– 13ನೇ ಬಾರಿಗೆ ದ್ರೌಪದಮ್ಮನ ಕರಗ ಹೊತ್ತು ಸಾಗಿದ ಅರ್ಚಕ ಜ್ಞಾನೇಂದ್ರ
– ಕರಗ ಉತ್ಸವದಲ್ಲಿ ಗೋವಿಂದ ನಾಮಸ್ಮರಣೆ
ಬೆಂಗಳೂರು: ಜಗಮಗಿಸುತ್ತಿರೋ ವಿದ್ಯುತ್ ದೀಪಗಳು, ಖಡ್ಗ ಹಿಡಿದುಕೊಂಡು ನಿಂತಿದ್ದ ವೀರ ಕುಮಾರರು, ಬಣ್ಣ ಬಣ್ಣದ ಹೂವುಗಳಿಂದ ಅಲಂಕೃತಗೊಂಡ ತೇರುಗಳು, ಭಕ್ತಸಾಗರದಲ್ಲಿ ಗೋವಿಂದ ಗೋವಿಂದ ಉದ್ಗೋಷ, ಈ ದೃಶ್ಯಗಳು ಬೆಂಗಳೂರಿನ (Bengaluru) ತಿಗಳರ ಪೇಟೆಯಲ್ಲಿರೋ ಧರ್ಮರಾಯಸ್ವಾಮಿ ದೇವಸ್ಥಾನದ (Dharmaraya Swamy Temple) ಆವರಣದಲ್ಲಿ ನಡೆದ ಕರಗ ಮಹೋತ್ಸವದಲ್ಲಿ (Karaga Mahotsava) ಕಂಡು ಬಂದವು. ಚೈತ್ರ ಪೂರ್ಣಿಮೆ ಬೆಳದಿಂಗಳ ಬೆಳಕಲ್ಲಿ ವಿಶ್ವವಿಖ್ಯಾತ ಬೆಂಗಳೂರು ಕರಗ ಸಂಪನ್ನವಾಗಿದೆ.
Advertisement
ಧರ್ಮರಾಯಸ್ವಾಮಿ ದೇವಸ್ಥಾನದಿಂದ ಹೊರಟ ಕರಗ ಮೆರವಣಿಗೆ ಪೇಟೆ ಬೀದಿಗಳಲ್ಲಿ ಸಾಗಿ, ವಿವಿಧ ದೇವಸ್ಥಾನಗಳಲ್ಲಿ ಪೂಜೆ ಸ್ವೀಕರಿಸಿ, ಭಾವೈಕ್ಯತೆಯ ಸಂದೇಶ ಸಾರಿ ಮರಳಿ ದೇಗುಲ ಸೇರಿದೆ. ಇದನ್ನೂ ಓದಿ: ಸುಣ್ಣ ಬಣ್ಣ ಬಳಿದು ಮನೆ ಸ್ವಚ್ಛ – ಈ ಬಾರಿಯೂ ಅಮೇಠಿಯಿಂದ ರಾಹುಲ್ ಸ್ಪರ್ಧೆ?
Advertisement
Advertisement
ಬೆಂಗಳೂರು ಕರಗ ತನ್ನದೇ ಆದ ವಿಶಿಷ್ಟ ಇತಿಹಾಸ ಹೊಂದಿರೋ ಸಾಂಪ್ರದಾಯಿಕ ಸಂಭ್ರಮ. ಅದು ಒಂದಲ್ಲ, ಎರಡಲ್ಲ, ಬರೊಬ್ಬರಿ 8 ಶತಮಾನಗಳ ವೈಭವದ ಸಡಗರ. ಈ ಬಾರಿ ಕೂಡ ಆ ವೈಭವದ ಸಂಭ್ರಮ ಅದ್ಧೂರಿಯಾಗಿ ನೆರವೇರಿದ್ದು, ಸಾವಿರಾರು ಸಂಖ್ಯೆಯ ಭಕ್ತರು ಕರಗ ಕಣ್ತುಂಬಿಕೊಳ್ಳುವ ಮೂಲಕ ಪುನೀತರಾದರು. ಇದನ್ನೂ ಓದಿ: ಮಸ್ಕ್‌ಗೆ ಭಾರತದ ಮಾರುಕಟ್ಟೆ ಮೇಲೇಕೆ ಕಣ್ಣು?
Advertisement
ತಿಗಳರ ಪೇಟೆಯ ಧರ್ಮರಾಯ ಸ್ವಾಮಿ ದೇವಸ್ಥಾನದಲ್ಲಿ 10 ದಿನದಿಂದ ನಡೆದ ದ್ರೌಪದಿ ದೇವಿ ಕರಗಕ್ಕೆ ಕಳೆದ ರಾತ್ರಿ ವಿಶೇಷ ದಿನ. ಚೈತ್ರ ಪೂರ್ಣಿಮೆಯ ಈ ಮಧ್ಯರಾತ್ರಿ ಧರ್ಮರಾಯನ ದೇವಾಲಯದಿಂದ ಅರ್ಚಕ ಜ್ಞಾನೇಂದ್ರ ಕರಗವನ್ನು ಹೊತ್ತು ಹೊರಬರುತ್ತಿದ್ದಂತೆ ಅಲ್ಲಿ ಸೇರಿದ್ದ ಸಹಸ್ರಾರು ಜನರ ಉದ್ಘೋಷ ಮುಗಿಲು ಮುಟ್ಟಿತ್ತು. ಸರಿಯಾಗಿ 2 ಗಂಟೆಗೆ ಆರಂಭವಾದ ಕರಗ ಉತ್ಸವ ಪೇಟೆ, ಬೀದಿಗಳಲ್ಲಿ ಸಂಚರಿಸಿ, ಅನೇಕ ದೇವಾಲಯಗಳಲ್ಲಿ ಪೂಜೆ ಸ್ವೀಕರಿಸಿತು. ಹಾಗೆಯೇ ಮಸ್ತಾನ್ ದರ್ಗಾದಲ್ಲೂ ಪೂಜೆ ಸ್ವೀಕರಿಸಿ ಭಾವೈಕ್ಯತೆಯ ಸಂದೇಶ ಸಾರಿತು. ಇದೇ ವೇಳೆ ಧರ್ಮರಾಯ ಸ್ವಾಮಿ ದೇವಾಲಯಕ್ಕೆ ಸಿಎಂ ಕೂಡ ಭೇಟಿ ನೀಡಿ ದೇವಿ ದರ್ಶನ ಪಡೆದು, ಸಂಭ್ರಮಕ್ಕೆ ಸಾಕ್ಷಿಯಾದರು. ಇದನ್ನೂ ಓದಿ: ಕಾಂಗ್ರೆಸ್‌ನವ್ರಿಗೆ ಚೊಂಬು ಈಗಲೇ ಫಲಿತಾಂಶದ ರೂಪದಲ್ಲಿ ಕಾಣ್ತಿದೆ: ಅಮಿತ್ ಶಾ ತಿರುಗೇಟು
ದರ್ಗಾದಲ್ಲಿ ಪೂಜೆ ಸ್ವೀಕರಿಸಿ ಅಣ್ಣಮ್ಮ ದೇವಸ್ಥಾನ ತಲುಪಿದ ಕರಗ ಮೆರವಣಿಗೆ ಅಲ್ಲೂ ಪೂಜೆ ಸ್ವೀಕರಿಸಿತು. ಹೀಗೆ ಪೇಟೆ, ಬೀದಿಗಳ ದೇಗುಲಗಳಿಗೆ ತೆರಳಿ ಸಂಪ್ರದಾಯದಂತೆ ಪೂಜೆ ಸ್ವೀಕರಿಸಿದ ಕರಗ ಸೂರ್ಯೋದಯದ ನಂತರ ಮರಳಿ ಧರ್ಮರಾಯನ ದೇಗುಲ ಸೇರಿತು. ಒಟ್ಟಾರೆ ಕರಗ ಮಹೋತ್ಸವ ವರ್ಷದಿಂದ ವರ್ಷಕ್ಕೆ ತನ್ನ ಹಿರಿಮೆ ಹೆಚ್ಚಿಸಿಕೊಳ್ಳುತ್ತಲೇ ಇದ್ದು, ಈ ಬಾರಿ ಕೂಡ ಯಾವುದೇ ಸಮಸ್ಯೆಗಳಿಲ್ಲದೆ ಅಚ್ಚುಕಟ್ಟಾಗಿ ಕರಗೋತ್ಸವ ಅಂತ್ಯಗೊಂಡಿದೆ. ಇದನ್ನೂ ಓದಿ: ಮೋದಿಗೆ ಜನರ ಸಂಕಷ್ಟದ ಅರಿವಿಲ್ಲ: ಪ್ರಿಯಾಂಕಾ ಗಾಂಧಿ