ರಾಯಚೂರು: ಈ ಹಿಂದೆ ಮುಸ್ಲಿಮರಿಗೆ ಪಾಕಿಸ್ತಾನ (Pakistan) ಬಿಟ್ಟುಕೊಡಲಾಗಿದೆ, ಹಿಂದೂಗಳಿಗೆ ಹಿಂದೂಸ್ತಾನ ಅಂತ ಸುಮ್ಮನಾಗಿದ್ದೆವು. ಆದ್ರೆ 2047ಕ್ಕೆ ಇಡೀ ಭಾರತವನ್ನು ಇಸ್ಲಾಮೀಕರಣ ಮಾಡುವ ತಂತ್ರ ರೂಪಿಸಲಾಗಿದೆ ಎಂದು ಹಿಂದೂ ಜಾಗರಣ ವೇದಿಕೆಯ (Hindu Jagarana Vedike) ದಕ್ಷಿಣ ವಲಯ ಸಂಯೋಜನಾ ಕಾರ್ಯದರ್ಶಿ ಜಗದೀಶ್ ಕಾರಂತ್ ಆತಂಕ ವ್ಯಕ್ತಪಡಿಸಿದ್ದಾರೆ.
Advertisement
ರಾಯಚೂರಿನಲ್ಲಿ (Raichur) ದೇವಾಲಯ ಸಂವರ್ಧನಾ ಸಮಿತಿ ಆಯೋಜಿಸಿದ್ದ ದೇವಾಲಯದ ಭಕ್ತ ಮಂಡಳಿ ಚಿಂತನಾ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದ್ದಾರೆ. ಬಿಹಾರದಲ್ಲಿ ಪ್ರಧಾನಿ ಮೋದಿ ಹತ್ಯೆಗೆ ಸಂಚು ರೂಪಿಸಿದ್ದ ಪ್ರಕರಣದಲ್ಲಿ ಬೇರೆಯದ್ದೇ ಸತ್ಯ ಬೆಳಕಿಗೆ ಬಂದಿದೆ. ಆರೋಪಿಗಳು ಬಾಯ್ಬಿಟ್ಟ ಸತ್ಯ ಭಯಾನಕವಾಗಿತ್ತು. ಅದೇನೆಂದರೆ 2047ರ ವೇಳೆಗೆ ಭಾರತವನ್ನು ಇಸ್ಲಾಮೀಕರಣ ಮಾಡುವ ತಂತ್ರ ರೂಪಿಸಲಾಗಿದೆ ಎಂಬ ಸತ್ಯ ಬೆಳಕಿಗೆ ಬಂದಿದೆ ಎಂದಿದ್ದಾರೆ. ಇದನ್ನೂ ಓದಿ: ರಾಜ್ಯಮಟ್ಟದ ಜನಸ್ಪಂದನ ಕಾರ್ಯಕ್ರಮ ಯಶಸ್ವಿ; 20 ಸಾವಿರ ಜನ ಭಾಗಿ, 11,000 ಅರ್ಜಿ ಸಲ್ಲಿಕೆ
Advertisement
Advertisement
ಇಸ್ಲಾಮೀಕರಣದ ಹುಳ ಭಾರತದಲ್ಲಿ ಹರಿದಾಡುತ್ತಿದೆ. ಕೆಲವರ ಮೆದುಳಿಗೆ ನುಸುಳಿಬಿಟ್ಟಿದೆ. ಅದನ್ನ ಸಾಧಿಸಲು ಆಯ್ದುಕೊಂಡಿರುವುದು ಎರಡು ದಾರಿ. ಒಂದು ಅಂಬೇಡ್ಕರ್ ಸಂವಿಧಾನದ ದಾರಿ, ಮತ್ತೊಂದು ಟಿಪ್ಪುವಿನ ಖಡ್ಗ. ಕೇಂದ್ರದಲ್ಲಿ ಅಧಿಕಾರಕ್ಕೆ ಬರಲು 272 ಸ್ಥಾನ ಬೇಕು. ಹೀಗಾಗಿ ಮುಸಲ್ಮಾನರೇ ಗೆಲ್ಲಬಹುದಾದ ಕ್ಷೇತ್ರಗಳನ್ನ ಆಯ್ಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಎಚ್ಚರಿಸಿದ್ದಾರೆ. ಇದನ್ನೂ ಓದಿ: ಸಮಯ ಸಿಕ್ಕಾಗ ವಿದ್ಯಾರ್ಥಿ ಮನೆಗೇ ಹೋಗಿ ಸೆಕ್ಸ್ ಮಾಡ್ತಿದ್ದೆ – ತಪ್ಪೊಪ್ಪಿಕೊಂಡ ಶಿಕ್ಷಕಿಗೆ 50 ವರ್ಷ ಜೈಲು
Advertisement
ಜಿನ್ನಾ ತಂತ್ರ ಮತ್ತೆ ಪುನಶ್ಚೇತನ:
ಮುಸ್ಲಿಮರು ನಿರ್ಣಾಯಕ ಸಂಖ್ಯೆಯಲ್ಲಿದ್ದಾರೆ, ಹಾಗಾಗಿ ಜಾತಿನೆಲೆಗಟ್ಟಿನಲ್ಲಿ ಹಿಂದೂ ಸಮಾಜವನ್ನು ಒಡೆದು ಗೆಲ್ಲಬಹುದಾದಂತಹ ಕ್ಷೇತ್ರಗಳನ್ನು ಗುರುತಿಸುತ್ತಿದ್ದಾರೆ. 1947ರಲ್ಲಿ ಮೊಹಮದ್ ಅಲಿ ಜಿನ್ನಾ ಇದೇ ತಂತ್ರ ಬಳಸಿದ್ದರು. ಆಗ ಇಬ್ಬರು ದಲಿತ ನಾಯಕರಿದ್ದರು. ಅಂಬೇಡ್ಕರ್ ಹಾಗೂ ಜೋಗೇಂದ್ರನಾಥ್ ಮಂಡಲ್. ಬಂಗಾಳದ ಜೋಗೇಂದ್ರನಾಥ್ ಮಂಡಲ್‌ರನ್ನ ತನ್ನ ವಿಶ್ವಾಸಕ್ಕೆ ತೆಗೆದುಕೊಂಡರು, ಅದಕ್ಕೆ ಮಂಡಲ್ ಪ್ರತ್ಯೇಕ ಪಾಕಿಸ್ತಾನಕ್ಕೆ ಬೆಂಬಲ ಕೊಟ್ಟರು. ಅದೇ ತಂತ್ರದ ಪುನಶ್ಚೇತನ ನಡೆದಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಮತಾಂತರ ಅಡ್ಡೆಯಾಗ್ತಿದೆ ಕೃಷ್ಣಾ ನದಿ ದಂಡೆ:
ಅಲ್ಲದೇ ಆಂಧ್ರ ಪ್ರದೇಶದಲ್ಲಿ ಕೃಷ್ಣಾ ನದಿ ಮತಾಂತರ ಅಡ್ಡೆಯ ದಂಡೆಯಾಗುತ್ತಿದೆ. ಮತಾಂತರಕ್ಕಾಗಿಯೇ ಅಲ್ಲಿ ಸರ್ಕಾರದಿಂದ ಸ್ನಾನ ಘಟ್ಟ ಮಾಡಲಾಗಿದೆ. ಜನರನ್ನ ನೀರಿನಲ್ಲಿ ಮುಳುಗಿಸಿ ಮತಾಂತರ ಮಾಡಲಾಗುತ್ತಿದೆ. ಆದ್ದರಿಂದ ಈಗ ಸಾಮಾಜಿಕ ಸುರಕ್ಷತೆಗೆ ಈಗ ಒತ್ತು ಕೊಡಬೇಕಾಗಿದೆ ಎಂದು ಸಲಹೆ ನೀಡಿದ್ದಾರೆ. ಇದನ್ನೂ ಓದಿ: ಪರಶುರಾಮ ಥೀಂ ಪಾರ್ಕ್ ಬಗ್ಗೆ ಸಿಐಡಿ ತನಿಖೆ ನಡೆಸುವುದನ್ನು ಸ್ವಾಗತಿಸುತ್ತೇನೆ: ಸುನಿಲ್ ಕುಮಾರ್