– ವಿಧಾನಸೌಧದಲ್ಲಿ ಐತಿಹಾಸಿಕ ಕಾಮನ್ವೆಲ್ತ್ ಮಹಿಳಾ ಸಂಸದೀಯರ ಸಮ್ಮೇಳನ
ಬೆಂಗಳೂರು: ಶೀಘ್ರದಲ್ಲೇ 33% ಮಹಿಳಾ ಮೀಸಲಾತಿ(Women’s Reservation) ಜಾರಿಯಾಗಲಿದೆ ಎಂದು ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ( Om Birla) ಹೇಳಿದ್ದಾರೆ.
ರಾಜ್ಯದ ಶಕ್ತಿಸೌಧ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಇಂದು (ನ.17) ಮತ್ತು ನಾಳೆ ನಡೆಯಲಿರುವ ಎರಡು ದಿನಗಳ ಪ್ರತಿಷ್ಠಿತ ‘ಕಾಮನ್ವೆಲ್ತ್ ಮಹಿಳಾ ಸಂಸದೀಯರ ಸಮ್ಮೇಳನ’ (CWP)ಕ್ಕೆ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಚಾಲನೆ ನೀಡಿದರು. ಸಂಸತ್ ಹಾಲ್ ಮಾದರಿಯಲ್ಲಿ ಸಜ್ಜುಗೊಂಡಿರುವ ವೇದಿಕೆಯಲ್ಲಿ ದೇಶದ ವಿವಿಧ ರಾಜ್ಯಗಳ ಸುಮಾರು 300ಕ್ಕೂ ಹೆಚ್ಚು ಮಹಿಳಾ ಜನಪ್ರತಿನಿಧಿಗಳು ಪಾಲ್ಗೊಂಡಿದ್ದಾರೆ.
ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಲೋಕಸಭಾ ಸ್ಪೀಕರ್ ಓಂ ಬಿರ್ಲಾ, “12ನೇ ಶತಮಾನದಲ್ಲೇ ಕರ್ನಾಟಕದ ಅನುಭವ ಮಂಟಪದಲ್ಲಿ ಮಹಿಳಾ ಸಮಾನತೆ ಬಗ್ಗೆ ಚರ್ಚೆ ನಡೆಸಿ ಮಹಿಳೆಯರಿಗೆ ಅವಕಾಶ ನೀಡಲಾಗಿತ್ತು. ಈಗಾಗಲೇ ಪಂಚಾಯತಿಗಳಲ್ಲಿ ಮಹಿಳೆಯರಿಗೆ ಮೀಸಲಾತಿ ಇದೆ. ಅತೀ ಶೀಘ್ರದಲ್ಲೇ ವಿಧಾನಸಭೆ ಮತ್ತು ಲೋಕಸಭೆಯಲ್ಲೂ ಶೇ. 33ರಷ್ಟು ಮಹಿಳಾ ಮೀಸಲಾತಿ ಜಾರಿಯಾಗಲಿದ್ದು, ಪಂಚಾಯ್ತಿಯಿಂದ ಪಾರ್ಲಿಮೆಂಟ್ವರೆಗೂ ಮಹಿಳೆಯರಿಗೆ ಪ್ರಾತಿನಿಧ್ಯ ಸಿಕ್ಕಂತಾಗಲಿದೆ” ಎಂದರು.
ಮಹಿಳೆಯರ ಸಕ್ರಿಯ ಸಹಭಾಗಿತ್ವದಿಂದ ದೇಶದ ಪ್ರಜಾಪ್ರಭುತ್ವ ಮತ್ತಷ್ಟು ಬಲಗೊಳ್ಳಲಿದೆ. ಸ್ವಾತಂತ್ರ್ಯ ಹೋರಾಟದಿಂದ ಹಿಡಿದು ಇಂದಿನ ಸೇನೆ, ಅಂತರಿಕ್ಷ ಹಾಗೂ ದೇಶದ ಗಡಿ ಕಾಯುವವರೆಗೂ ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಾರೆ. ಪಂಚಾಯತಿಗಳಲ್ಲೂ ಎಐ (AI) ತಂತ್ರಜ್ಞಾನ ಬಳಕೆಯಾಗಬೇಕು ಮತ್ತು ಮಹಿಳಾ ಪ್ರತಿನಿಧಿಗಳು ಡಿಜಿಟಲ್ ಸಶಕ್ತರಾಗಬೇಕು. ಈ ಸಮ್ಮೇಳನ ಮಹಿಳಾ ಸಬಲೀಕರಣಕ್ಕೆ ಹೊಸ ಆಯಾಮ ನೀಡಲಿದೆ ಎಂದು ಓಂ ಬಿರ್ಲಾ ಅಭಿಪ್ರಾಯಪಟ್ಟರು.
ಟ್ಯಾಲೆಂಟ್ ಸಿಟಿ
ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್(DK Shivakumar), ಈ ಸಮ್ಮೇಳನ ಇತಿಹಾಸ ಸೇರಲಿದೆ. ಮಹಿಳೆಯರನ್ನು ಗೌರವಿಸುವುದು ನಮ್ಮ ಸಂಸ್ಕೃತಿ ಹಾಗೂ ಪ್ರತಿಯೊಬ್ಬರ ಯಶಸ್ಸಿನ ಹಿಂದೆ ಮಹಿಳೆ ಇರುತ್ತಾಳೆ. ಬೆಂಗಳೂರು ಕೇವಲ ಗಾರ್ಡನ್ ಸಿಟಿ ಮಾತ್ರವಲ್ಲ, ಟ್ಯಾಲೆಂಟ್ ಸಿಟಿ ಮತ್ತು ಅವಕಾಶಗಳ ನಗರ. 20 ವರ್ಷಗಳ ಹಿಂದೆ ನಾನು ನಗರಾಭಿವೃದ್ಧಿ ಸಚಿವನಾಗಿದ್ದಾಗ ಅಟಲ್ ಬಿಹಾರಿ ವಾಜಪೇಯಿ ಅವರು ‘ಮುಂದೊಂದು ದಿನ ವಿಶ್ವದ ನಾಯಕರು ಮೊದಲು ಬೆಂಗಳೂರಿಗೆ ಬಂದು ಆಮೇಲೆ ದೆಹಲಿಗೆ ಹೋಗುತ್ತಾರೆ’ ಎಂದಿದ್ದರು. ಇಂದು ನಮ್ಮಲ್ಲಿ 26 ಲಕ್ಷ ಐಟಿ ಉದ್ಯೋಗಿಗಳು ಹಾಗೂ 1 ಲಕ್ಷಕ್ಕೂ ಹೆಚ್ಚು ಪ್ಯಾರಾಮೆಡಿಕಲ್ ಸಿಬ್ಬಂದಿ ಇದ್ದು, ಅವರಲ್ಲಿ ಹೆಣ್ಣುಮಕ್ಕಳೇ ಹೆಚ್ಚಿದ್ದಾರೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.
First Commonwealth Women Parliamentarians (CWP) India Region Conference में सहभागिता के लिए Karnataka विधानमंडल भवन (Vidhana Soudha), Bengaluru पहुँचने पर राज्य के माननीय मुख्यमंत्री श्री D.K. Shivakumar, कर्नाटक विधान परिषद के माननीय सभापति श्री Saleem Ahmed, माननीय विधान सभा अध्यक्ष श्री G.S. Patil, CWP India Region की सभापति डॉ. D. Purandeswari एवं अन्य गणमान्यों द्वारा किए गए आत्मीय स्वागत से अभिभूत हूँ।
#CWPIndia #WomenInParliament
— Om Birla (@ombirlakota) November 17, 2026
ಇದೇ ವೇಳೆ ಬೆಂಗಳೂರಿನಲ್ಲಿ ನಡೆಯುತ್ತಿರುವ ‘ಬೆಂಗಳೂರು ಟೆಕ್ ಸಮ್ಮಿಟ್’ ಹಾಗೂ ರಾಜ್ಯದ ಐತಿಹಾಸಿಕ ಸ್ಥಳಗಳಿಗೆ ಭೇಟಿ ನೀಡುವಂತೆ ಎಲ್ಲಾ ಪ್ರತಿನಿಧಿಗಳಿಗೆ ಸಿಎಂ ಆಹ್ವಾನ ನೀಡಿದರು. ಅಲ್ಲದೆ, ವಾಜಪೇಯಿ ಅವರು ಇಂದಿರಾ ಗಾಂಧಿ ಅವರನ್ನು ‘ದುರ್ಗೆ’ ಎಂದು ಕರೆದಿದ್ದನ್ನು ಸ್ಮರಿಸಿದ ಸಿಎಂ, “ಹೆಚ್ಚು ಮಹಿಳೆಯರು ನಿರ್ಧಾರ ತೆಗೆದುಕೊಳ್ಳುವ (Decision Makers) ಸ್ಥಾನಕ್ಕೆ ಬರಬೇಕು. ಬೆಂಗಳೂರಿನಲ್ಲಿ 1 ಕೋಟಿ ಮತದಾರರಿದ್ದರು, ಎಸ್ಐಆರ್ (SIR) ಪರಿಷ್ಕರಣೆ ಬಳಿಕ 45 ಲಕ್ಷ ಮತಗಳು ಡಿಲೀಟ್ ಆಗಿವೆ. ಒಮ್ಮೆ ಕೆಲಸಕ್ಕೆಂದು ಬೆಂಗಳೂರಿಗೆ ಬಂದವರು ವಾಪಸ್ ಹೋಗಲು ಇಷ್ಟಪಡುವುದಿಲ್ಲ, ಇದುವೇ ಬೆಂಗಳೂರಿನ ಶಕ್ತಿ” ಎಂದರು.
Glad to welcome women parliamentarians, legislators and presiding officers from across India and the Commonwealth to Bengaluru for the First Commonwealth Women Parliamentarians (CWP) India Region Conference at Vidhana Soudha. With around 150 delegates from 15 to 20 countries, the conference provides an important platform to exchange experiences, share ideas and strengthen the collective voice of women in democratic institutions. Karnataka is proud to host this gathering.
India’s journey towards women’s political empowerment has been shaped by the vision and efforts of several leaders. Shri Rajiv Gandhi’s initiative paved the way for one-third reservation for women in local bodies, bringing more women into grassroots governance. This journey towards greater representation continued with Smt. Sonia Gandhi’s sustained efforts to secure a stronger voice for women in Parliament and State Legislatures, culminating in the passage of the Women’s Reservation Act in 2023.
The contributions of Smt. Indira Gandhi also remain an important part of our political history. Building on the progress made over the years, we must ensure that women do not merely occupy seats in legislative institutions but have an equal voice in shaping policies, influencing decisions and determining the direction of governance. Meaningful participation is what makes democracy truly inclusive and responsive.
Strengthening women’s leadership also requires opportunities for mentorship, collaboration and greater participation in public life. I appreciate the efforts of Dr. D. Purandeswari, Chairperson of CWP India Region, in advancing this cause. I hope this conference, themed ‘Strong Foundations, Stronger Voices: Inclusive Cyberspace and Mentorship Pathways for New Women Legislators’, will help build stronger connections among women leaders and open new pathways for the next generation.
— DK Shivakumar (@DKShivakumar) November 17, 2026
ಗಣ್ಯರ ಸಮಾಗಮ:
ಸಮ್ಮೇಳನದಲ್ಲಿ ರಾಜ್ಯಸಭಾ ಉಪಸಭಾಪತಿ ಹರಿವಂಶ್, ಸಿಡಬ್ಲ್ಯೂಪಿ ಅಧ್ಯಕ್ಷೆ ಡಾ. ಡಿ. ಪುರಂದೇಶ್ವರಿ, ವಿಧಾನಸಭಾ ಸ್ಪೀಕರ್ ಜಿ.ಎಸ್. ಪಾಟೀಲ್, ವಿಧಾನ ಪರಿಷತ್ ಸಭಾಪತಿ ಸಲೀಂ ಅಹಮದ್, ಡಿಸಿಎಂ ಡಾ. ಜಿ. ಪರಮೇಶ್ವರ್, ವಿಧಾನಸಭಾ ಉಪಾಧ್ಯಕ್ಷ ಮಂಕಾಳು ವೈದ್ಯ, ಪರಿಷತ್ ಉಪಸಭಾಪತಿ ಉಮಾಶ್ರೀ, ಮಾಜಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಸಂಸದೆ ಪ್ರಿಯಾಂಕಾ ಜಾರಕಿಹೊಳಿ, ಎಂಎಲ್ಸಿ ಆರತಿ ಕೃಷ್ಣ, ಬಿಹಾರದ ಶಾಸಕಿ ಮೈಥಿಲಿ ಠಾಕೂರ್ ಸೇರಿದಂತೆ ವಿವಿಧ ರಾಜ್ಯಗಳ ಮಹಿಳಾ ಸಂಸದರು, ಶಾಸಕರು ಮತ್ತು ಸ್ಪೀಕರ್ಗಳು ಭಾಗವಹಿಸಿದ್ದರು.

