ಬೆಂಗಳೂರು: ಚೀನಾದಲ್ಲಿ (China) ಮತ್ತೆ ಮೆಡಿಕಲ್ ಎಮರ್ಜೆನ್ಸಿ ಶುರುವಾಗಿದ್ದು, ಇಡೀ ವಿಶ್ವವೇ ಮತ್ತೆ ಕೋವಿಡ್ ರೀತಿಯ ಭಯದಲ್ಲಿದೆ. ಈಗ ನಮ್ಮ ದೇಶದಲ್ಲೂ ಅದೇ ಮಾದರಿಯ ವೈರಸ್ ಪತ್ತೆಯಾಗಿದ್ದು, ಸಿಲಿಕಾನ್ ಸಿಟಿಯ ಮಕ್ಕಳಿಬ್ಬರಿಗೆ ಹೆಚ್‌ಎಂಪಿವಿ (HMPV) ವೈರಸ್ ದೃಢವಾಗಿದೆ. ಈ ಹಿನ್ನೆಲೆ ಮಕ್ಕಳ ತಜ್ಞರು ಪೋಷಕರಿಗೆ ಎಚ್ಚರಿಕೆ ನೀಡಿದ್ದಾರೆ.
ಹೆಚ್‌ಎಂಪಿ ವೈರಸ್ ಬಗ್ಗೆ ವೈದ್ಯಕೀಯ ಲೋಕ ಆತಂಕಗೊಂಡಿದೆ. ಚೀನಾದಲ್ಲಿ ಶುರುವಾಗಿರುವ ಈ ಹೆಚ್ಎಂಪಿ ವೈರಸ್ ಹೊಸ ವೇರಿಯಂಟಾ? ಅದರ ಪರಿಣಾಮವೇನು ಎಂಬ ಬಗ್ಗೆ ಮಾಹಿತಿ ಪಡೆಯುತ್ತಿದ್ದರೆ, ಇದೇ ವೈರಸ್ ಬೆಂಗಳೂರಿನ ಇಬ್ಬರು ಮಕ್ಕಳಲ್ಲಿ ಇರೋದು ಧೃಡ ಪಟ್ಟಿದೆ. ಇದನ್ನೂ ಓದಿ: “ಕಷ್ಟದಲ್ಲಿದ್ರೂ ತಂದೆ, ತಾಯಿ ಮಾತನಾಡ್ತಿಲ್ಲ, ಕಾಲ್ ಮಾಡಿದ್ರೂ ಕಟ್ ಮಾಡ್ತಿದ್ರು” – ಟೆಕ್ಕಿ ಅನೂಪ್ ಡೆತ್‌ನೋಟ್‌ನಲ್ಲಿ ಏನಿದೆ?
ಈ ವೈರಸ್ ಹೊಸದಲ್ಲ. 2001ರಿಂದಲೇ ಇದ್ದು ಅತಂಹ ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಲಾಗುತ್ತಿದೆ. ಆದರೆ ಇದು ಮತ್ತೊಂದು ಪ್ಯಾಂಡಮಿಕ್ ಆಗಿಬಿಡುವ ಸಾಧ್ಯತೆಗಳು ಹೆಚ್ಚಾಗಿದ್ದು, ಸರ್ಕಾರ ಈಗಾಗಲೇ ಮುನ್ನೆಚ್ಚರಿಕೆವಹಿಸುವಂತೆ ಸೂಚಿಸಿದೆ. ಇದು ಮಕ್ಕಳ ಮೇಲೆ ಬೇಗ ಪರಿಣಾಮ ಬೀರುವ ವೈರಸ್ ಆಗಿದ್ದು, ಮಕ್ಕಳ ಆರೋಗ್ಯದ ಬಗ್ಗೆ ಮುಂಜಾಗ್ರತೆಯನ್ನ ಪೋಷಕರು ವಹಿಸಲೇಬೇಕು ಎಂದು ಮಕ್ಕಳ ತಜ್ಞರು ತಿಳಿಸಿದ್ದಾರೆ. ಇದನ್ನೂ ಓದಿ: ಫೆ.10 ರಿಂದ ಬೆಂಗಳೂರಿನಲ್ಲಿ `ಏರೋ ಇಂಡಿಯಾ 2025′ – ಏಷ್ಯಾದ ಅತಿದೊಡ್ಡ ಏರ್ ಶೋ!
ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುವ ಕಾರಣದಿಂದ ಈ ವೈರಸ್ ಸೋಂಕಿಗೆ ಒಳಗಾಗುವ ಸಾಧ್ಯತೆ ದಟ್ಟವಾಗಿದೆ. ನೆಗಡಿ, ಕೆಮ್ಮು, ಜ್ವರ, ಮೈಕೈ ನೋವು, ಉಸಿರಾಟದ ಸಮಸ್ಯೆ, ಸುಸ್ತು ಈ ವೈರಸ್‌ನಿಂದ ಉಂಟಾಗುವ ಪರಿಣಾಮವಾಗಿದೆ. ಹಾಗಾಗಿ ಮಕ್ಕಳಲ್ಲಿ ಈ ರೋಗ ಲಕ್ಷಣಗಳು ಕಂಡು ಬಂದರೆ ವೈದ್ಯರ ಬಳಿ ಕರೆದುಕೊಂಡು ಹೋಗುವಂತೆ ತಜ್ಞರು ಸೂಚಿಸಿದ್ದಾರೆ. ಜೊತೆಗೆ ಮೂರು ಅಥವಾ ಐದು ದಿನಗಳಲ್ಲಿ ಕಡಿಮೆ ಆಗದೇ ಇದ್ದರೆ ಹೆಚ್ಚಿನ ನಿಗ ವಹಿಸಬೇಕಾಗುತ್ತದೆ. ಇದನ್ನೂ ಓದಿ: ನಮ್ಮ ಸೈನಿಕರ ತ್ಯಾಗ ವ್ಯರ್ಥವಾಗಲ್ಲ, 2026ರ ಒಳಗೆ ನಕ್ಸಲಿಸಂ ಕೊನೆಗೊಳಿಸುತ್ತೇವೆ: ಮತ್ತೆ ಶಾ ಶಪಥ
ಮಕ್ಕಳ ತಜ್ಞರ ಸಲಹೆ ಏನು?
* ಶಾಲೆಯಲ್ಲಿ ಮಕ್ಕಳು ಎಚ್ಚರಿಕೆಯಿಂದ ಇರುವಂತೆ ನೋಡಿಕೊಳ್ಳಬೇಕು.
* ಆಹಾರದ ಬಗ್ಗೆ ಎಚ್ಚರಿಕೆವಹಿಸಿ (ಬಿಸಿಯಾದ ಆಹಾರವನ್ನೇ ನೀಡಿ)
* ತಂಪು ಪಾನೀಯಗಳನ್ನು ನೀಡಬೇಡಿ.
* ಆಗಾಗ ಕೈ ಮತ್ತು ಮುಖವನ್ನು ತೊಳೆಯುವ ಮೂಲಕ ಶುಚಿತ್ವವನ್ನು ಕಾಪಾಡಿಸಿ.
* ಮಾಸ್ಕ್ ಹಾಕಿಸೋದು ಉತ್ತಮ.
* ಬೆಚ್ಚನೆ ಬಟ್ಟೆಗಳನ್ನು ಹಾಕಿಸಿ.
* ಈ ರೋಗದ ಲಕ್ಷಣಗಳು ಇದ್ದವರಿಂದ ದೂರ ಇರಬೇಕು.
* ಒಬ್ಬರಿಂದ ಒಬ್ಬರಿಗೆ ಹರಡುವ ವೈರಸ್ ಆಗಿರುವುದರಿಂದ ಕೊರೋನಾ ಸಮಯದಲ್ಲಿ ಪಾಲಿಸಿದ ನಿಯಮಗಳನ್ನು ಮತ್ತೆ ಪಾಲಿಸಿ.