ಹೆಂಡ್ತಿ ಇಲ್ಲ ಅಂತ ಎರಡನೇ ಮದುವೆ- ಈಕೆಗೆ ಇವನು ನಾಲ್ಕನೆಯವನು!

Public TV
2 Min Read
Fourth Marriage Chikmagaluru

– ಪ್ರಶ್ನೆ ಮಾಡಿದ್ದಕ್ಕೆ ಹಣ, ಚಿನ್ನದೊಂದಿಗೆ ಎಸ್ಕೇಪ್

ಚಿಕ್ಕಮಗಳೂರು: ಹೆಂಡತಿ ಇಲ್ಲ ಎಂದು ಎರಡನೇ ಮದುವೆಯಾದ ವರನಿಗೆ ನಾಲ್ಕು ಮದುವೆಯಾದ ವಧು ಸಿಕ್ಕಿರುವ ಘಟನೆ ನೆಟ್ಟಕೇರನಹಳ್ಳಿ ಗ್ರಾಮದಲ್ಲಿ ನಡೆದಿದೆ.

ವಧು ಎಂದು ತಿಳಿದು ನಾಲ್ಕನೇ ಬಾರಿ ಹಸೆಮಣೆ ಏರಿದೆ ಮಹಿಳೆಯನ್ನು ಷಡಕ್ಷರಿ ವರಿಸಿದ್ದಾನೆ. ಈತ ಮೂಲತಃ ತಾಲೂಕಿನ ಬೀಕನಹಳ್ಳಿಯವನು. ಇವನಿಗೆ ಒಂದು ಮದುವೆಯಾಗಿದ್ದು, ಆಕೆ ಇವನೊಂದಿಗಿಲ್ಲ. ಹಾಗಾಗಿ ಅಣ್ಣನ ಒತ್ತಾಯದ ಮೇರೆಗೆ ಅವನೇ ನೋಡಿದ ವಧುವನ್ನು ಮದುವೆಯಾಗಲು ಒಪ್ಪಿಕೊಂಡಿದ್ದಾನೆ. ಆದರೆ ಇಲ್ಲಿರುವ ಟ್ವಿಸ್ಟ್ ಎಂದರೆ ಆಕೆಗೆ ಅಗಲೇ 3 ಬಾರಿ ಮದುವೆಯಾಗಿದ್ದು, ಈತ ನಾಲ್ಕನೆಯಾವನಾಗಿದ್ದಾನೆ. ಇದನ್ನೂ ಓದಿ: ಕಳ್ಳತನ ಮಾಡಲು ಬಂದರೆಂದು ನಾಲ್ವರು ಮಹಿಳೆಯರ ಬೆತ್ತಲೆ ಮೆರವಣಿಗೆ – ಐವರು ಅರೆಸ್ಟ್

Fourth Marriage Chikmagaluru 1

ಹೆಂಡತಿ ಬಿಟ್ಟು ಹೋದಾಗಲೇ ಸಾಯಬೇಕು ಅಂದುಕೊಂಡಿದ್ದ ಷಡಕ್ಷರಿಗೆ ಅಣ್ಣ ಹಾಸನ ಜಿಲ್ಲೆ ಬೇಲೂರು ತಾಲೂಕಿನ ರಾಮಚಂದ್ರಾಪುರದ ಉಷಾ ಎಂಬವಳೊಂದಿಗೆ ಮದುವೆ ಮಾಡಿಸಿದ್ದನು. ಷಡಕ್ಷರಿ ಲಿಂಗಾಯಿತಿ ಜಾತಿಗೆ ಸೇರಿದವನು. ಆದರೆ ಉಷಾ ಮೂಲತಃ ಒಕ್ಕಲಿಗಳಾದಳೂ ಜಾತಿ-ಕುಲ-ಗೋತ್ರವನ್ನ ಮುಚ್ಚಿಟ್ಟು ಮದುವೆಯಾಗಿದ್ದಾಳೆ. ನಾನು ನಾಲ್ಕನೇ ಬಾರಿ ಹಸೆಮಣೆ ಏರುತ್ತಿದ್ದೇನೆ ಎಂದೂ ಸಹ ಹೇಳಿಲ್ಲ.

Fourth Marriage Chikmagaluru 2

ಒಂದನೇಯವ ಹಗರೆ ರುದ್ರೇಶ್, ಎರಡನೇಯವ ದುದ್ದ ರವಿ, ಮೂರನೇಯವ ಹಾಸನದ ಜಯರಾಮ್, ನಾಲ್ಕನೆಯವನು ಕಾಫಿನಾಡಿನ ಷಡಕ್ಷರಿ. ಅಂದು ಅಣ್ಣ ಹೇಳಿದ ಅಂತ ಕಣ್ಮುಚ್ಚಿಕಂಡು ತಾಳಿ ಕಟ್ಟಿದ ಷಡಕ್ಷರಿ ಇಂದು ಕಣ್ಣು-ಬಾಯಿ ಬಿಡುವಂತಾಗಿದೆ. ಕಳೆದೊಂದು ವಾರದ ಉಷಾಳ ಹಳೇ ಹೆಜ್ಜೆ ಗುರುತುಗಳು ತಿಳಿದ ಬಳಿಕ ಪ್ರಶ್ನೆ ಮಾಡಿದ್ದಕ್ಕೆ ಮನೆ ಬಿಟ್ಟು ಹೋಗಿದ್ದಾಳೆ. ಆದರೆ ಆಕೆ ಹೋಗುವಾಗ ಸುಮ್ಮನೇ ಹೋಗಿಲ್ಲ, ಮನೆಯಲ್ಲಿದ್ದ ಎರಡೂವರೆ ಲಕ್ಷ ಹಣ, ತಾಳಿ ಸೇರಿದಂತೆ ಒಡವೆ ಸಮೇತ ಎಸ್ಕೇಪ್ ಆಗಿದ್ದಾಳೆ. ಫೋನ್ ಮಾಡಿದರೆ ನಾಟ್ ರೀಚಬಲ್. ಇದೀಗ ಷಡಕ್ಷರಿ ಮತ್ತೆ ನನ್ನ ಹೆಂಡತಿ ಬೇಕು ಎಂದು ಹುಡುಕಾಡ್ತಿದ್ದಾನೆ.

ಮದುವೆಗೆ ಆಹ್ವಾನ ಪತ್ರಿಕೆ ಮಾಡಿಸಿದ್ದ, ಹೆಂಡತಿ ಹೆಸರಲ್ಲಿ ಎಲ್.ಐ.ಸಿ ಮಾಡಿಸಿದ್ದು, ಇಂದು ಅವುಗಳ ಜೊತೆ ಅವಳ ಹಳೇ ಗಂಡದಿರ ದಾಖಲೆಯನ್ನ ಕಲೆ ಹಾಕಿದ್ದಾನೆ. ಇದು ಎರಡನೇ ಗಂಡನದ್ದು, ಇದು ಮೂರನೇ ಗಂಡನದ್ದು ಎಂದು ದಾಖಲೆಗಳನ್ನ ತೋರಿಸಿ ಅವಲತ್ತು ತೋಡಿಕೊಂಡಿದ್ದಾನೆ. ಇದನ್ನೂ ಓದಿ: ಟ್ರೈನ್ ಟಿಕೆಟ್ ರದ್ದು ಮಾಡಿದ್ದಕ್ಕೆ ದಂಡ ವಿಧಿಸಿದವನನ್ನೇ ಕೊಂದ ಸಹೋದರರು!

Fourth Marriage Chikmagaluru 3

ಪತ್ನಿ ಉಷಾಗಾಗಿ ಷಡಕ್ಷರಿ ಎಲ್ಲ ಕಡೆ ಹುಡುಕಾಡುತ್ತಿದ್ದು, ಆಕೆಯ ತವರು ಮನೆ, ಅಕ್ಕನ ಮನೆ, ಎಲ್ಲ ಕಡೆ ಹುಡುಕಿದ್ದಾನೆ. ಎಲ್ಲೂ ಆಕೆಯ ಸುಳಿವಿಲ್ಲ. ತನ್ನ ಸ್ವಂತ ಊರು ಬೀಕನಹಳ್ಳಿಯಲ್ಲಿ ಈಕೆಯ ವಿಚಾರ ಗೊತ್ತಾದ ಕೂಡಲೇ ಊರಲ್ಲಿ ಇದ್ರೆ ಸರಿಯಾಗಲ್ಲ ಅಂತ ಊರನ್ನು ಬಿಟ್ಟು ಬಂದು ನೆಟ್ಟೇಕೆರೆಹಳ್ಳಿಯಲ್ಲಿ ಜೀವನ ಕಟ್ಕೊಂಡಿದ್ದಾನೆ. ಇದೀಗ ಇಲ್ಲೂ ಕೂಡ ನನ್ನ ಒಂಟಿ ಮಾಡಿ ಆಕೆ ಎಸ್ಕೇಪ್ ಆಗಿದ್ದಾಳೆ ಎಂದು ನೊಂದ ನಾಲ್ಕನೇ ಪತಿ ಷಡಕ್ಷರಿ ನೊಂದುಕೊಂಡಿದ್ದಾನೆ.

ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡಿ ಅಂತಾರೆ. ಆದರೆ ಈಕೆ ನನಗೆ ಮದುವೆಯೇ ಆಗಿಲ್ಲ. ನಾನಿನ್ನು ಕನ್ಯೆ ಎಂಬ ಒಂದೇ ಒಂದು ಸುಳ್ಳು ಹೇಳಿ ನಾಲ್ಕು ಮದುವೆಯಾಗಿದ್ದಾಳೆ.

Share This Article
Leave a Comment

Leave a Reply

Your email address will not be published. Required fields are marked *