ಹಾಸನ: ನಗರದ ಜಾನಾಕ್ಷಿ ಕಲ್ಯಾಣ ಮಂಟಪದಲ್ಲಿ ಜೆಡಿಎಸ್ ಕಾರ್ಯಕರ್ತರ ಸಭೆ ಆಯೋಜಿಸಲಾಗಿತ್ತು. ಸಭೆ ಉದ್ಘಾಟಿಸುವ ಮುನ್ನವೇ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಇದು ಟಿಕೆಟ್ ಘೋಷಣೆ ಮಾಡುವ ಸಭೆಯಲ್ಲ ಪಕ್ಷ ಸಂಘಟನೆ ಹಾಗೂ ಮಳೆಯಿಂದ ಆಗಿರುವ ಹಾನಿ ಮತ್ತು ಪರಿಹಾರ ನೀಡುವಂತೆ ಗಮನ ಸೆಳೆಯಲು ಚರ್ಚಿಸಲು ಕರೆದಿರುವ ಸಭೆಯಾಗಿದ್ದು ಯಾರು ಯಾರ ಪರ ಘೋಷಣೆ ಕೂಗಬಾರದೆಂದು ತಾಕೀತು ಮಾಡಿದರು.
Advertisement
ಸಭೆ ಉದ್ಘಾಟನೆ ಆಗುತ್ತಿದ್ದಂತೆ ಮಾಜಿ ಶಾಸಕ ದಿ.ಎಚ್.ಎಸ್.ಪ್ರಕಾಶ್ ಪುತ್ರ ಹೆಚ್.ಪಿ.ಸ್ವರೂಪ್‍ಗೆ ಹಾಸನ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ನೀಡಿವಂತೆ ಕಾರ್ಯಕರ್ತರು ಒತ್ತಾಯಿಸಿದರು. ಇದರಿಂದ ಕೆರಳಿದ ರೇವಣ್ಣ ಇವೆಲ್ಲ ನನ್ನ ಹತ್ರ ನಡೆಯಲ್ಲ. ಎಣ್ಣೆ ಕುಡಿಸಿಕೊಂಡು ಬಂದು ಘೋಷಣೆ ಕೂಗಿದ್ರೆ ನಾನು ಹೆದರಲ್ಲ ಎದ್ದು ಹೊರಗೆ ಹೋಗಿ ಎಂದು ಗದರಿದರು. ಇದರಿಂದ ಕೆರಳಿದ ಸ್ವರೂಪ್ ಬೆಂಬಲಿಗರು ರೇವಣ್ಣ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬೆಂಬಲಿಗರ ಆಕ್ರೋಶದಿಂದ ರೇವಣ್ಣ ವೇದಿಕೆಯಲ್ಲಿ ಸುಮ್ಮನೆ ಕುಳಿತರು. ಇದನ್ನೂ ಓದಿ: ಸಮವಸ್ತ್ರ ನಿರ್ಧಾರ ಶಿಕ್ಷಣ ಹಕ್ಕು ಉಲ್ಲಂಘನೆಯಲ್ಲ – ಹಿಜಬ್ ವಿಚಾರಣೆ ವೇಳೆ ಸುಪ್ರೀಂಕೋರ್ಟ್ ಅಭಿಪ್ರಾಯ
Advertisement
Advertisement
ನಂತರ ವೇದಿಕೆಯ ಮೇಲೆ ಕುಳಿತಿದ್ದ ಎಚ್.ಪಿ.ಸ್ವರೂಪ್ ವಿರುದ್ಧ ರೇವಣ್ಣ ಕೆಂಡಾಮಂಡಲರಾದರು. ಮೈಕ್ ಎಸೆದು ಸ್ವರೂಪ್ ವಿರುದ್ಧ ಸಿಟ್ಟಾದರು. ಈ ವೇಳೆ ಬೆಂಬಲಿಗರನ್ನು ಸಮಾಧಾನ ಮಾಡಲು ಸ್ವರೂಪ್ ಹರಸಾಹಸಪಟ್ಟರು. ಆದರೂ ಸುಮ್ಮನಾಗದ ಕಾರ್ಯಕರ್ತರು ಸ್ವರೂಪ್ ಪರ ಘೋಷಣೆಗಳನ್ನು ಕೂಗಿ ಸಭೆಯಿಂದ ಹೊರ ನಡೆದರು. ಅಲ್ಲೇ ಹಾಕಲಾಗಿದ್ದ ಜೆಡಿಎಸ್ ಮುಖಂಡ ಪ್ರಸಾದ್‍ಗೌಡರ ಫ್ಲೆಕ್ಸ್‌ಗಳನ್ನು ಹರಿದು ಹಾಕಿದರು. ಸ್ವರೂಪ್‌ಗೆ ಟಿಕೆಟ್ ಕೊಡಬೇಕು ಮನೆಮನೆಗೆ ಹೋಗಿ ಜನರ ಕಾಲಿಗೆ ಬಿದ್ದು ಗೆಲ್ಲಿಸಿಕೊಂಡು ಬರುತ್ತೇವೆ. ಇಲ್ಲವಾದಲ್ಲಿ ಬುದ್ಧಿ ಕಲಿಸುತ್ತೇವೆ ಎಂದು ಎಚ್ಚರಿಸಿದರು. ಇದನ್ನೂ ಓದಿ: ಹಾಸ್ಟೆಲ್‌ನಲ್ಲಿ ನಿದ್ರೆ ಬರುತ್ತಿಲ್ಲ ಅಂತ 19ರ ನರ್ಸಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆ