ಭೋಪಾಲ್: ತನ್ನ 15 ತಿಂಗಳ ಮಗನನ್ನು ರಕ್ಷಿಸಲು ಬರಿಗೈಯಲ್ಲಿ ಮಹಿಳೆಯೊಬ್ಬರು ಹುಲಿಯೊಂದಿಗೆ ಹೋರಾಡಿರುವ ಅಚ್ಚರಿದಾಯಕ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
25 ವಯಸ್ಸಿನ ಅರ್ಚನಾ ಚೌಧರಿ ಭಾನುವಾರ ರಾತ್ರಿ ಅಳುತ್ತಿದ್ದ ಮಗನನ್ನು ಸಮಾಧಾನಪಡಿಸುತ್ತಾ ಮನೆಯಿಂದ ಹೊರ ಬಂದಿದ್ದಾಳೆ. ಈ ವೇಳೆ ಸಮೀಪದ ಬಾಂಧವಗಢ ಹುಲಿ ಸಂರಕ್ಷಿತಾರಣ್ಯದಿಂದ ದಾರಿ ತಪ್ಪಿ ಬಂದಿದ್ದ ಹುಲಿಯು ಹೊಲಗಳಲ್ಲಿ ಅಡಗಿ ಕುಳಿತ್ತು. ನಂತರ ದಾಳಿ ನಡೆಸಿದೆ. ಇದನ್ನೂ ಓದಿ: ಐಐಟಿ ಕ್ಯಾಂಪಸ್‌ಗಳಲ್ಲಿ 2 ದಿನದಲ್ಲಿ 2ನೇ ಆತ್ಮಹತ್ಯೆ
ಈ ವೇಳೆ ಅಚಾನಕ್ ದಾಳಿ ನಡೆಸಿದ ಹುಲಿ, ಮಹಿಳೆಯ ಮಗುವನ್ನು ದವಡೆಯಲ್ಲಿ ಹಿಡಿಯಿತು. ಮಹಿಳೆ ತನ್ನ ಮಗುವನ್ನು ಬಿಡದೇ ಹುಲಿಯೊಂದಿಗೆ ಹೋರಾಡಿದ್ದಾಳೆ. ಆಗ ಬಾಲಕನನ್ನು ಬಲವಾಗಿ ಎಳೆದುಕೊಳ್ಳಲು ಹುಲಿ ಪ್ರಯತ್ನಿಸಿ ವಿಫಲವಾಗಿದೆ. ಈ ವೇಳೆ ಮಹಿಳೆ ಜೋರಾಗಿ ಕಿರುಚಿದ್ದಾಳೆ. ತಕ್ಷಣ ಸ್ಥಳೀಯರು ಸ್ಥಳಕ್ಕೆ ಧಾವಿಸಿದ್ದಾರೆ. ಇದರಿಂದ ಭಯಗೊಂಡ ಹುಲಿ ಕಾಡಿನೊಳಕ್ಕೆ ನುಗ್ಗಿದೆ.
ಹುಲಿಯೊಂದಿಗಿನ ಹೋರಾಟದಲ್ಲಿ ಮಹಿಳೆ ಕೈಗೆ ಗಾಯಗಳಾಗಿವೆ. ಅಲ್ಲದೇ ಮಗುವಿನ ತಲೆಗೂ ಆಳವಾದ ಗಾಯವಾಗಿದೆ. ತಾಯಿ, ಮಗುವನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಇದನ್ನೂ ಓದಿ: ಮಾಸ್ಕ್ ಹಾಕ್ಕೊಂಡೇ ತೀರ್ಥ ಸೇವಿಸಿದ ಗೆಹ್ಲೋಟ್ – ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್