– ಕೆಎಸ್ಆರ್ಟಿಸಿ, ಬಿಎಂಟಿಸಿ, ಲಾರಿ, ಗೂಡ್ಸ್ ವಾಹನಗಳ ಓಡಾಟಕ್ಕೆ ಬ್ರೇಕ್
ಬೆಂಗಳೂರು: ಮುಂದಿನ 3 ತಿಂಗಳು ನಗರದ ಡಾ. ರಾಜ್ಕುಮಾರ್ ರಸ್ತೆ (Dr Rajkumar Road) ಬಂದ್ ಆಗಲಿದೆ. ರಸ್ತೆಯಲ್ಲಿ ಭಾರೀ ವಾಹನಗಳ ಓಡಾಟಕ್ಕೆ ನಿರ್ಬಂಧ ವಿಧಿಸಲಾಗಿದೆ.
ಕೆಎಸ್ಆರ್ಟಿಸಿ, ಬಿಎಂಟಿಸಿ, ಲಾರಿ, ಗೂಡ್ಸ್ ವಾಹನಗಳ ಓಡಾಟಕ್ಕೆ ಬ್ರೇಕ್ ಹಾಕಲಾಗಿದೆ. ಸ್ಟಾರ್ ಬಜಾರ್ ಸರ್ಕಲ್ನಿಂದ ನವರಂಗ್ ಥಿಯೇಟರ್ ವರೆಗೂ ವೈಟ್ ಟಾಪಿಂಗ್ ಕಾಮಗಾರಿ ಹಿನ್ನೆಲೆ ಈ ಕ್ರಮಕೈಗೊಳ್ಳಲಾಗಿದೆ. ಇದನ್ನೂ ಓದಿ: ಬೆಂಗಳೂರಲ್ಲಿ ವ್ಹೀಲಿಂಗ್ ಪುಂಡರ ಹಾವಳಿ; ಫ್ಲೈಓವರ್ ಮೇಲೆ ನಂಬರ್ ಪ್ಲೇಟ್ ಇಲ್ಲದ ಗಾಡಿಗಳಿಂದ ವ್ಹೀಲಿಂಗ್
ಸದ್ಯ ಆಟೋ, ಬೈಕ್, ಕಾರು ಓಟಾಟಕ್ಕೆ ಮಾತ್ರ ಅವಕಾಶವಿದೆ. ರಾಜ್ ಕುಮಾರ್ ರಸ್ತೆ ರಾಜ್ಯದ 23 ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸಲಿದೆ. ಮೆಜೆಸ್ಟಿಕ್ ಕಡೆಯಿಂದ ತುಮಕೂರು ರಸ್ತೆ ಕಡೆಗೆ ಹೋಗುವ ಮಾರ್ಗ ಕ್ಲೋಸ್ ಆಗಿದೆ.
ರಸ್ತೆಗೆ ಅಡ್ಡಲಾಗಿ ಬ್ಯಾರಿಕೇಡ್ ಹಾಕಿ ರಸ್ತೆ ಕ್ಲೋಸ್ ಅಂತಾ ಜಿಬಿಎ ಬೋರ್ಡ್ ಅಳವಡಿಕೆ ಮಾಡಿದೆ. ರಾಜ್ಕುಮಾರ್ ರಸ್ತೆ ಕ್ಲೋಸ್ ಹಿನ್ನೆಲೆ ತುಮಕೂರು ರಸ್ತೆ ಕಡೆಗೆ ಹೋಗುವ ವಾಹನಗಳು ರಾಜಾಜಿನಗರ ರಾಮಮಂದಿರ ರಸ್ತೆಯ ಮುಖಾಂತರ ವೆಸ್ಟ್ ಆಫ್ ಕಾರ್ಡ್ ರಸ್ತೆಗೆ ತೆರಳಿ ಸಂಚರಿಸಬೇಕಿದೆ. ಇದನ್ನೂ ಓದಿ: ಮಂಡ್ಯದ ರೈತರಿಗೆ ಸಂಕಷ್ಟ; ಅರ್ಧದಷ್ಟು ಕಬ್ಬು ಇದ್ದರೂ ಮೈಶುಗರ್ ಬಂದ್
