-ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದರೂ ಆಹ್ವಾನಿಸಿಲ್ಲ ಅಂತ ಸುಳ್ಳು ಹೇಳಿಕೆ
-ಸಾಕ್ಷಿ ಸಮೇತ ಬಾಬುರಾವ್‍ಗೆ ಟಾಂಗ್ ಕೊಟ್ಟ ಜಿಲ್ಲಾಡಳಿತ
ಯಾದಗಿರಿ: ಜಿಲ್ಲೆಯ ಬಂದಳ್ಳಿಯ ಹೊರ ವಲಯದಲ್ಲಿ ನಿರ್ಮಾಣಗೊಂಡಿರುವ ಏಕಲವ್ಯ ವಸತಿ ಶಾಲೆ ಉದ್ಘಾಟನ ಸಮಾರಂಭದಲ್ಲಿ, ರಾಜಕೀಯ ಸ್ವ ಪ್ರತಿಷ್ಠೆಗಾಗಿ ಮಾಜಿ ಸಚಿವ ಹಾಗೂ ಅಂಬಿಗರ ಚೌಡಯ್ಯ ನಿಗಮದ ಅಧ್ಯಕ್ಷ ಬಾಬುರಾವ್ ಚಿಂಚನಸೂರ್ ಬಡ ಮಕ್ಕಳ ಶಿಕ್ಷಣಕ್ಕೆ ಕೊಳ್ಳಿಯಿಟ್ಟಿದ್ದಾರೆ.
ತಮ್ಮನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿಲ್ಲ ಎಂದು ಜಿಲ್ಲಾಡಳಿತ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಬಾಬುರಾವ್ ಚಿಂಚನಸೂರ್, ಉದ್ಘಾಟನೆಗೆ ಆಗಮಿಸಿದ್ದ ಸಚಿವ ಶ್ರೀರಾಮುಲು ಅವರ ಕಾರನ್ನು ಹೈಡ್ರಾಮಾ ಅಡ್ಡಗಟ್ಟಿ ಮಾಡಿದರು. ರಾಮುಲು ಕೂಡ ತಮ್ಮ ಪಕ್ಷದ ಹಿರಿಯರು ಅನ್ನೋ ಕಾರಣಕ್ಕೆ ಶಾಲೆ ಉದ್ಘಾಟನೆ ರದ್ದು ಮಾಡಿಕೊಂಡು, ತೆರಳುತ್ತಿದ್ದ ಮಾರ್ಗ ಮಧ್ಯೆಯೇ ವಾಹನ ತಿರುಗಿಸಿಕೊಂಡು ಯಾದಗಿರಿ ನಗರಕ್ಕೆ ವಾಪಸು ಆಗಿದ್ದರು. ಇದನ್ನೂ ಓದಿ: ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ಹೈಡ್ರಾಮ..!
Advertisement
Advertisement
ಇದು ನನ್ನ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುತ್ತದೆ. ನಾನು ಸಾಕಷ್ಟು ಹೋರಾಟ ಮಾಡಿ ಈ ಶಾಲೆಯನ್ನು ತಂದಿದ್ದೇನೆ. ಆದರೆ ಜಿಲ್ಲಾಡಳಿತ ನನಗೆ ಒಂದು ಮಾತು ತಿಳಿಸದೆ, ಉದ್ಘಾಟನೆ ಮಾಡಲು ಮುಂದಾಗಿದೆ. ಅಧಿಕಾರಿಗಳು ನನಗೆ ಅವಮಾನ ಮಾಡಿದ್ದಾರೆ ಎನ್ನುವುದು ಬಾಬುರಾವ್‍ರ ಗಂಭೀರ ಆರೋಪವಾಗಿದೆ.
Advertisement
Advertisement
ಬಾಬುರಾವ್ ಚಿಂಚನಸೂರ್ ವರ್ತನೆಯಿಂದ ಕಂಗಾಲಾದ ಜಿಲ್ಲಾಡಳಿತ, ತಪ್ಪು ನಡೆದಿರುವ ಬಗ್ಗೆ ತನಿಖೆ ನಡೆಸಲು ಮುಂದಾಗಿದೆ. ಜಿಲ್ಲಾಡಳಿತ ತನಿಖೆಯಲ್ಲಿ ಅಸಲಿ ಸತ್ಯ ಹೊರಬಿದ್ದಿದ್ದು, ಬಾಬುರಾವ್ ಚಿಂಚನಸೂರ್ ರಿಗೆ ಕಾರ್ಯಕ್ರಮಕ್ಕೆ ಆಹ್ವಾನಿಸಿಲಾಗಿತ್ತು ಎಂಬ ಅಂಶ ಸಾಭೀತಾಗಿದೆ. ಶಾಲೆಯ ಆಮಂತ್ರಣ ಪತ್ರಿಕೆಯಲ್ಲಿ ಬಾಬುರಾವ್ ಚಿಂಚನಸೂರ್ ಹೆಸರು ಕೂಡ ಇದೆ. ಅಕ್ಟೋಬರ್ 8ರಂದು ಸ್ವತಃ ಅಧಿಕಾರಿಗಳೇ ಬಾಬುರಾವ್ ಚಿಂಚನಸೂರ ಕಲಬುರಗಿಯ ನಿವಾಸಕ್ಕೆ ತೆರಳಿ, ಆಹ್ವಾನ ಪತ್ರಿಕೆ ನೀಡಿದ್ದಾರೆ. ಇದನ್ನೂ ಓದಿ: ರೈಲಿನಲ್ಲಿ ಮರೆತ 7.31 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಹಿಂದಿರುಗಿಸಿದ ರೈಲ್ವೇ ಭದ್ರತಾ ಪಡೆ
ಆದರೆ ಸಿಂದಗಿ ಉಪ ಚುನಾವಣೆಯಲ್ಲಿ ಬಾಬುರಾವ್ ಬ್ಯುಸಿ ಆಗಿರುವುದರಿಂದಾಗಿ ಅವರು ಮನೆಯಲ್ಲಿ ಇರಲಿಲ್ಲ. ಅಧಿಕಾರಿಗಳನ್ನು ಸೆಕ್ಯೂರಿಟಿ ಗಾರ್ಡ್ ಮನೆಯೊಳಗೆ ಬಿಡದೆ. ತಾನೇ ಪತ್ರಿಕೆ ತೆಗೆದುಕೊಂಡು ಅಧಿಕಾರಿಗಳ ಡೈರಿಗೆ ಸಹಿ ಸಹ ಹಾಕಿದ್ದು, ವಾಟ್ಸ್ ಆಪ್ ಮೂಲಕ ಪತ್ರಿಕೆ ಚಿಂಚನಸೂರಿಗೆ ಹಾಕುವುದಾಗಿ ತಿಳಿಸಿದ್ದಾನೆ. ಈ ಸಂದರ್ಭದಲ್ಲಿ ಅಧಿಕಾರಿಗಳು ಫೋಟೋ ಸಹ ಕ್ಲಿಕ್ಕಿಸಿದ್ದಾರೆ. ಈ ಸತ್ಯವನ್ನು ಸಾಕ್ಷಿ ಸಮೇತ ಜಿಲ್ಲಾಡಳಿತ ಹೊರಹಾಕಿದೆ.