ಬೆಳಗಾವಿ: ಬಿಜೆಪಿಯಿಂದ ದಾರಿತಪ್ಪಿದವರು ಬಿಟ್ಟು, ಇಡೀ ಜಗತ್ತಿನಲ್ಲಿಯೇ ಹಿಂದೂಗಳು ಒಳ್ಳೆಯ ವ್ಯಕ್ತಿಗಳು. ಹಿಂದೂ ಐಡಿಯಾಲಾಜಿಯನ್ನ ಬಿಜೆಪಿಯವರು ಕಲಿಯಬೇಕು ಎಂದು ಕಾಂಗ್ರೆಸ್‌ನ ಮಾಜಿ ಶಾಸಕ ಫಿರೋಜ್ ಸೇಠ್ ಹೇಳಿದ್ದಾರೆ.
ಬೆಳಗಾವಿಯಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕರ್ನಾಟಕ ಅಷ್ಟೇ ಅಲ್ಲ ಇಡೀ ರಾಷ್ಟ್ರದಲ್ಲಿ ಸರ್ಕಾರ ಫೇಲ್ಯೂರ್ ಆಗಿದೆ. ಇ.ಡಿ, ಐಟಿ ಅಂತಾ ಎಲ್ಲರನ್ನೂ ಹೆದರಿಸಿ ತಮ್ಮತ್ತ ಸೆಳೆಯುವ ಕೆಲಸ ಆಗುತ್ತಿದೆ. ಹಿಂದೂ ಬಹುಸಂಖ್ಯಾತರು ಇರುವಂತಹ ದೇಶ ನಮ್ಮದು. ನಾನು ಅಲ್ಪಸಂಖ್ಯಾತನಿದ್ದೇನೆ. ಜಾತಿಯಿಂದ ನಾನು ಅಲ್ಪಸಂಖ್ಯಾತ ಇದ್ದರೂ, ನನಗೆ ಬೆಂಬಲ ನೀಡಿದ್ದು ಹಿಂದೂ ವ್ಯಕ್ತಿಗಳು ಎಂದು ಸ್ಮರಿಸಿದ್ದಾರೆ. ಇದನ್ನೂ ಓದಿ: ಹೆಣ್ಮಕ್ಕಳ ಮನಸ್ಸು ಅರ್ಥ ಆಗಲ್ಲ ಅನ್ನೋರು ಗೂಗಲ್ ಮಿ ಅಂದ್ರು `ಕನ್ನಡತಿ’ ನಟಿ
Advertisement
Advertisement
ಬಾಲ್ಯದಿಂದಲೂ ನನ್ನನ್ನು ಬೆಂಬಲಿಸಿದವರು ಹಿಂದೂಗಳು, ಹತ್ತು ಮಂದಿ ಕೆಟ್ಟ ಕೆಲಸ ಮಾಡ್ತಾರೆ ಅಂತಾ ಹತ್ತು ಸಾವಿರ ಜನರನ್ನು ನಾನು ದೂಷಿಸಲ್ಲ. ಹಿಂದೂಗಳು ಇಡೀ ಜಗತ್ತಿನಲ್ಲಿಯೇ ಒಳ್ಳೆಯ ವ್ಯಕ್ತಿಗಳು. ಬಿಜೆಪಿಯಿಂದ ದಾರಿತಪ್ಪಿದವರು ಬಿಟ್ಟು, ಎಲ್ಲ ಹಿಂದೂಗಳು ಒಳ್ಳೆಯ ವ್ಯಕ್ತಿಗಳು. ಹಿಂದೂ ಐಡಿಯಾಲಾಜಿಯನ್ನ ಅವರು ಕಲಿಯಬೇಕು. ಅದಕ್ಕೆ ನಾನು ಶಾಲೆ ಓಪನ್ ಮಾಡಬೇಕಾ? ಎಂದು ಸೇಠ್ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಸಮಸ್ಯೆಗಳನ್ನು ಚರ್ಚಿಸಿ, ಪರಿಹರಿಸದಿದ್ದರೆ ನ್ಯಾಯಾಂಗ ವ್ಯವಸ್ಥೆ ದುರ್ಬಲವಾಗುತ್ತದೆ – CJI
Advertisement
Advertisement
ಸಿಎಂ ಬಸವರಾಜ ಬೊಮ್ಮಾಯಿ ಅವರು ಮೃತ ಪ್ರವೀಣ್ ನೆಟ್ಟಾರು ಮನೆಗೆ ಭೇಟಿ ನೀಡಿದ್ದಾರೆ. ಆದರೆ ಮೃತ ಫಾಝಿಲ್ ಮನೆಗೆ ಭೇಟಿ ನೀಡಿಲ್ಲ ಎಂಬ ಯು.ಟಿ.ಖಾದರ್ ಪ್ರಶ್ನೆಗೆ ಉತ್ತರಿಸಿದ ಅವರು, ಇದು ರಾಜಕಾರಣ. ಅಲ್ಲಿಯೂ ಹೋಗಿ 25 ಲಕ್ಷ ನೀಡಿದ್ರೆ ಅಸಮಾಧಾನಗೊಳ್ಳುತ್ತಾರೆ ಎಂಬ ಭಯವಿದೆ. ಸಿಎಂ ಬಸವರಾಜ ಬೊಮ್ಮಾಯಿ ಅಂಜಿಕೆ ಇಲ್ಲದ ನಾಯಕರಾಗಬೇಕು. ನಾನು ಎಲ್ಲರನ್ನೂ ಪ್ರೀತಿ ಮಾಡ್ತೇನಿ ಎಂಬ ದೃಷ್ಟಿಕೋನದಲ್ಲಿ ಇರಬೇಕು. ನಮ್ಮ ಯೋಚನೆ ಆ ರೀತಿ ಇದ್ರೆ ಮಾತ್ರ ನಾವು ಲೀಡರ್. ಇಲ್ಲ ಅಂದ್ರೆ ಲೀಡರ್ ಅಲ್ಲಾ ಎಂದು ತಿಳಿಸಿದ್ದಾರೆ.