ಚಿತ್ರದುರ್ಗ: ಹಿರಿಯೂರು ಕ್ಷೇತ್ರದಲ್ಲಿ ಮಾಜಿ ಸಚಿವ ಎ.ಕೃಷ್ಣಪ್ಪ ಅವರು ತಮ್ಮದೇ ಆದ ಚಾಪು ಮೂಡಿಸಿದ್ದರು. ಇವರ ಮಗಳು ಕೆ. ಪೂರ್ಣಿಮಾ ಶ್ರೀನಿವಾಸ್ (Poornima Srinivas). ತಂದೆಯ ಸಾವಿನ ಬಳಿಕ ಅನುಕಂಪದ ಅಲೆಯ ಮೇಲೆ ಮತದಾರರು ಪೂರ್ಣಿಮಾರನ್ನೂ ಗೆಲ್ಲಿಸಿದ್ದರು.
ಪೂರ್ಣಿಮಾ ಹಿರಿಯೂರು ಕ್ಷೇತ್ರದಲ್ಲಿ ಬಿಎಸ್‌ವೈ (BS Yediyurappa) ಕೃಪಾಕಟಾಕ್ಷದೊಂದಿಗೆ ಮೊಟ್ಟ ಮೊದಲ ಬಾರಿಗೆ ಕಮಲ ಅರಳಿಸಿದ ಮಹಿಳಾ ಶಾಸಕಿಯಾದರು. ಬಿಜೆಪಿಗೆ (BJP) ನೆಲೆ ಇಲ್ಲದ ಕ್ಷೇತ್ರದಲ್ಲಿ ಆಯ್ಕೆಯಾಗಿ ಬಿಜೆಪಿ ಬಾವುಟ ಕಟ್ಟಿದ ಮಹಿಳೆ ಮಂತ್ರಿಸ್ಥಾನಕ್ಕೆ ಹೆಸರು ಕೇಳಿಬಂದಿತ್ತು. ಇದನ್ನೂ ಓದಿ: ಸೆರಗೊಡ್ಡಿ ಮತಯಾಚನೆ ಮಾಡಿದ ಕಾಂಗ್ರೆಸ್ ಅಭ್ಯರ್ಥಿ ಚಿಂಚನಸೂರ್ ಪತ್ನಿ ಅಮರೇಶ್ವರಿ
Advertisement
Advertisement
ಈ ಬಾರಿ ಚುನಾವಣೆಯಲ್ಲೂ ಪೂರ್ಣಿಮಾ ಶ್ರೀನಿವಾಸ್ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದು, ಕಾಂಗ್ರೆಸ್‌ನಿಂದ ಮಾಜಿ ಸಚಿವ ಡಿ.ಸುಧಾಕರ್ ಸ್ಪರ್ಧೆಯಲ್ಲಿದ್ದಾರೆ. ಜೆಡಿಎಸ್ (JDS) ನಿಂದ ನಿವೃತ್ತ ಇಂಜಿನಿಯರ್ ರವಿಂದ್ರಪ್ಪ ಕಣದಲ್ಲಿದ್ದಾರೆ. ಹೀಗಾಗಿ ಹಿರಿಯೂರಿನಲ್ಲಿ ತ್ರಿಕೋನ ಸ್ಪರ್ಧೆ ಏರ್ಪಡುವ ಸಾಧ್ಯತೆಯಿದೆ. ಇದನ್ನೂ ಓದಿ: ನಾಮಪತ್ರ ಸಲ್ಲಿಕೆ ಅವಧಿ ಅಂತ್ಯ – ಕಣದಲ್ಲಿ 4 ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳು
Advertisement
ಪೂರ್ಣಿಮಾ ಧನಾತ್ಮಕ ಅಂಶ ಏನು?
ಪೂರ್ಣಿಮಾ, ಬಿಎಸ್‌ವೈ ಪರಮಾಪ್ತೆಯಾಗಿದ್ದು, ದತ್ತುಪುತ್ರಿ ಎನಿಸಿಕೊಂಡಿದ್ದಾರೆ. ಹೀಗಾಗಿ ಲಿಂಗಾಯತ, ತಮಿಳರು ಮತ್ತು ಗೊಲ್ಲ ಸಮುದಾಯದ ಮತಗಳು ಪೂರ್ಣಿಮಾ ಪರ ಇವೆ. ಕಳೆದ ಚುನಾವಣೆಯಲ್ಲಿ ಪೂರ್ಣಿಮಾ ಅವರು ಜನರಿಗೆ ನೀಡಿದ್ದ ಅನೇಕ ಭರವಸೆಗಳನ್ನು ಪೂರ್ಣಗೊಳಿಸಿದ್ದಾರೆ. ಆದ್ದರಿಂದ ಈ ಬಾರಿಯೂ ಚುನಾವನೆಯಲ್ಲಿ ಗೆಲ್ಲುವ ವಿಶ್ವಾಸ ಹೊಂದಿದ್ದಾರೆ.
Advertisement
ಧರ್ಮಾಪುರ ಫೀಡರ್ ಚಾನಲ್ ಕಾಮಗಾರಿ ಆರಂಭಿಸಿ 4 ದಶಕಗಳಿಂದ ಹೋರಾಟಕ್ಕೆ ಸ್ಪಂದನೆ ನೀಡಿದ್ದಾರೆ. ಭದ್ರಾ ನೀರು ವಿವಿಸಾಗರಕ್ಕೆ ಬರಲು ಪ್ರಮುಖ ಪಾತ್ರ ವಹಿಸಿದ ಶಾಸಕಿ ಎಂಬ ಹೆಗ್ಗಳಿಕೆ ಶಾಸಕರ ಹೆಗಲಿಗಿದೆ. ಕೊರೊನಾ ಸಮಯದಲ್ಲಿ ಮಾಡಿದ ಸೇವೆ ಅನರ್ಘ್ಯ ಎನಿಸಿದ್ದು, ಬರದ ಬೇಸಿಗೆಯಲ್ಲಿ ವಿವಿಸಾಗರ ಜಲಾಶಯದಿಂದ ರೈತರ ಜಮೀನುಗಳಿಗೆ ನೀರು ಹರಿಸಿದ ಹೆಗ್ಗಳಿಕೆ ಇವರಿಗಿದೆ.
ಬಹುದಿನದ ಬೇಡಿಕೆಯಾದ 25 ಕೋಟಿ ರೂ. ವೆಚ್ಚದ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಮತ್ತು 5 ಕೋಟಿ ರೂ. ವೆಚ್ಚದ ಸಾರಿಗೆ ಡಿಪೋ ಕಾಮಗಾರಿ ಸೇರಿದಂತೆ ಹಿರಿಯೂರುನಗರದಲ್ಲಿ ಯುಜಿಡಿಗೆ 3 ಕೋಟಿ ರೂ. ಹಾಗೂ ಅಲೆಮಾರಿ ಜನಾಂಗಕ್ಕೆ 4,448 ಮನೆಗಳ ಕಾಮಗಾರಿ ಆರಂಭ ಮಾಡಲಾಗಿದೆ. ಬಹುಗ್ರಾಮ ಯೋಜನೆಯಡಿಯಲ್ಲಿ 131 ಹಳ್ಳಿಗಳಿಗೆ ಕುಡಿಯುವ ನೀರಿನ ಯೋಜನೆ ತಂದಿರೋದು ಶಾಸಕರ ಸಾಧನೆಯಾಗಿದೆ.
ಬಿಜೆಪಿ ಋಣಾತ್ಮಕ ಅಂಶ ಏನು?
ಹಿರಿಯೂರು ಕ್ಷೇತ್ರದಲ್ಲಿ ಶಾಸಕಿ ಪೂರ್ಣಿಮಾ ಅವರ ಪತಿ ಶ್ರೀನಿವಾಸ್ ಅಧಿಕಾರ ಹಸ್ತಕ್ಷೇಪ ಶಾಸಕಿಗೆ ತಲೆನೋವಾಗಿದೆ. ಕಾರ್ಯಕರ್ತರಿಗೆ ಕೆಲಸ ಕೊಟ್ಟಿಲ್ಲ, ಚುನಾವಣೆಗೆ ದುಡಿದವರನ್ನ ದೂರ ಮಾಡಿ, ಹೊಸ ಕಾರ್ಯಕರ್ತರ ಬೆಳವಣಿಗೆ, ಅಧಿಕಾರಿ ವರ್ಗಗಳಲ್ಲಿ ಅಸಮಧಾನ, ಕಾಡುಗೊಲ್ಲ ಹಾಗೂ ಊರುಗೊಲ್ಲ ಎಂಬ ತಾರತಮ್ಯ ಆರೋಪ ಶಾಸಕರ ಮೇಲಿದ್ದು ಕೆಲವು ಮುಖಂಡರಿಂದಲೂ ಅಸಮಧಾನವಿದೆ.
ಕಾಂಗ್ರೆಸ್ ಧನಾತ್ಮಕ ಅಂಶ ಏನು?
ಡಿಕೆಶಿ (DK Shivakumar) ಪರಮಾಪ್ತನಾಗಿದ್ದು, ಬಿಎಸ್‌ವೈ ದತ್ತು ಪುತ್ರಿ ಸೋಲಿಸಲು ರಣತಂತ್ರರೂಪಿಸಲಾಗಿದೆ. ಕಾಂಗ್ರೆಸ್ ಸದಸ್ಯತ್ವದಲ್ಲಿ ಡಿ.ಸುಧಾಕರ್ ಅವರು ಕ್ಷೇತ್ರದಲ್ಲಿ ರಾಜ್ಯಕ್ಕೆ ನಂ.1 ಕ್ಷೇತ್ರ 92 ಸಾವಿರ ರೂ. ಸದಸ್ಯತ್ವ ಪಕ್ಷ ಸಂಘಟನೆ, ಭಾರತ್ ಜೋಡೋ ಯಾತ್ರೆ, ಬಾಬು ಜಗನ್ ಜೀವನ ರಾಮ್ ರಾಜ್ಯ ಮಟ್ಟದ ಜಯಂತಿ, ಪ್ರಜಾಧ್ವನಿ ಯಶಸ್ಸು ಹಾಗೂ ಕಳೆದ 5 ವರ್ಷಗಳಿಂದಲೂ ಕ್ಷೇತ್ರದಲ್ಲೇ ಇದ್ದು ಸ್ಥಿರತೆ ಕಾಯ್ದಕೊಂಡಿರುವುದು ಗೆಲುವಿಗೆ ಸಹಕಾರಿಯಾಗಲಿದೆ.
ಕಾಂಗ್ರೆಸ್ ಋಣಾತ್ಮಕ ಅಂಶ ಯಾವುದು?
ಅತಿಯಾದ ಆತ್ಮವಿಶ್ವಾಸ, ಕಾರ್ಯಕರ್ತರ ಮೇಲಿನ ದುರ್ವರ್ತನೆ ಮುಳುವಾಗುವ ಸಾಧ್ಯತೆ, 5 ವರ್ಷದಲ್ಲಿ ಬಿಜೆಪಿ ಅಭಿವೃದ್ಧಿ ಬಿಜೆಪಿಯಿಂದ ಸಾಲು ಸಾಲು ಅಭಿವೃದ್ಧಿ ಕಾರ್ಯಗಳು, ಜೆಡಿಎಸ್ ಪ್ರಬಲ ಆಭ್ಯರ್ಥಿ ಕಣದಲ್ಲಿದ್ದೂ, ಮತ ವಿಭಜನೆಯಿಂದ ಕಾಂಗ್ರೆಸ್ ಅಭ್ಯರ್ಥಿ ಸೋಲುವ ಸಾಧ್ಯತೆಯಿದೆ.
ಜೆಡಿಎಸ್‌ಗೆ ಧನಾತ್ಮಕ ಅಂಶ ಏನು?
ಒಕ್ಕಲಿಗ ಮತಗಳು ನಿರ್ಣಾಯಕವಾಗಿರೋದು ಜೆಡಿಎಸ್ ಅಭ್ಯರ್ಥಿಗೆ ವರವಾಗಲಿದೆ. ಹೀಗಾಗಿ ಪ್ರತಿ ಬಾರಿಯೂ ಈ ಕ್ಷೇತ್ರದಲ್ಲಿ ಜೆಡಿಎಸ್ ಒಕ್ಕಲಿಗ ಸಮಾಜದ ಅಭ್ಯರ್ಥಿಗೆ ಮಣೆ ಹಾಕಲಿದೆ. ಕಳೆದ ಬಾರಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಯಶೋಧರ ತಮ್ಮ ಸ್ಥಾನವನ್ನ ಹಿರಿಯ ನಿವೃತ್ತ ಎಂಜಿನಿಯರ್ ರವಿಂದ್ರಪ್ಪಗೆ ಬಿಟ್ಟುಕೊಟ್ಟಿದ್ದಾರೆ. ರವಿಂದ್ರಪ್ಪ ಬೆನ್ನಿಗೆ ಮಾಜಿ ಜಿಪಂ ಅಧ್ಯಕ್ಷ ಜಯಣ್ಣ ಹಾಗೂ ಶಿವಪುತ್ರಗೌಡ ನಿಂತಿರೋದು ಒಕ್ಕಲಿಗರ ವೋಟ್‌ಬ್ಯಾಂಕ್ ಒಗ್ಗೂಡಿಸಲು ಜೆಡಿಎಸ್‌ಗೆ ಸುಲಭವಾಗಿದ್ದು, ಅಭ್ಯರ್ಥಿಗೆ ಅನುಕೂಲಕರ ವಾತಾವರಣವಿದೆ.
ಜೆಡಿಎಸ್‌ಗೆ ಋಣಾತ್ಮಕ ಅಂಶ ಯಾವುದು?
ಜೆಡಿಎಸ್‌ನಿಂದ ಪ್ರತಿಬಾರಿಯೂ ಹೊಸ ಮುಖಕ್ಕೆ ಮಣೆ ಹಾಕೋದು ಮುಳುವಾಗಿದೆ. ರವಿಂದ್ರಪ್ಪ ಕೂಡ ಕಡಿಮೆ ಅವಧಿಯಲ್ಲಿ ಮತದಾರರನ್ನ ತಲುಪೋದು ಕಷ್ಟಸಾಧ್ಯ ಎನಿಸಿದೆ. ಕ್ಷೇತ್ರದಲ್ಲಿ ಈಗಾಗಲೇ ಪಳಗಿರುವ ಪೂರ್ಣಿಮಾ ಹಾಗೂ ಸುಧಾಕರ್ ಮಧ್ಯೆ ರವಿಂದ್ರಪ್ಪ ಹೊಸಮುಖ ಎನಿಸಿರೋದು ಹಿನ್ನಡೆಯಾಗಲಿದೆ.
ಕ್ಷೇತ್ರ ಮತದಾರರ ಲೆಕ್ಕಾಚಾರ:
ಒಟ್ಟು ಮತದಾರರು: 2,42,668
ಪುರುಷರು: 1,20,495
ಮಹಿಳೆಯರು: 1,22,158
ಯಾವ ಸಮುದಾಯ ಎಷ್ಟಿದೆ?
ಗೊಲ್ಲ : 44,000
ಒಕ್ಕಲಿಗ: 37,000
ಎಸ್ಸಿ: 32,000
ಬೋವಿ: 20,000
ಕುರುಬ: 9,000
ಉಪ್ಪಾರ: 20,500
ಮುಸ್ಲಿಂ: 22,000
ತಮಿಳು: 12,000
ನಾಯಕ: 20,000
ಲಿಂಗಾಯತ: 9,000
ಲಂಬಾಣಿ: 8,000
ರೆಡ್ಡಿ: 5,000
ಈಡಿಗ: 2,000
ಅಗಸರು: 3,000
ವಿಶ್ವಕರ್ಮ: 2,000