`ಹಿಂದೂ’ ಪದ ಅಶ್ಲೀಲ ಅನ್ನೋನು ಸನ್ನಿ ಲಿಯೋನ್ ಮಗನಾ? – ಧನಂಜಯ ಭಾಯ್ ವಿವಾದಿತ ಹೇಳಿಕೆ

Public TV
2 Min Read
Dhananjay Desai

ಬೆಳಗಾವಿ: ಕೆಲವರು ಚುನಾವಣೆಯ (Election) ಫಾರ್ಮ್‌ನಲ್ಲಿ ಧರ್ಮವನ್ನು ಹಿಂದೂ ಎಂದೇ ಬರೆದುಕೊಳ್ಳುತ್ತಾರೆ. ಆದರೆ ಹಿಂದೂ (Hindu Word) ಪದದ ಅರ್ಥ ಅಶ್ಲೀಲ ಎಂದು ಹೇಳ್ತಾರೆ. ಇಂತಹ `ಪೋರ್ನ್ ಸ್ಟಾರ್’ಗಳು ಎಲ್ಲಿಂದ ಬರ್ತಾರೆ. ಅವನೇನು ಸನ್ನಿ ಲಿಯೋನಿ (Sunny Leone) ಮಗನಾ ಅಥವಾ ಬೇರೆಯವರ ಮಗನಾ? ಎಂದು ಹಿಂದೂ ರಾಷ್ಟ್ರ ಸೇನಾ (Hindu Rashtra Sena) ಅಧ್ಯಕ್ಷ ಧನಂಜಯ ಭಾಯ್ ದೇಸಾಯಿ (Dhananjay Desai) ನಾಲಿಗೆ ಹರಿಬಿಟ್ಟಿದ್ದಾರೆ.

Dhananjay Desai 2

ಬೆಳಗಾವಿಯಲ್ಲಿ ನಡೆದ `ಜಾಗೋ ಹಿಂದೂ’ ಸಮಾವೇಶದಲ್ಲಿ `ಹಿಂದೂ’ ಪದದ ಅರ್ಥ ಅಶ್ಲೀಲವಾಗಿದೆ ಎಂದಿದ್ದ ಕೆಪಿಸಿಸಿ (KPCC) ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ (Satish Jarkiholi) ಅವರು ವಿರುದ್ಧ ಕಿಡಿಕಾರಿದ್ದಾರೆ. ಇದನ್ನೂ ಓದಿ: ಕಾರ್ಯಕ್ರಮಕ್ಕೆ ಹೋಗ್ಬೇಡ ಎಂದಿದ್ದಕ್ಕೆ ಚಿಕ್ಕಮ್ಮನ ಹತ್ಯೆ- ಬಕೆಟ್‌ನಲ್ಲಿ ದೇಹದ ಪೀಸ್‌ಗಳನ್ನಿಟ್ಟು ಎಸೆದ

Satish Jarakiholi

ಚುನಾವಣೆ ಅರ್ಜಿಯ ಮೇಲೆ ಹಿಂದೂ ಅಂತಾ ಬರೀತಾರೆ. ಬಳಿಕ ತಾವು ಹುಟ್ಟಿ ಬಂದ ತಾಯಿಯ ಗರ್ಭವನ್ನೇ ಅಶ್ಲೀಲವೆಂದು ನಾಲಿಗೆ ಹರಿಬಿಡುತ್ತಾರೆ. ಅವನೇನು ಸನ್ನಿ ಲಿಯೋನ್ ಮಗನಿದ್ದಾನಾ? ಇಂತಹ ಪೋರ್ನ್ ಸ್ಟಾರ್‌ಗಳು ಎಲ್ಲಿಂದ ಬರ್ತಾರೆ? ಇಂತಹವರನ್ನ ವಿಧಾನಸಭೆಗೆ ಕಳಿಸಿ ನಮ್ಮ ಸಮಾಜ ನಾಚುವ ಹಾಗೆ ಏಕೆ ಮಾಡ್ತಿದ್ದೇವೆ ಎಂದು ವಿವಾದಾತ್ಮಕವಾಗಿ ಮಾತನಾಡಿದ್ದಾರೆ. ಇದನ್ನೂ ಓದಿ: MES ಪುಂಡರನ್ನು ಹದ್ದುಬಸ್ತಿನಲ್ಲಿ ಇಡುವುದು ನಮಗೆ ಗೊತ್ತಿದೆ : ಬೊಮ್ಮಾಯಿ

Dhananjay Desai 1

ಅಶ್ಲೀಲ ಧರ್ಮದಲ್ಲಿ ಹುಟ್ಟಿದೆ ಎಂದು ಅವನಿಗೇಕೆ ಅನಿಸುತ್ತಿದೆ? ಈ ಬಗ್ಗೆ ತನಿಖೆಗೆ ಕರ್ನಾಟಕ ಸರ್ಕಾರ ಒಂದು ಸಮಿತಿ ರಚಿಸಬೇಕು. ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಒಂದು ಸಮಿತಿ ರಚನೆ ಮಾಡಬೇಕು. ಹಿಂದೂ ಹಿತದ ಬಗ್ಗೆ ಮಾತನಾಡುವವರೇ ದೇಶ ನಡೆಸುವಂತೆ ಸಂಕಲ್ಪ ಮಾಡಬೇಕು. ಹಿಂದೂ ಹಿತದ ಬಗ್ಗೆ ಯೋಚಿಸುವವರೇ ಪ್ರಧಾನಿ, ಸಿಎಂ, ಸಂಸದ, ಶಾಸಕ, ನಗರಸಭೆ ಹಾಗೂ ಪಂಚಾಯತಿ ಸದಸ್ಯರಾಗಬೇಕು. ಹಿಂದೂ ಶಬ್ದ ಸನಾತನ ಧರ್ಮ ಗೌರವಿಸುವವರು ನಮ್ಮ ರಾಜಕೀಯ ಪ್ರತಿನಿಧಿ ಆಗಬೇಕು ಎಂದು ಒತ್ತಾಯಿಸಿದ್ದಾರೆ.

hindu samavesha

ಇದೇ ವೇಳೆ ಭಾರತ್ ಜೋಡೋ ಯಾತ್ರೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಯಾವಾಗ ಚೀನಾ ಪರ ಮಾತನಾಡ್ತಾರೆ? ಯಾವಾಗ ಅಮೆರಿಕ, ಸಾವರ್ಕರ್ ವಿರುದ್ಧ ಮಾತನಾಡ್ತಾರೆ ಗೊತ್ತಾಗಲ್ಲ. ಭಾರತ ವಿರೋಧಿ ವ್ಯಕ್ತಿತ್ವ, ಇಸ್ಲಾಮಿಕ್ ಜಿಹಾದಿ, ಲವ್ ಜಿಹಾದ್, ಪಿಎಫ್‌ಐ ಬೆಂಬಲಿಸುವವರು ರಾಹುಲ್ ಗಾಂಧಿ ಯಾತ್ರೆಯಲ್ಲಿ ಭಾಗಿಯಾಗಿದ್ದಾರೆ. ಹಾಗಾಗಿ ಮುಂಬರುವ ದಿನಗಳಲ್ಲಿ ಹಿಂದೂ ರಾಷ್ಟ್ರ ನಿರ್ಮಾಣ ಆಗಬೇಕು. ಹಿಂದೂ ವ್ಯಕ್ತಿಯೇ ಶಾಸಕನಾಗಬೇಕು ಎಂದು ಕರೆ ನೀಡಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *