ನವದೆಹಲಿ: ವಿರಾಟ್ ಕೊಹ್ಲಿ (Virat Kohli) ತಮ್ಮ ಬಾಲ್ಯದ ದಿನಗಳಲ್ಲಿ ಹೇಗಿದ್ದರು? ಈಗ ವಯಸ್ಸಿಗೆ ತಕ್ಕಂತೆ ಹೇಗೆ ಬದಲಾಗಿದ್ದಾರೆ ಎಂಬ ವಿಚಾರವೊಂದು ಈಗ ಚರ್ಚೆಗೆ ಬಂದಿದೆ.
ಹಿರಿಯ ವೇಗಿ ಇಶಾಂತ್ ಈ ಬಗ್ಗೆ ಯೂಟ್ಯೂಬ್ ಚಾನೆಲ್‍ನಲ್ಲಿ ರಣವೀರ್ ಅಲ್ಲಾಬಾಡಿಯಾ ಅವರೊಂದಿಗೆ ಮಾತನಾಡಿದ್ದಾರೆ. ನಾವು ಕೋಲ್ಕತ್ತಾದಲ್ಲಿ ಪಂದ್ಯವನ್ನು ಆಡುವಾಗ ಕೊಹ್ಲಿ ಇಡೀ ರಾತ್ರಿ ಪಾರ್ಟಿ ಮಾಡಿದ್ದರು. ಮರುದಿನ ಬೆಳಗ್ಗೆಯ ಮ್ಯಾಚ್‍ನಲ್ಲಿ ಅವರು 250 ರನ್ ಹೊಡೆದಿದ್ದರು ಎಂದರು. ಇದನ್ನೂ ಓದಿ: ವಿಂಡೀಸ್ ವಿರುದ್ಧ T20 ಸರಣಿ – ಟೀಂ ಇಂಡಿಯಾಕ್ಕೆ ರಿಂಕು ಸಿಂಗ್ ಆಯ್ಕೆ?
Advertisement
Advertisement
2012 ರಲ್ಲಿ ವಿಶ್ವಕಪ್ (World Cup) ನಂತರ ಕೊಹ್ಲಿ ತಮ್ಮ ದೈಹಿಕ ಅಂಶಗಳನ್ನು ಬದಲಾಯಿಸಿರುವುದು ಉತ್ತಮ ವಿಷಯವಾಗಿದೆ. ಅವರ ಆಹಾರಕ್ರಮ ಹಾಗೂ ಅವರ ಇಚ್ಛಾ ಶಕ್ತಿಯಿಂದ ಕ್ರಿಕೆಟ್‍ನಲ್ಲಿ ಉನ್ನತ ಮಟ್ಟಕ್ಕೆ ಬೆಳೆದರು. ಅವರ ದೈಹಿಕ ಕಸರತ್ತು ಹಾಗೂ ಮಾನಸಿಕ ಸ್ಥೈರ್ಯದಿಂದ ಅವರಿಗೆ ಸಾಧನೆ ಮಾಡಲು ಸಾಧ್ಯವಾಗಿದೆ ಎಂದು ಇಶಾಂತ್ ಉಲ್ಲೇಖಿಸಿದ್ದಾರೆ.
Advertisement
Advertisement
2023ರ ಐಪಿಎಲ್‍ನಲ್ಲಿ (IPL) ಡೆಲ್ಲಿ ಕ್ಯಾಪಿಟಲ್ಸ್‍ಗಾಗಿ ಇಶಾಂತ್ ಆಡಿದ್ದರು. ಮುಂಬರುವ ವೆಸ್ಟ್ ಇಂಡೀಸ್ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾದ ಬ್ಯಾಟಿಂಗ್ ಜವಾಬ್ದಾರಿಯನ್ನು ಕೊಹ್ಲಿ ಮುನ್ನಡೆಸಲಿದ್ದಾರೆ. ಕೊಹ್ಲಿ ಭಾರತದ ಪರ 109 ಟೆಸ್ಟ್ ಪಂದ್ಯಗಳಲ್ಲಿ 8479 ರನ್ ಗಳಿಸಿದ್ದಾರೆ. ಇದನ್ನೂ ಓದಿ: ಬೆಂಗ್ಳೂರಿನಲ್ಲಿ ಕಣಕ್ಕಿಳಿಯುತ್ತಾ ಪಾಕ್ ತಂಡ – ಭದ್ರತೆ ಕಾರಣ ನೀಡಿದ್ರೆ ಸ್ಥಳ ಬದಲಾವಣೆ ಮಾಡಬಹುದು ಎಂದ ಅಶ್ವಿನ್