ಕೋಲಾರ: ರೆಸಾರ್ಟ್‌ನಲ್ಲಿ (Resort) ನಡೆಯುತ್ತಿದ್ದ ಹೈಟೆಕ್ ವೇಶ್ಯಾವಾಟಿಕೆ (Prostitution) ಮೇಲೆ ಕೋಲಾರ (Kolar) ಪೊಲೀಸರು ಭರ್ಜರಿ ದಾಳಿ ನಡೆಸಿ ಕಾರ್ಯಾಚರಣೆ ನಡೆಸಿದ್ದು, ಈ ವೇಳೆ ರೆಸಾರ್ಟ್‌ನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ 14 ಜನರನ್ನು ಬಂಧಿಸಿ, 6 ಮಹಿಳೆಯರನ್ನು ರಕ್ಷಣೆ ಮಾಡಿದ್ದಾರೆ.
ಕೋಲಾರ ಜಿಲ್ಲೆ ಮುಳಬಾಗಿಲು (Mulabagilu) ತಾಲೂಕು ರಾಕ್ ವ್ಯಾಲಿ ರೆಸಾರ್ಟ್ (Rock Valley Resort) ಮೇಲೆ ಕಳೆದ ರಾತ್ರಿ ದಾಳಿ ಮಾಡಿದ ಕೋಲಾರ ಪೊಲೀಸರು, ವೇಶ್ಯಾವಾಟಿಕೆ ನಡೆಸುತ್ತಿದ್ದ 14 ಜನರನ್ನು ಬಂಧಿಸಿ 6 ಮಹಿಳೆಯರನ್ನ ರಕ್ಷಣೆ ಮಾಡಿದ್ದಾರೆ. ಕೋಲಾರ ಮಹಿಳಾ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಬೈರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು, ಕಳೆದ ಹಲವು ದಿನಗಳಿಂದ ಈ ದಂಧೆ ನಡೆಸಲಾಗುತ್ತಿತ್ತು ಎನ್ನಲಾಗಿದೆ. ಇದನ್ನೂ ಓದಿ: ಮಕ್ಕಳೆದುರೇ ಪತ್ನಿಯ ಗುಪ್ತಾಂಗಕ್ಕೆ ಚಾಕು ಇರಿದು ವಿಕೃತಿ ಮೆರೆದ ರೌಡಿಶೀಟರ್!
Advertisement
ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಪೊಲೀಸರು, ರೆಸಾರ್ಟ್ ಮಾಲೀಕ ಸೇರಿ ಹೈದರಾಬಾದ್ (Hyderabad) ಮೂಲದ ಆರು ಜನ ಮಹಿಳೆಯರನ್ನು ವಶಕ್ಕೆ ಪಡೆದಿದ್ದಾರೆ. ಹೈದರಾಬಾದ್ ಮೂಲದ ಅಜಯ್ ಎಂಬ ವ್ಯಕ್ತಿ ಮಹಿಳೆಯರನ್ನು ಕೆರೆತರುತ್ತಿದ್ದ ಎನ್ನಲಾಗಿದೆ. ದಾಳಿ ವೇಳೆ ಸುಮಾರು ಹತ್ತಕ್ಕೂ ಹೆಚ್ಚು ಕಾರುಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ಕೈಗೊಂಡಿದ್ದಾರೆ. ಇದನ್ನೂ ಓದಿ: ಕಾರಿನಲ್ಲಿ ಗೋಮಾಂಸ ಸಾಗಾಟ- ವ್ಯಕ್ತಿಯನ್ನು ಹೊಡೆದು ಕೊಂದ ಸಾರ್ವಜನಿಕರು
Advertisement
Advertisement
ಕಳೆದ ಒಂದು ವರ್ಷದಲ್ಲಿ ಈ ರೆಸಾರ್ಟ್ ಮೇಲೆ ಇದು ಎರಡನೇ ದಾಳಿ ಆಗಿದ್ದು, ಈ ಹಿಂದೆ ಕೂಡ ದಾಳಿ ಮಾಡಿ ಹೈಟೆಕ್ ಜೂಜು ಅಡ್ಡ ಹಾಗೂ ವೇಶ್ಯಾವಾಟಿಕೆಗೆ ಪೊಲೀಸರು ಕಡಿವಾಣ ಹಾಕಿದ್ದರು. ಆದರೆ ಮತ್ತೆ ಇದು ಮುಂದುವರಿಯುತ್ತಿದ್ದು, ಪ್ರಭಾವಿಗಳ ಕೈವಾಡ ಸೇರಿದಂತೆ ವಿವಿಧ ರಾಜ್ಯಗಳ ಗಣ್ಯರು ಸಹ ಇದರಲ್ಲಿ ಭಾಗಿಯಾಗಿರುವ ಸಾಧ್ಯತೆ ಹೆಚ್ಚಾಗಿದೆ. ಕೋಲಾರದ ನಂಗಲಿ ಹಾಗು ಮಹಿಳಾ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗುತ್ತಿದೆ ಎಂದು ಕೋಲಾರ ಎಸ್ಪಿ ನಾರಾಯಣ ಅವರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ದೇವಾಲಯ, ಮನೆಯಲ್ಲಿ ಕಳ್ಳರ ಕೈಚಳಕ – 2 ಲಕ್ಷ ನಗದು 250 ಗ್ರಾಂ ಬಂಗಾರ ದೋಚಿದ ಖದೀಮರು
Advertisement