ಮಡಿಕೇರಿ: ರಾಜ್ಯದಲ್ಲಿ ಹಿಜಬ್ ಫೈಟ್ ದಿನದಿಂದ ದಿನಕ್ಕೆ ಹೊಸ ರೂಪ ಪಡೆದುಕೊಳ್ಳುತ್ತಿದೆ. ಇದರ ಬೆನ್ನಲ್ಲೇ ಮಡಿಕೇರಿ ನಗರದ ಸರ್ಕಾರಿ ಪದವಿ ಕಾಲೇಜು ಪ್ರಾಂಶುಪಾಲರೊಬ್ಬರಿಗೆ ಅನಾಮಿಕ ಕೊಲೆ ಬೆದರಿಕೆ ಹಾಕಿರುವ ಘಟನೆ ನಡೆದಿದೆ.
Advertisement
ನಿನ್ನೆ ನಗರದ ಜೂನಿಯರ್ ಕಾಲೇಜಿನಲ್ಲಿ ಹಿಜಬ್ ಹಾಕಿಕೊಂಡು ಬಂದ ವಿದ್ಯಾರ್ಥಿನಿಯರಿಗೆ ಕೋರ್ಟ್ ಆದೇಶವನ್ನು ಪಾಲನೆ ಮಾಡಬೇಕು, ಇಲ್ಲ ಹೊರಗೆ ಹೋಗಿ. ಈ ಮಕ್ಕಳಿಂದ ಬೇರೆ ವಿದ್ಯಾರ್ಥಿಗಳಿಗೆ ತೊಂದರೆ ಅಗುತ್ತದೆ. ಈ ಮಕ್ಕಳನ್ನು ಅರೆಸ್ಟ್ ಮಾಡಿ ಎಂದು ಕಾಲೇಜಿನ ಪ್ರಾಂಶುಪಾಲರಾದ ವಿಜಯ್ ಅವರು ಹೇಳಿದ್ದರು. ಇದನ್ನೂ ಓದಿ: ಹಿಜಾಬ್ ವಿವಾದ- ಪೋಷಕರು, ಶಿಕ್ಷಕರು ಮಧ್ಯೆ ಗಂಗಾವತಿಯಲ್ಲಿ ಗಲಾಟೆ
Advertisement
ಪಬ್ಲಿಕ್ ಟಿವಿಯ ಸಾಮಾಜಿಕ ಜಾಲತಾಣದ ಈ ವೀಡಿಯೋ ವೈರಲ್ ಅಗಿತ್ತು. ಅದರೆ ಓರ್ವ ಅನಾಮಿಕ ಪ್ರಾಂಶುಪಾಲರ ವೀಡಿಯೋವನ್ನು ನೋಡಿ ಸಾಮಾಜಿಕ ಜಾಲತಾಣದಲ್ಲೇ ಕೊಲೆ ಬೆದರಿಕೆ ಹಾಕಿದ್ದಾನೆ. ಇದರಿಂದ ಇದೀಗಾ ಕಾಲೇಜು ಪ್ರಾಂಶುಪಾಲ ವಿಜಯ್, ಮಡಿಕೇರಿ ನಗರದಲ್ಲಿ ದೂರು ದಾಖಲಿಸಿದ್ದಾರೆ.
Advertisement
Advertisement
ಮಹಮ್ಮದ್ ತೌಸಿಫ್ ಎಂಬಾತನಿಂದ ಜೀವ ಬೆದರಿಕೆ ಬಂದಿದೆ. ನೀನು ಹೆಚ್ಚು ದಿನ ಬದುಕೋದಿಲ್ಲ ಹಜಾಮ ಎಂದು ಕಾಮೆಂಟ್ಸ್ ಮಾಡಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿರುವ ಹಿನ್ನೆಲೆ ಮಹಮದ್ ತೌಸಿಫ್ ಎಂಬಾತನ ವಿರುದ್ಧ ಪ್ರಾಂಶುಪಾಲ ದೂರು ನೀಡಿದ್ದಾರೆ. ಮಡಿಕೇರಿ ಸೈಬರ್ ಅಪರಾಧ ಠಾಣೆಗೆ ದೂರು ನೀಡಿದ್ದಾರೆ. ಇದನ್ನೂ ಓದಿ: ಇದು RSS ಕುತಂತ್ರ – ಈಶ್ವರಪ್ಪ ಪೆದ್ದ: ಸಿದ್ದರಾಮಯ್ಯ