Connect with us

Districts

ಮಹಾರಾಷ್ಟ್ರ, ರಾಜ್ಯದ ವಿವಿಧೆಡೆ ಭಾರೀ ಮಳೆ- ಉಕ್ಕಿ ಹರಿಯಿತು ಭೀಮಾ

Published

on

ಯಾದಗಿರಿ: ಮಾಹರಾಷ್ಟ್ರ ಹಾಗೂ ರಾಜ್ಯದಲ್ಲಿ ಮಳೆಯಾಗುತ್ತಿರುವುದರಿಂದ ಭೀಮಾ ನದಿಯು ಉಕ್ಕಿ ಹರಿಯುತ್ತಿದೆ. ಜಿಲ್ಲೆಯ ಜೀವನಾಡಿಯಾದ ಭೀಮಾ ನದಿಯು ಈಗ ಸಂಪೂರ್ಣವಾಗಿ ಭರ್ತಿಯಾಗುತ್ತಿದೆ.

ಕಳೆದ ವರ್ಷ ಮಳೆ ಇಲ್ಲದೆ ಬತ್ತಿದ ಕೆರೆ, ಹಳ್ಳ-ಕೊಳ್ಳಗಳು ಇದೀಗ ತುಂಬಿ ಹರಿಯುತ್ತಿದ್ದು, ತಗ್ಗು ಪ್ರದೇಶಗಳೆಲ್ಲ ಜಲಾವೃತಗೊಂಡಿವೆ. ಭೀಮಾ ನದಿಯಲ್ಲಿ ದಿನೇ ದಿನೇ ನೀರಿನ ಪ್ರಮಾಣದಲ್ಲಿ ಏರಿಕೆ ಕಾಣುತ್ತಿದ್ದು ವರುಣ ಇನ್ನಷ್ಟು ತನ್ನ ಅಬ್ಬರ ತೋರಿದರೆ ನದಿಯ ಒಡಲು ಸಂಪೂರ್ಣ ಭರ್ತಿಯಾಗಲಿದೆ.

ಕಲಬುರರ್ಗಿ ಜಿಲ್ಲೆಯ ಸನ್ನತಿ ಬ್ಯಾರೇಜ್ ನಲ್ಲಿ ಹಿನ್ನೀರು ಹೆಚ್ಚಿನ ಪ್ರಮಾಣದಲ್ಲಿ ಶೇಖರೆಣೆವಾಗಿದರಿಂದ ಹೆಚ್ಚಿನ ಪ್ರಮಾಣದ ನೀರು ಭೀಮಾ ನದಿಗೆ ಹೊರಗಡೆ ಹರಿಸಲಾಗುತ್ತಿದೆ. ಹೀಗಾಗಿ ಯಾದಗಿರಿಯ ಅಡ್ಡಲಾಗಿ ನಿರ್ಮಿಸಲಾಗಿರುವ ಗುರುಸಣಗಿ ಬ್ಯಾರೇಜ್ ನಲ್ಲಿ ಹದಿನೈದು ಮೀಟರ್ ನೀರು ಸಂಗ್ರಹವಾಗಿದ್ದು ಹೆಚ್ಚು ನೀರು ಗೇಟ್ ಮೂಲಕ ನದಿಗೆ ನೀರು ಹರಿಸಲಾಗುತ್ತಿದೆ.

ನಗರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಾಂತರ ಜನರಿಗೆ ಈ ಬಾರಿ ನೀರಿನ ಕೊರತೆ ನೀಗಿಸಬಹುದಾಗಿದೆ. ಇನ್ನೂ ಗುರುಸಣಗಿ ಬ್ಯಾರೇಜ್ ತುಂಬಿದ್ದರಿಂದ ಸುಮಾರು 5,000 ಎಕರೆ ಜಮೀನು ನೀರಾವರಿ ಪ್ರದೇಶದ ರೈತರು ಕೃಷಿ ಚಟುವಟಿಕೆಯಲ್ಲಿ ಮುಂದಾಗಿದ್ದಾರೆ. ನದಿ ಸಂಪೂರ್ಣವಾಗಿ ಮೈದುಂಬಿ ಹರಿಯುತಿರುವುದರಿಂದ ಮುನ್ನೇಚ್ಚರಿಕೆಯಾಗಿ ನದಿ ಪಾತ್ರ ಗ್ರಾಮಸ್ಥರಿಗೆ ನದಿಯ ಕಡೆ ತೆರಳದಂತೆ ಕೃಷ್ಣಾ ಭಾಗ್ಯ ಜಲ ನಿಗಮ ಅಧಿಕಾರಿಗಳು ಸೂಚಿಸಿದ್ದಾರೆ.

Click to comment

Leave a Reply

Your email address will not be published. Required fields are marked *

www.publictv.in