– ನಾನು ಗಂಭೀರ ಗಾಯಗೊಂಡರೂ ಪ್ರಯಾಣಿಕರ ಜೀವಕ್ಕೆ ಆಪತ್ತು ಎದುರಾಗಲು ಬಿಡಲಿಲ್ಲ ಎಂದ ಪೈಲಟ್
ನವದೆಹಲಿ: ತಮ್ಮ ಪ್ರಾಣವನ್ನೂ ಲೆಕ್ಕಿಸದೇ ಫ್ಲೈದುಬೈ (Flydubai) ವಿಮಾನದಲ್ಲಿದ್ದ 180 ಪ್ರಯಾಣಿಕರ ಜೀವ ಉಳಿಸಿದ ಹೀರೋ ಭಾರತೀಯ ಪೈಲಟ್ ಜೊತೆ ಪ್ರಧಾನಿ ಮೋದಿ (PM Modi) ಅವರು ವಿಡಿಯೋ ಕರೆ ಮಾಡಿ ಮಾತನಾಡಿಸಿದರು. ಕಠಿಣ ಪರಿಸ್ಥಿತಿಯಲ್ಲಿ ಪೈಲಟ್ ತೋರಿದ ಧೈರ್ಯವನ್ನು ಪ್ರಧಾನಿ ಕೊಂಡಾಡಿದರು. ಶೀಘ್ರವೇ ಗುಣಮುಖರಾಗಲೆಂದು ಹಾರೈಸಿದರು.
ಪ್ರಧಾನಿ ಮೋದಿ ಜೊತೆ ಮಾತನಾಡುತ್ತ ಭಾರತೀಯ ಪೈಲಟ್ ಸ್ಮಿತ್ ಮಚ್ಚಾರ್ (Smit Machchhar) ಭಾವುಕರಾದರು. ‘ನಿಮ್ಮ ಜೊತೆ ಮಾತನಾಡಲು ಅವಕಾಶ ಸಿಗುತ್ತದೆ ಅಂದ್ಕೊಂಡಿರಲಿಲ್ಲ. ನನಗೆ ಅತ್ಯುತ್ತಮ ಚಿಕಿತ್ಸೆ ಲಭಿಸಿದೆ’ ಎಂದು ಆರೋಗ್ಯ ವಿಚಾರಿಸಿದ ಪ್ರಧಾನಿಗೆ ಪೈಲಟ್ ಕೃತಜ್ಞತೆ ಸಲ್ಲಿಸಿದರು. ಇದನ್ನೂ ಓದಿ: ಭಾರತೀಯ ಪೈಲಟ್ ಜೊತೆ ಮಾತನಾಡಿದ ಪ್ರಧಾನಿ ಮೋದಿ; ಶೀಘ್ರ ಚೇತರಿಕೆಗೆ ಹಾರೈಕೆ
ಘಟನೆ ಕುರಿತು ಪ್ರಧಾನಿ ಜೊತೆ ಮಾತನಾಡಿದ ಪೈಲಟ್, ಸಂಕಷ್ಟದ ಕಾಲದಲ್ಲಿ ನಾನು ಹನುಮಾನ್ ಚಾಲೀಸಾ ಪಠಿಸಿದೆ. ಭಗವಾನ್ ಹನುಮಂತ ನನಗೆ ಧೈರ್ಯ ನೀಡಿದನು ಎಂದು ಹೇಳಿಕೊಂಡಿದ್ದಾರೆ.
ಇಂಥ ಕಠಿಣ ಪರಿಸ್ಥಿತಿಯಲ್ಲಿ ನಾನು ಧೈರ್ಯ ಪ್ರದರ್ಶಿಸದಿದ್ದರೆ 180 ಪ್ರಯಾಣಿಕರು ಪ್ರಾಣ ಕಳೆದುಕೊಳ್ಳುತ್ತಿದ್ದರು. ಹೀಗಾಗಿ, ನಾನು ಗಂಭೀರವಾಗಿ ಗಾಯಗೊಂಡರೂ, ಪ್ರಯಾಣಿಕರ ಜೀವಕ್ಕೆ ಆಪತ್ತು ಎದುರಾಗಬಾರದು ಅಂತ ಧೈರ್ಯದಿಂದ ಹೋರಾಡಿದೆ ಎಂದು ಪೈಲಟ್ ತಿಳಿಸಿದರು. ಇದನ್ನೂ ಓದಿ: ‘ನನ್ನನ್ನು ಕೊಂದುಬಿಡಿ..’: ಸಹ-ಪೈಲಟ್ ಇಸ್ಲಾಮಿಸ್ಟ್ ಉಗ್ರಗಾಮಿ ಸಿದ್ಧಾಂತ ಪ್ರಭಾವಕ್ಕೆ ಒಳಗಾಗಿದ್ದ ಎಂದ ನೆತನ್ಯಾಹು
ನಿಮ್ಮ ದೇಹದಲ್ಲಿ ಗಂಭೀರ ಗಾಯವಾಗಿತ್ತು. ನೀವು ಸ್ವತಃ ಜೀವನ್ಮರಣದ ಹೋರಾಟದಲ್ಲಿದ್ದಿರಿ. ಆ ಸಮಯದಲ್ಲಿ ನೀವು ನಿಮ್ಮ ಪ್ರಾಣದ ಬಗ್ಗೆ ಚಿಂತಿಸದೆ, ಎಲ್ಲಾ ಪ್ರಯಾಣಿಕರ ಜೀವಗಳ ಬಗ್ಗೆ ಕಾಳಜಿ ವಹಿಸಿದಿರಿ ಎಂದು ಆಸ್ಪತ್ರೆಯ ಹಾಸಿಗೆಯಿಂದಲೇ ಮಾತನಾಡಿದ ಕ್ಯಾಪ್ಟನ್ ಮಚ್ಚಾರ್ ಸಾಹಸವನ್ನು ಮೋದಿ ಕೊಂಡಾಡಿದರು.

