ಬೆಂಗಳೂರು: ಯಶವಂತಪುರ ಕ್ಷೇತ್ರದ ಎಂಆರ್ ಲೇಔಟ್ ನಿವಾಸಿಗಳಿಗೆ ಡೆಂಗ್ಯೂ (Dengue Fever) ಭೀತಿ ಶುರುವಾಗಿದೆ. ಮನೆಗಳ ಮುಂದೆಯೇ ಕಸ ಬಿದ್ದಿದ್ದು, ವಿಲೇವಾರಿ ಮಾಡದ ಪಾಲಿಕೆಯ ಸಿಬ್ಬಂದಿ ವಿರುದ್ಧ ಜನ ಆಕ್ರೋಶ ಹೊರಹಾಕಿದ್ದಾರೆ.
ಬೆಂಗಳೂರಿನಲ್ಲಿ ಡೆಂಗ್ಯೂ ದಿನೇದಿನೇ ಆತಂಕ ಸೃಸ್ಟಿಸ್ತಿದೆ. ಬಿಬಿಎಂಪಿ ಕಮಿಷನರ್ ನಾನಾ ಕಸರತ್ತು ನಡೆಸುತ್ತಿದ್ರೂ ನಿಯಂತ್ರಣಕ್ಕೆ ಸಿಗ್ತಿಲ್ಲ. ಇದೇ ಡೆಂಗ್ಯೂ ಭೀತಿಯಿಂದ ಯಶವಂತಪುರ ಕ್ಷೇತ್ರದ ಎಂಆರ್ ಲೇಔಟ್ ನಿವಾಸಿಗಳು ಅಕ್ಷರಶಃ ಭಯಭೀತಗೊಂಡಿದ್ದಾರೆ. ಫುಟ್‍ಪಾತ್ ಮೇಲಿನ ಕಸ ವಿಲೇವಾರಿ ಮಾಡದೇ ಇರೋದ್ರಿಂದ ಸೊಳ್ಳೆಗಳು ಕಾಟ ವಿಪರೀತವಾಗಿವೆ. ಹೀಗಾಗಿ ಜನ ತಮ್ಮ ಮನೆಗಳ ಕಿಟಕಿ, ಬಾಗಿಲು ಕ್ಲೋಸ್ ಮಾಡಿಕೊಂಡೇ ವಾಸ ಮಾಡುತ್ತಿದ್ದಾರೆ.
ಕಳೆದೊಂದು ವಾರದಿಂದ ಎಂಆರ್ ಲೇಔಟ್ ಜನರಲ್ಲಿ ಜ್ವರ ಕಾಣಿಸಿಕೊಳ್ತಿದೆ. ಕಸ ವಿಲೇವಾರಿ ಮಾಡುವಂತೆ ಪಾಲಿಕೆಯ ಅಧಿಕಾರಿಗಳಿಗೆ ಹೇಳಿದ್ರೂ ಯಾವುದೇ ಪ್ರಯೋಜನ ಆಗಿಲ್ಲ. ಆರೋಗ್ಯ ಹದಗೆಟ್ಟು ಕಾಯಿಲೆಗಳು ಬಂದ್ರೆ ನಮಗೆ ಯಾರು ಗತಿ ಅಂತ ಕಿಡಿಕಾರಿದ್ದಾರೆ. ಇದನ್ನೂ ಓದಿ: ಹೊಳಲ್ಕೆರೆಯ ದೀಪಿಕಾಳ ಸಿಎ ಕನಸಿಗೆ ಪಬ್ಲಿಕ್ ಬೆಳಕು- ವಿದ್ಯಾರ್ಥಿನಿಗೆ ಸಿಕ್ತು ಆರ್ಥಿಕ ನೆರವು
ಇತ್ತ ಮನೆಗಳ ಸುತ್ತಮುತ್ತ ಸ್ವಚ್ಛತೆ ಕಾಪಾಡಬೇಕು ಇಲ್ಲದಿದ್ರೆ ದಂಡ ಹಾಕ್ತೀವಿ ಅಂತ ಕಮಿಷನರ್ ಸೂಚನೆ ನೀಡಿದ್ದಾರೆ. ಆದ್ರೆ ಪಾಲಿಕೆಯ ಕೆಲ ಸಿಬ್ಬಂದಿಯೇ ಆಯಾ ಏರಿಯಾಗಳಲ್ಲಿ ಕಸ ವಿಲೇವಾರಿ ಮಾಡಿಸ್ತಿಲ್ಲ. ಅದೇನೆ ಆಗ್ಲಿ ಅನಾರೋಗ್ಯ ಸೃಷ್ಟಿಯಾಗೋ ಮುನ್ನವೇ ಏರಿಯಾ ಜನರ ಆರೋಗ್ಯ ಕಾಪಾಡಬೇಕಿದೆ.