ಮಂಗಳೂರು: ಸತತ 2 ವಾರಗಳ ಮುಂಗಾರು ಆರ್ಭಟಕ್ಕೆ ದಕ್ಷಿಣ ಕನ್ನಡ ಜಿಲ್ಲೆ ತತ್ತರಿಸಿ ಹೋಗಿದೆ.
ಮಂಗಳೂರಿನ ಅದ್ಯಪಾಡಿಯ ಮುಗೇರ್ ಕುದ್ರು ಎಂಬ ಗ್ರಾಮ ಸಂಪೂರ್ಣ ಜಲಾವೃತವಾಗಿದೆ. ಮನೆಯಂಗಳದಿಂದ ಮನೆಯೊಳಗೆ ನೆರೆ ನೀರು ನುಗ್ಗಲಾರಂಭಿಸಿದೆ. ಯಾವಾಗ ಮನೆಯೊಳಗೆ ನೀರು ನುಗ್ಗುತ್ತೆ ಅನ್ನೋ ಆತಂಕದಲ್ಲಿ ಜನ ಜೀವ ಕೈಯಲ್ಲಿಡಿದು ದಿನ ಕಳೆಯುತ್ತಿದ್ದಾರೆ.
Advertisement
Advertisement
ಪೊಳಲಿ ಕ್ಷೇತ್ರದಿಂದ ಹರಿದು ಬರುವ ಫಲ್ಗುಣಿ ನದಿ ಉಕ್ಕಿ ಹರಿದು ಅದ್ಯಪಾಡಿಯ ಮೊಗೇರ್ ಗ್ರಾಮವನ್ನು ಮುಳುಗಡೆ ಮಾಡಿದೆ. ದ್ವೀಪದಂತಾಗಿರುವ ಈ ಗ್ರಾಮದ ಸುಮಾರು 35ಕ್ಕೂ ಹೆಚ್ಚು ಮನೆಯಿರುವ ಇಲ್ಲಿನ ಜನ ಮನೆಯಿಂದ ಹೊರ ಬರದ ಪರಿಸ್ಥಿತಿಯಲ್ಲಿದ್ದಾರೆ. ಸಂಗ್ರಹಿಸಿಟ್ಟಿದ್ದ ದಿನ ಬಳಕೆ ವಸ್ತುಗಳನ್ನೇ ತಿಂದು ದಿನದೂಡುವ ಪರಿಸ್ಥಿತಿ ಎದುರಾಗಿದೆ. ಇದನ್ನೂ ಓದಿ: ಪೊಲೀಸರು ಹಿಂದೂಗಳನ್ನಷ್ಟೇ ಹಿಡಿಯುವುದು: ಯತ್ನಾಳ್
Advertisement
Advertisement
ಮರವೂರು ಎಂಬಲ್ಲಿ ಇರುವ ಕಿಂಡಿ ಅಣೆಕಟ್ಟಿನ ಅವೈಜ್ಞಾನಿಕ ಕಾಮಗಾರಿಯಿಂದಾಗಿ ನೀರು ಸರಾಗವಾಗಿ ಇಳಿದು ಹೋಗದಿರೋದ್ರಿಂದ ಇಲ್ಲಿ ಇಷ್ಟೊಂದು ಪ್ರಮಾಣದಲ್ಲಿ ನೀರು ತುಂಬಿದೆ. ಕೃಷಿ ಭೂಮಿ ಸಂಪೂರ್ಣ ಮುಳುಗಡೆಯಾಗಿದ್ದು ಜನ ಮನೆಯಿಂದ ಹೊರಬರದ ಸ್ಥಿತಿ ನಿರ್ಮಾಣವಾಗಿದೆ. ಈ ಎಲ್ಲಾ ದೃಶ್ಯಗಳು ಕರುಣಾಜನಕವಾಗಿದೆ.