ಕೊಡಗು: ಮಡಿಕೇರಿ (Madikeri) ಜಿಲ್ಲೆಯಲ್ಲಿ ಮುಂಗಾರಿನ ವರುಣಾರ್ಭಟ ಜೋರಾಗಿದೆ. ಭಾರೀ ಮಳೆಯಿಂದಾಗಿ ಕಾವೇರಿ ನದಿ (Cauvery River) ಉಕ್ಕಿ ಹರಿಯುತ್ತಿದೆ. ನದಿ ನೀರಿನ ಪ್ರಮಾಣ ಹೆಚ್ಚಾಗಿದ್ದರಿಂದ ಹಲವೆಡೆ ಮನೆಗಳಿಗೆ ನೀರು ನುಗ್ಗಿದೆ.
ಕುಶಾಲನಗರದ ಸಾಯಿ ಬಡಾವಣೆಗೆ ಕಾವೇರಿ ನದಿ ನೀರು ನುಗ್ಗಿದೆ. ಸಾಯಿ ಬಡಾವಣೆ ಜಲಾವೃತಗೊಳ್ಳುವ ಆತಂಕ ಎದುರಾಗಿದೆ. ಬಡಾವಣೆ ನಿವಾಸಿಗಳು ರಾತ್ರೋರಾತ್ರಿ ಮನೆಗಳನ್ನು ಖಾಲಿ ಮಾಡುತ್ತಿದ್ದಾರೆ. ಮನೆಯ ಎಲ್ಲಾ ವಸ್ತುಗಳನ್ನ ತುಂಬಿಕೊಂಡು ಬೇರೆಡೆಗೆ ಸ್ಥಳಾಂತರವಾಗುತ್ತಿದ್ದಾರೆ. ಇದನ್ನೂ ಓದಿ: ಮಡಿಕೇರಿ-ಮಂಗಳೂರು ಹೈವೇಯಲ್ಲಿ ಗುಡ್ಡ ಕುಸಿತ
Advertisement
Advertisement
ಸ್ಥಳೀಯರು ಮನೆಗಳ ಖಾಲಿ ಮಾಡಲು ಸೇವಾ ಭಾರತಿ ಸ್ವಯಂ ಸೇವಕರು ಸಹಾಯಹಸ್ತ ಚಾಚಿದ್ದಾರೆ. ಕ್ಷಣ ಕ್ಷಣಕ್ಕೂ ನೀರಿನ ಮಟ್ಟ ಏರಿಕೆ ಆಗುತ್ತಿದ್ದು, ಜನರು ಆತಂಕಗೊಂಡು ಮನೆಗಳನ್ನ ಖಾಲಿ ಮಾಡುತ್ತಿದ್ದಾರೆ.
Advertisement
Advertisement
ಇನ್ನೂ ಜಿಲ್ಲೆಯ ಬಹುತೇಕ ಗ್ರಾಮೀಣ ಪ್ರದೇಶದಲ್ಲಿ ಕಾವೇರಿ ನೀರಿನ ಮಟ್ಟ ಏರಿಕೆಗೊಂಡ ಪರಿಣಾಮ ಹಲವು ಗ್ರಾಮಗಳ ಸಂಪರ್ಕ ಕಡಿತಗೊಂಡು ಜನಜೀವನ ಅಸ್ತವ್ಯಸ್ತವಾಗಿದೆ. ಇಂದು ಕೊಡಗು ಜಿಲ್ಲೆಗೆ ಕಂದಾಯ ಸಚಿವ ಕೃಷ್ಣ ಭೈರೇಗೌಡ ಹಾಗೂ ಉಸ್ತುವಾರಿ ಸಚಿವ ಬೋಸರಾಜು ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಲಿದ್ದಾರೆ. ಮಳೆಹಾನಿಗೆ ಸಂಬಂಧಿಸಿದಂತೆ ವಿವಿಧ ಇಲಾಖೆಯ ಆದಿಕಾರಿಗಳ ಜೊತೆ ಚರ್ಚೆ ನಡೆಸಲಿದ್ದಾರೆ. ಇದನ್ನೂ ಓದಿ: ಮಂಗಳವಾರ ದಕ್ಷಿಣ ಕನ್ನಡ ಜಿಲ್ಲಾದ್ಯಂತ ಶಾಲಾ, ಕಾಲೇಜುಗಳಿಗೆ ರಜೆ
ಗರಿಷ್ಠ ಮಟ್ಟ – 124.80 ಅಡಿಗಳು
ಇಂದಿನ ಮಟ್ಟ – 100 ಅಡಿಗಳು
ಗರಿಷ್ಠ ಸಾಂದ್ರತೆ – 49.452 ಟಿಎಂಸಿ
ಇಂದಿನ ಸಾಂದ್ರತೆ – 22.809 ಟಿಎಂಸಿ
ಒಳ ಹರಿವು – 48,025 ಕ್ಯೂಸೆಕ್
ಹೊರ ಹರಿವು – 5,449 ಕ್ಯೂಸೆಕ್
Web Stories