಮೊದಲಾರ್ಧ ಮುಕ್ತಾಯದ ವೇಳೆಗೆ 2-4 ಅಂತರದಲ್ಲಿ ಹಿನ್ನಡೆಯಲ್ಲಿದ್ದ ಭಾರತ ಮುಕ್ತಾಯದ ವೇಳೆಗೆ ಸಮಬಲ ಸಾಧಿಸುವಲ್ಲಿ ಯಶಸ್ವಿಯಾಯಿತು. ಆದ್ದರಿಂದ ಪೆನಾಲ್ಟಿ ಶೂಟೌಟ್ ಮೊರೆಹೋಗಲಾಯಿತು. ಇದನ್ನೂ ಓದಿ: Asia Cup 2023: ಕೈಕೊಟ್ಟ ಕೊಹ್ಲಿ, ರೋಹಿತ್, ಗಿಲ್ – ಪಾಕಿಸ್ತಾನಕ್ಕೆ 267 ರನ್ ಗುರಿ ನೀಡಿದ ಭಾರತ
Advertisement
Web Stories