ಬೆಂಗಳೂರು: ಹೆಡ್ ಬುಷ್ ಚಿತ್ರತಂಡ (Head Bush Film Team) ಒಂದಿಲ್ಲೊಂದು ವಿವಾದಕ್ಕೆ ಸಿಲುಕುತ್ತಿದೆ. ಇತ್ತೀಚೆಗೆ ವೀರಗಾಸೆ ಕಲಾವಿದರಿಗೆ ಅಪಮಾನ ಮಾಡಲಾಗಿದೆ ಹಾಗೂ `ಜುಜುಬಿ ಕರಗ’ (Karaga) ಎನ್ನುವ ಪದ ಬಳಸಲಾಗಿದ್ದು ಕರಗ ಕುಣಿತಕ್ಕೂ ಅವಮಾನ ಮಾಡಲಾಗಿದೆ ಅನ್ನೋ ವಿವಾದ ಎದುರಿಸುತ್ತಿದ್ದ ಚಿತ್ರತಂಡ ಇದೀಗ ಮತ್ತೊಂದು ವಿವಾದಕ್ಕೆ ಸಿಲುಕಿದೆ.
Advertisement
ಹೆಡ್‌ಬುಷ್ ಚಿತ್ರದ ಪ್ರಚಾರ ಮಾಡುತ್ತಿದ್ದ ಐವರ ವಿರುದ್ಧ ಸ್ವಯಂಪ್ರೇರಿತವಾಗಿ ಎಫ್‌ಐಆರ್ (FIR) ದಾಖಲಿಸಲಾಗಿದೆ. ಕಾರು ಹಾಗೂ ಬೈಕ್‌ಗಳಲ್ಲಿ ಬಂದು ರಸ್ತೆ ಮಧ್ಯೆ ಕಿರುಚಾಡುತ್ತಾ ಸಾರ್ವಜನಿಕರಿಗೆ ತೊಂದರೆ ಉಂಟು ಮಾಡುತ್ತಿದ್ದ ಆರೋಪದ ಮೇಲೆ ವಿಧಾನಸೌದ ಪೊಲೀಸರು (Vidhana Soudha Police) ಸ್ವಯಂಪ್ರೇರಿತವಾಗಿ ಕೇಸ್ ದಾಖಲಿಸಿದ್ದಾರೆ. ಇದನ್ನೂ ಓದಿ: ‘ಜುಜುಬಿ ಕರಗ’ ಪದ ಮ್ಯೂಟ್ ಮಾಡಲು ಧನಂಜಯ್ ಹಾಗೂ ಹೆಡ್ ಬುಷ್ ತಂಡ ಒಪ್ಪಿಗೆ
Advertisement
Advertisement
ಐದಕ್ಕಿಂತ ಹೆಚ್ಚು ಜನ ಅಕ್ರಮ ಕೂಟ ಕಟ್ಟಿಕೊಂಡು ಹೆಡ್‌ಬುಷ್ (Head Bush) ಚಿತ್ರದ ಬಗ್ಗೆ ಪ್ರಚಾರ ಮಾಡುತ್ತಾ ಕೂಗಾಡುತ್ತಿದ್ದರು. ಅಲ್ಲದೇ ವಿಧಾನಸೌಧ ಮೆಟ್ರೋ (Namma Metro) ನಿಲ್ದಾಣದ ಮುಂದೆ ಓಡಾಡುವ ವಾಹನಗಳ ಸಂಚಾರಕ್ಕೆ ಅಡ್ಡಿ ಪಡಿಸುತ್ತಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: ಹಿಂದುತ್ವದಲ್ಲೇ ಬ್ರಾಹ್ಮಣತ್ವವಿದೆ; ಪಬ್ಲಿಸಿಟಿಗೋಸ್ಕರ ನಟ ಚೇತನ್ ವಿವಾದಿತ ಹೇಳಿಕೆ – ಪೇಜಾವರ ಶ್ರೀ
Advertisement
ಇತ್ತೀಚೆಗೆ ವೀರಗಾಸೆಗೆ ಅವಮಾನ ಮಾಡಲಾಗಿದೆ ಎನ್ನುವ ಆರೋಪ ಕೇಳಿಬರುತ್ತಿದ್ದಂತೆ ಚಿತ್ರತಂಡ ಕ್ಷಮೆ ಕೇಳಿತ್ತು. ತದ ನಂತರ `ಜುಜುಬಿ ಕರಗ’ ಎನ್ನುವ ಪದವನ್ನೂ ಮ್ಯೂಟ್ ಮಾಡಲು ಒಪ್ಪಿಕೊಂಡಿತು. ಇದೀಗ ಪ್ರಚಾರದ ಮೂಲಕ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದಾರೆ ಅನ್ನೋ ಆರೋಪದ ಮೇಲೆ ಕೇಸ್ ದಾಖಲಾಗಿದ್ದು, ಮತ್ತೊಂದು ವಿವಾದಕ್ಕೆ ಕಾರಣವಾಗಿದೆ.