ಬೆಂಗಳೂರು: ಲೋಕಸಭಾ ಚುನಾವಣೆಗೂ ಮುನ್ನ ರಾಜ್ಯದಲ್ಲಿ ಸರ್ಕಾರ ರಚಿಸಲು ಬಿಜೆಪಿ ಆಪರೇಷನ್ ಕಮಲ ತಂತ್ರವನ್ನು ಪ್ರಯೋಗಿಸಲು ಮುಂದಾಗಿದೆ. ಇದರ ಪರಿಣಾಮ ಪಕ್ಷೇತರರ ಶಾಸಕರಾದ ಹೆಚ್.ನಾಗೇಶ್ ಮತ್ತು ಆರ್.ಶಂಕರ್ ಸರ್ಕಾರಕ್ಕೆ ನೀಡಿದ ಬೆಂಬಲವನ್ನು ವಾಪಸ್ ಪಡೆದುಕೊಂಡರು. ಸರ್ಕಾರ ರಚನೆಯಾದ ಬಳಿಕ ಬಿಜೆಪಿ ಆಪರೇಷನ್ ಕಮಲಕ್ಕೆ ಮುಂದಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿದ್ದುವು. ಆದರೆ ಎಲ್ಲಿಯೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಎಲ್ಲ ನಾಯಕರು ನಾವು ಯಾರನ್ನು ಸಂಪರ್ಕ ಮಾಡಿಲ್ಲ. ಅವರಾಗಿಯೇ ಬಂದರೆ ಸ್ವಾಗತ ಅಂತಾನೇ ಹೇಳುತ್ತಿದ್ದರು.
ಇಬ್ಬರು ಪಕ್ಷೇತರರ ಶಾಸಕರು ಸರ್ಕಾರಕ್ಕೆ ನೀಡಿದ್ದ ಬೆಂಬಲ ವಾಪಸ್ ತೆಗೆದುಕೊಳ್ಳುವಂತೆ ಮಾಡುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ಎಲ್ಲಿಯೂ ಬಿಜೆಪಿ ನಾಯಕರು ನಾವೇ ಅವರನ್ನು ಬರಮಾಡಿಕೊಂಡಿದ್ದೇವೆ ಅಂತಾ ಹೇಳಿಲ್ಲ. ಆದ್ರೆ ಯಡಿಯೂರಪ್ಪ ಮೊಗದಲ್ಲಿ ಮಂದಹಾಸ ಮೂಡಿರುವುದು ಮಾತ್ರ ಸತ್ಯ. ಸರ್ಕಾರ ರಚನೆಯ ಬಳಿಕ ಸಿಎಂ ಸೇರಿದಂತೆ ಕಾಂಗ್ರೆಸ್ ಕೆಲ ನಾಯಕರು ಗೊತ್ತೋ, ಗೊತ್ತಿಲ್ಲದ ತಪ್ಪುಗಳು ಬಿಜೆಪಿಗೆ ವರವಾಯ್ತಾ ಎಂಬ ವಿಮರ್ಶೆಗಳು ಆರಂಭವಾಗಿವೆ. ಹಾಗಾದ್ರೆ ದೋಸ್ತಿ ಸರ್ಕಾರದ ತಪ್ಪುಗಳೇನು? ಇಲ್ಲಿದೆ ಮಾಹಿತಿ. ಇದನ್ನೂ ಓದಿ: ಮೈತ್ರಿ ಸರ್ಕಾರಕ್ಕೆ ನೀಡಿದ್ದ ಬೆಂಬಲ ವಾಪಸ್ ಪಡೆದಿದ್ದು ಯಾಕೆ: ಕಾರಣ ಕೊಟ್ಟ ಪಕ್ಷೇತರರು
Advertisement
Advertisement
ಸಿದ್ದರಾಮಯ್ಯ ಮಾಡಿದ ತಪ್ಪುಗಳು:
ಸಮನ್ವಯ ಸಮಿತಿ ಸಭೆ ಮಾಡದೇ ಇರೋದು. ಬಹಿರಂಗವಾಗಿ ಸಿಎಂಗೆ ಪತ್ರ, ಟ್ವಿಟ್ ಮೂಲಕ ಪರೋಕ್ಷ ಟೀಕೆ. ಬಳ್ಳಾರಿ ಶಾಸಕರ ಬಂಡಾಯ ಶಮನ ಮಾಡದೇ ಇದ್ದಿದ್ದು. ತನ್ನದೇ ಶಿಷ್ಯರು ಬಂಡಾಯ ಎದ್ದಾಗಲು ಸುಮ್ಮನಿದ್ದಿದ್ದು, ರಾಜ್ಯದಲ್ಲಿ ಬಂಡಾಯ ಎದ್ದಾಗಲೆಲ್ಲಾ ದೂರ ವಿದೇಶ ಪ್ರವಾಸ ಕೈಗೊಂಡಿದ್ದು, ಮೈತ್ರಿ, ಲೋಕ ಚುನಾವಣೆವರೆಗೆ ಮಾತ್ರ ಅಂತ ಅರಂಭದಲ್ಲೆ ಶಾಂತಿವನದಲ್ಲಿ ಕೂತು ಹೇಳಿಕೆ ನೀಡಿದ್ದರು.ಗಂಭೀರವಾಗಿ ಆಪರೇಶನ್ ನಡೀತಾ ಇದ್ರು `ಡೋಂಟ್ ಕೇರ್’ ಸ್ವಭಾವ ಪ್ರದರ್ಶಿಸಿದ್ದು, ನಿಗಮ ಮಂಡಳಿ ನೇಮಕ ವಿಚಾರದಲ್ಲೂ ತನ್ನದೇ ಕೈ ಮೇಲಾಗುವಂತೆ ನೋಡಿಕೊಂಡು ಅತೃಪ್ತರ ಅಸಮಾಧಾನ ಹೆಚ್ಚಾಗುವಂತೆ ಮಾಡಿದ್ದು ಆಪರೇಷನ ಕಮಲಕ್ಕೆ ಮುಂದಾಗುವಂತೆ ಮಾಡಿತು. ಸಂಪುಟ ವಿಸ್ತರಣೆ ವೇಳೆ ತನ್ನವರಿಗೆ ಪ್ರಬಲ ಖಾತೆ ಕೊಡಿಸಿದ್ದು, ಕೊನೆ ಕ್ಷಣದವರೆಗೂ ತಮ್ಮ ಶಾಸಕರು ಕೈ ಕೊಡಲ್ಲ ಅಂತ ಅತಿಯಾದ ಆತ್ಮವಿಶ್ವಾಸ ತೋರಿಸಿದ್ದು ದೋಸ್ತಿಗೆ ಕಂಟಕವಾಗಿರುವ ಸಾಧ್ಯತೆಗಳಿವೆ. ಇದನ್ನೂ ಓದಿ: ಮೈತ್ರಿ ಸರ್ಕಾರದಲ್ಲಿನ ಗೊಂದಲಕ್ಕೆ ಸಿದ್ದರಾಮಯ್ಯ ಕಾರಣವೇ?
Advertisement
Advertisement
ಸಿಎಂ ಕುಮಾರಸ್ವಾಮಿ ಮಾಡಿದ ತಪ್ಪುಗಳು:
ಎಲ್ಲಾ ಅಧಿಕಾರ ನನಗೆ ಮತ್ತು ನಮ್ಮ ಮನೆಯವರಿಗೆ ಎಂಬ ಪರಿಪಾಠ. ಸಚಿವ ರೇವಣ್ಣ ಎಷ್ಟೇ ತಪ್ಪು ಮಾಡಿದ್ರು ಸಹೋದರನ ಪರವಹಿಸಿದ್ದರು. ಆಪರೇಷನ್ ಕಮಲ ಆಗಲ್ಲ ಅನ್ನೋ ಅತಿಯಾದ ಕಾನ್ಫಿಡೆನ್ಸ್ ಹೊಂದಿದ್ದರು. ಶತ್ರುವಿನ ಸಾಮರ್ಥ್ಯವನ್ನ ಅರಿಯದೇ ನಿರ್ಲಕ್ಷ್ಯ ತೋರಿದ್ದರು. ಸಂಪುಟ ವಿಸ್ತರಣೆ ಮುಂದೂಡುತ್ತಲೇ ಬಂದಿದ್ದು ಮತ್ತು ದೋಸ್ತಿ ಪಕ್ಷದ ವಿರುದ್ಧದ ಕೆಲ ಹೇಳಿಕೆಗಳು ನೀಡಿದ್ದರು. ಹಲವು ಬಾರಿ ಬಹಿರಂಗವಾಗಿ ತಮ್ಮ ಅಸಹಾಯಕತೆ ಪ್ರದರ್ಶಿಸಿದ್ದರು. ಇದನ್ನೂ ಓದಿ: ದೋಸ್ತಿ ಸರ್ಕಾರ ಉರುಳುತ್ತಾ? ಬಿಜೆಪಿ ಅಧಿಕಾರಕ್ಕೆ ಏರಬೇಕಾದರೆ ಏನೆಲ್ಲ ‘ಮ್ಯಾಜಿಕ್’ ನಡೆಯಬೇಕು?
ಹೆಚ್.ಡಿ. ರೇವಣ್ಣ ಮಾಡಿದ ತಪ್ಪುಗಳು:
ಎಲ್ಲಾ ನಮಗೇ ಬೇಕು ಅನ್ನೋ ರೀತಿಯ ಮನೋಭಾವ. ಎಲ್ಲಾ ವಿಚಾರ ಮತ್ತು ಖಾತೆಯಲ್ಲೂ ಹಸ್ತಕ್ಷೇಪ ಮಾಡಿದ ಆರೋಪಗಳ ಜೊತೆಗೆ ಸೂಪರ್ ಸಿಎಂ ರೀತಿಯ ವರ್ತನೆ. ಕಾಂಗ್ರೆಸ್ ಶಾಸಕರಿಗೆ, ಸಚಿವರಿಗೆ ಬೆಲೆಯೇ ಕೊಡದೆ ಇದ್ದಿದ್ದು ಮತ್ತು ನಮ್ ದಾರಿ ನಮಗೆ, ನಿಮ್ ದಾರಿ ನಿಮಗೆ ಹೇಳಿಕೆ ಕೊಟ್ಟಿದ್ದು ಬಿಜೆಪಿ ವರವಾಗಿದ್ದರು ಆಗಿರಬಬುದು.
ಡಿಕೆ ಶಿವಕುಮಾರ್ ಮಾಡಿದ ತಪ್ಪುಗಳು:
ಅವಶ್ಯಕತೆ ಇಲ್ಲದಿದ್ದರೂ ಬೆಳಗಾವಿ ಪಾಲಿಟಿಕ್ಸ್ ಗೆ ಮೂಗು ತೂರಿಸಿದ್ದರು. ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್‍ಗೆ ಸಪೋರ್ಟ್ ಮಾಡಿ ಬೆಳಗಾವಿ ಬ್ರದರ್ಸ್ ಬಂಡಾಯಕ್ಕೆ ದಾರಿ ಮಾಡಿಕೊಟ್ಟಿದ್ದು. ಆಪರೇಷನ್ ಕಮಲವನ್ನ ಲಘುವಾಗಿ ತೆಗೆದುಕೊಂಡಿದ್ದು, ಎಂಥಾ ಪರಿಸ್ಥಿತಿ ಬಂದ್ರೂ ನಿಭಾಯಿಸುತ್ತೇನು ಅನ್ನೋ ಅತಿಯಾದ ಆತ್ಮವಿಶ್ವಾಸ ಹೊಂದಿದ್ದು ಆಪರೇಷನ್ ಕಮಲಕ್ಕೆ ದಾರಿ ಮಾಡಿಕೊಟ್ಟಂತೆ ಕಾಣುತ್ತಿದೆ. ಬಳ್ಳಾರಿ ಉಪಚುನಾವಣೆಗೆ ಸ್ಥಳೀಯ ಶಾಸಕರ ವಿರೋಧ ಕಟ್ಟಿಕೊಂಡು ಹೊರಗಿನ ವ್ಯಕ್ತಿಗೆ ಟಿಕೆಟ್ ಕೊಡಿಸಿ, ಶಾಸಕ ನಾಗೇಂದ್ರನ ಸಹೋದರನಿಗೆ ಕಳೆದ ಎಂಪಿ ಟಿಕೆಟ್ ತಪ್ಪಿಸಿದ್ದರು ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಹೇಗೆ ಬೇಕೋ ಹಾಗೆ ಸುದ್ದಿ ಹಾಕಿ – ಮಾಧ್ಯಮಗಳ ವಿರುದ್ಧ ಸಿಎಂ ಕೆಂಡಾಮಂಡಲ
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv