ಅರಬ್ಬಿ ಸಮುದ್ರದ ಮೇಲ್ಮೈನಲ್ಲಿ ಸುಳಿಗಾಳಿ – ರಾಜ್ಯಾದ್ಯಂತ ಅಬ್ಬರಿಸ್ತಿದೆ ಮಳೆ

Public TV
2 Min Read
RAIN 9 1

– ಭಾರೀ ಮಳೆಗೆ ನಾಲ್ವರು ಬಲಿ
– ಮೈಸೂರು ದಸರಾ ಸಂಭ್ರಮಕ್ಕೂ ಮಳೆ ಅಡ್ಡಿ
– 3 ದಿನ ಯೆಲ್ಲೋ ಅಲರ್ಟ್ ಘೋಷಣೆ

ಬೆಂಗಳೂರು: ಅರಬ್ಬಿ ಸಮುದ್ರದ ಮೇಲ್ಮೈನಲ್ಲಿ ಸುಳಿಗಾಳಿ ಪರಿಣಾಮ ರಾಜ್ಯಾದ್ಯಂತ ವರುಣನ ಅಬ್ಬರ ಜೋರಾಗಿದೆ. ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಮಳೆಯಾಗುತ್ತಿದ್ದು, ಹಲವು ಜಿಲ್ಲೆಗಳಲ್ಲಿ ವರುಣನ ಅವಾಂತರ ಸೃಷ್ಟಿಯಾಗಿದೆ. ರಾಜ್ಯದಲ್ಲಿ ನಿನ್ನೆ ಸುರಿದ ಮಳೆಗೆ ನಾಲ್ವರು ಬಲಿಯಾಗಿದ್ದಾರೆ.

RAIN DEATH

ದಾವಣಗೆರೆಯಲ್ಲಿ ಮಳೆಯಿಂದಾಗಿ ಕರೆಂಟ್ ಶಾಕ್‍ಗೆ ಯುವಕ ಬಲಿಯಾಗಿದ್ದಾನೆ. ಯಲ್ಲಮ್ಮನಗರದ ಕುಂದುವಾಡ ರಸ್ತೆಯ ಬಳಿ ಘಟನೆ ಸಂಭವಿಸಿವೆ. ಭರತ್ ಕಾಲೋನಿ ಯುವಕ ಮನೋಜ್ ಮೂತ್ರ ವಿಸರ್ಜನೆಗೆ ಅಂತ ಹೋಗಿದ್ದ ಸಂದರ್ಭದಲ್ಲಿ ವಿದ್ಯುತ್ ಕಂಬ ಗ್ರೌಂಡ್ ಆಗಿದೆ. ಪರಿಣಾಮ ಶಾಕ್ ಹೊಡೆದು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

RAIN 7

ಬೆಳಗಾವಿ ಜಿಲ್ಲೆಯಲ್ಲಿ ಮಳೆಗೆ ಇಬ್ಬರು ಸಹೋದರರು ಬಲಿಯಾಗಿದ್ದಾರೆ. ತಗಡಿನ ಶೆಡ್ ಕುಸಿದ ಪರಿಣಾಮ ವಿದ್ಯುತ್ ಶಾಕ್ ಹೊಡೆದಿದೆ. ದುರ್ಘಟನೆಯಲ್ಲಿ ಇಬ್ಬರು ಸಹೋದರರು ಸ್ಥಳದಲ್ಲೇ ದುರ್ಮರಣ ಹೊಂದಿದ್ದಾರೆ. ಬೆಳಗಾವಿ ತಾಲೂಕಿನ ದೇಸೂರ ಗ್ರಾಮದಲ್ಲಿ ಘಟನೆ ನಡೆದಿದ್ದು, ಬಸವರಾಜ್ ವಡ್ಡರ್, ವೆಂಕಟೇಶ ವಡ್ಡರ್ ಸಾವನ್ನಪ್ಪಿದ್ದಾರೆ. ಇನ್ನು ಬೆಂಗಳೂರಿನಲ್ಲಿ ಸಿಡಿಲು ಬಡಿದು 46 ವರ್ಷದ ತಿಪ್ಪೆಸ್ವಾಮಿ ಎಂಬುವರು ಸಾವಿಗೀಡಾಗಿದ್ದಾರೆ.

RAIN 2 1

ರಾಯಚೂರು ತಾಲೂಕಿನ ವಿವಿಧೆಡೆ ಸುರಿದ ಮಳೆಗೆ ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ. ಇಡಪನೂರು ಗ್ರಾಮದ ಹಳ್ಳದ ಸೇತುವೆ ಭಾಗಶಃ ಹಾಳಾಗಿವೆ. ಹಳ್ಳ ತುಂಬಿ ಹರಿಯುತ್ತಿದ್ದು ಇಡಪನೂರು – ಪಂಚಮುಖಿ ಮಾರ್ಗ ಬಂದ್ ಆಗಿದೆ. ಹಾಳಾದ ಸೇತುವೆ ಮೇಲೆಯೇ ಜನರು ಜೀವ ಕೈಯಲ್ಲಿ ಹಿಡಿದು ಓಡಾಡುವಂತಾಗಿದೆ. ತಗ್ಗು ಗುಂಡಿಗಳೇ ಇರುವ ಸೇತುವೆ ಮೇಲೆ ಬೈಕ್ ಸವಾರರು ಹರಸಾಹಸ ಪಡ್ತಿದ್ದಾರೆ. ಇನ್ನು ಥಿಯೇಟರ್ ಒಂದಕ್ಕೆ ಮಳೆ ನೀರು ನುಗ್ಗಿ ಜಲಪಾತದಂತೆ ಹರಿಯುತ್ತಿತ್ತು. ಇಡೀ ಥಿಯೇಟರ್ ಮಳೆ ನೀರಿನಿಂದ ಜಲಾವೃತವಾಗಿತ್ತು. ಇದನ್ನೂ ಓದಿ: ಸ್ವಪ್ರತಿಷ್ಠೆಗೋಸ್ಕರ ಬಡ ಮಕ್ಕಳ ಶಿಕ್ಷಣಕ್ಕೆ ಕೊಳ್ಳಿಯಿಟ್ಟ ಬಾಬುರಾವ್ ಚಿಂಚನಸೂರ್

RAIN 9

ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಮಳೆ ಅವಾಂತರವನ್ನೇ ಸೃಷ್ಟಿಸಿದೆ. ಭಾರೀ ಮಳೆಯಿಂದಾಗಿ ನೀರು ಬಸ್ ನಿಲ್ದಾಣಕ್ಕೆ ನುಗ್ಗಿ ಪ್ರಯಾಣಿಕರು ಪರದಾಡುವಂತಾಯ್ತು. ಸತತ 2 ಗಂಟೆಗಳ ಕಾಲ ಸುರಿದ ಮಳೆಯಿಂದಾಗಿ ತಗ್ಗು ಪ್ರದೇಶಗಳು ಜಲಾವೃತವಾದವು. ಇನ್ನು ವಿಶ್ವ ವಿಖ್ಯಾತ ಮೈಸೂರು ದಸರಾ ಸಂಭ್ರಮಕ್ಕೂ ಮಳೆ ಅಡ್ಡಿಯಾಗಿದೆ. ನಿನ್ನೆ ಸಂಜೆ ಅರಮನೆ ಮುಂಭಾಗ ಹಮ್ಮಿಕೊಂಡಿದ್ದ ಸಾಂಸ್ಕøತಿಕ ಕಾರ್ಯಕ್ರಮಕ್ಕೆ ಮಳೆ ಅಡ್ಡಿಯಾಯ್ತು. ವಿವಿಐಪಿ ಆಸನಗಳು, ವೇದಿಕೆ ಎಲ್ಲವೂ ಮಳೆ ನೀರಿನಲ್ಲಿ ತೋಯ್ದು ತೊಪ್ಪೆ ಆಗಿತ್ತು. ಇನ್ನು ಮೈಸೂರಲ್ಲಿ ರಾತ್ರಿಯಾಗ್ತಿದ್ದಂತೆ ವಿದ್ಯುತ್ ದೀಪಾಲಂಕಾರ ನೋಡೋದೇ ಚಂದ. ಆದರೆ ಮಳೆಯಿಂದಾಗಿ ವಿದ್ಯುತ್ ದೀಪಾಲಂಕಾರ ಸ್ಥಗಿತಗೊಳಿಸಲಾಗಿದೆ. ರಾಮಸ್ವಾಮಿ ವೃತ್ತದಲ್ಲಿ ಶಾರ್ಟ್‍ ಸರ್ಕ್ಯೂಟ್ ಆಗಿತ್ತು. ಈ ಹಿನ್ನೆಲೆಯಲ್ಲೂ ಎಚ್ಚೆತ್ತುಕೊಂಡ ಚೆಸ್ಕಾಂ ಲೈಟಿಂಗ್ಸ್ ಆಫ್ ಮಾಡ್ತು. ಇದನ್ನೂ ಓದಿ: ರೈಲಿನಲ್ಲಿ ಮರೆತ 7.31 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಹಿಂದಿರುಗಿಸಿದ ರೈಲ್ವೇ ಭದ್ರತಾ ಪಡೆ

RAIN 8

ಕೋಟೆನಾಡು ಚಿತ್ರದುರ್ಗದಲ್ಲಿ ಮಳೆ ಅಬ್ಬರಕ್ಕೆ ಹೊಸದುರ್ಗ ತಾಲೂಕಿನ ಮಾಚೇನಹಳ್ಳಿ ಗ್ರಾಮ ಸರ್ಕಾರಿ ಶಾಲೆ ಜಲಾವೃತವಾಗಿತ್ತು. ಶಾಲೆಯೊಳಗಿನ ಪುಸ್ತಕ, ದಾಖಲೆಗಳು, ಪೀಠೋಪಕರಣ, ಆಟದ ಸಾಮಾಗ್ರಿಗಳು ನೀರುಪಾಲಾದ್ವು. ಗ್ರಾಮಸ್ಥರು, ಮಕ್ಕಳು ಶಾಲೆಗೆ ಧಾವಿಸಿ ಶಾಲಾ ಸಾಮಗ್ರಿಗಳನ್ನು ರಕ್ಷಿಸಿದ್ರು. ಇನ್ನು ಹಾಲುರಾಮೇಶ್ವರದಲ್ಲಿ ಗುಡುಗು-ಸಿಡಿಲು ಸಹಿತ 1 ಗಂಟೆಗೂ ಹೆಚ್ಚು ಕಾಲ ಜೋರು ಮಳೆಯಾಯ್ತು. ಇತ್ತ ಬಾಗಲಕೋಟೆ ಜಿಲ್ಲೆಯಲ್ಲೂ ಧಾರಾಕಾರ ಮಳೆಯಾಗಿದೆ. ಇಳಕಲ್ ತಾಲೂಕಿನ ಬೇಕಮಲದಿನ್ನಿ ಗ್ರಾಮದ ಹಳ್ಳ ತುಂಬಿ ಹರಿದ ಪರಿಣಾಮ ಹುನಗುಂದ-ಕರಡಿ ರಸ್ತೆ ಮಾರ್ಗ ಬಂದ್ ಆಗಿತ್ತು. ಹಳ್ಳದ ನೀರಿನಲ್ಲಿ ಬಸ್ ಸಿಲುಕಿ ಪ್ರಯಾಣಿಕರು ಪರದಾಡುವಂತಾಯ್ತು. ಟ್ರ್ಯಾಕ್ಟರ್ ಮೂಲಕ ಬಸ್ ಹೊರಗೆಳೆಯಲು ಹರಸಾಹಸಪಡುವಂತಾಯ್ತು.

Share This Article
Leave a Comment

Leave a Reply

Your email address will not be published. Required fields are marked *