ಬೆಂಗಳೂರು: ಸಂಸದ ಪ್ರತಾಪ್ ಸಿಂಹರ ವಿರುದ್ಧ ಸೇಡು ತೀರಿಸಿಕೊಳ್ಳಲು ಸಿಎಂ ಸಿದ್ದರಾಮಯ್ಯ (Siddaramaiah) ಅವರೇ ಪ್ಲ್ಯಾನ್ ಮಾಡಿ ವಿಕ್ರಂ ಸಿಂಹರನ್ನ ಬಂಧನ ಮಾಡಿಸಿದ್ದಾರೆ ಅಂತ ಮಾಜಿ ಸಿಎಂ ಕುಮಾರಸ್ವಾಮಿ (HD Kumaraswamy) ಗಂಭೀರ ಆರೋಪ ಮಾಡಿದ್ದಾರೆ.
ಜೆ.ಪಿ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜಾಗ ಯಾರದ್ದೋ ಮರ ಕಡಿದದ್ದು ಯಾರೋ. ಆದ್ರೆ ಬಂಧನ ಆಗಿದ್ದು ಸಂಸದ ಪ್ರತಾಪ್ ಸಿಂಹ (Pratap Simha) ಸಹೋದರ ವಿಕ್ರಂ ಸಿಂಹ (Vikram Simha). ವಿರೋಧಿಗಳ ಧ್ವನಿ ಅಡಗಿಸೋಕೆ ಕಾಂಗ್ರೆಸ್ ಅಧಿಕಾರ ದುರ್ಬಳಕೆ ಮಾಡಿಕೊಂಡಿದೆ ಅಂತ ಕುಮಾರಸ್ವಾಮಿ, ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ್ದಾರೆ. ಇದನ್ನೂ ಓದಿ: ಆಪ್ ಸರ್ಕಾರದ ಬಹುನಿರೀಕ್ಷಿತ ಮೊಹಲ್ಲಾ ಕ್ಲಿನಿಕ್‌ಗಳಲ್ಲಿ ಅಕ್ರಮ – ಸಿಬಿಐ ತನಿಖೆಗೆ ಆದೇಶ
Advertisement
Advertisement
ಪ್ರತಾಪ್ ಸಿಂಹ ಸಹೋದರನ ಮೇಲೆ ಕೇಸ್ ಹಾಕಿ ಜೈಲಿಗೆ ಹಾಕಿದ್ದಾರೆ. ಇದರ ಸತ್ಯಾಸತ್ಯತೆ ಏನಿದೆ? ಕಾಂಗ್ರೆಸ್ ಅವರು ವಿರೋಧಿಗಳ ಧ್ವನಿ ಅಡಗಿಸೋಕೆ ಅಧಿಕಾರ ದುರ್ಬಳಕೆ ಮಾಡಿಕೊಳ್ತಿದ್ದಾರೆ. 5 ಜನ ಅರಣ್ಯಾಧಿಕಾರಿಗಳನ್ನ (Forest Officers) ಅಮಾನತು ಮಾಡಿದ್ದಾರೆ. ಅಮಾನತುಗೊಳಿಸಲು ಕಾರಣವೇನು? ಹೇಳಿ ಅಂತ ಪ್ರಶ್ನೆ ಮಾಡಿದ್ರು. ಬೇಲೂರಿನ ಒಂದು ಗ್ರಾಮದಲ್ಲಿ ಪೂರ್ವ ಅನುಮತಿ ಇಲ್ಲದೇ ಮರ ಕಡಿದಿರೋ ಹಿನ್ನೆಲೆಯಲ್ಲಿ ವರದಿ ಹೋಗಿದೆ. ವರದಿಯಲ್ಲಿ ಸರ್ಕಾರದ ಭೂಮಿಯಲ್ಲಿ ಕಟ್ಟಿರೋ ಮನೆಗಳ ಸಕ್ರಮೀಕರಣ ಮಾಡೋಕೆ ಮನೆಗಳ ಬಗ್ಗೆ ವರದಿ ತಹಶಿಲ್ದಾರರಿಗೆ ಕೊಟ್ಟಿದ್ದರು. 40 ಎಕರೆ ಭೂಮಿಯನ್ನ 16 ಜನಕ್ಕೆ ಹಕ್ಕುಪತ್ರಗಳನ್ನ ಕೊಟ್ಟಿದ್ದಾರೆ. ಉಳಿದ 4 ಎಕರೆ 12 ಗುಂಟೆ ಗೋಮಾಳ ಆಗಿದೆ. 16ನೇ ವ್ಯಕ್ತಿ ರಾಕೇಶ್ ಶೆಟ್ಟಿಗೆ ಸರ್ಕಾರದಿಂದಲೇ 4 ಎಕರೆ ಭೂಮಿ ಕೊಟ್ಟಿದ್ದಾರೆ. ಅವರ ಮಗಳು ಜಯಮ್ಮ ವಿಕ್ರಮ ಸಿಂಹಗೆ ಶುಂಠಿ ಬೆಳೆಯೋಕೆ ಲೀಸ್ ಕೊಟ್ಟಿದ್ದಾರೆ .ಲೀಸ್ ಪ್ರಾರಂಭ ಆಗೋದು 2024 ಜನವರಿಯಿಂದ. ಜಯಮ್ಮ ಮತ್ತು ರವಿ ಅನ್ನೋರು ಈ ಮಧ್ಯೆ ಮರ ಕಡಿದಿದ್ದಾರೆ. ಇದಕ್ಕೆ ವಿಕ್ರಂ ಸಿಂಹ ಕಾರಣ ಅಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಮರಗಳ್ಳತನ ಕೇಸ್; ಸಂಸದ ಪ್ರತಾಪ್ ಸಿಂಹ ಸಹೋದರನಿಗೆ ಜಾಮೀನು ಮಂಜೂರು
Advertisement
Advertisement
ಪ್ರಕರಣದ A1 ಜಯಮ್ಮ, A2 ರಾಕೇಶ್ ಶೆಟ್ಟಿ, A3 ಇರಲಿಲ್ಲ. ಅಲ್ಲಿರೋ ಒಬ್ಬ ಪುಡಾರಿ ಸಿಎಂಗೆ ಮಾಹಿತಿ ಕೊಟ್ಟು ಪ್ರತಾಪ್ ಸಿಂಹಗೆ ಪಾಠ ಕಲಿಸೋಕೆ ಅಂತ ಸಿಎಂಗೆ ತಲೆ ತಿಂದ. ಆಗ ಸಿಎಂ ಅಧಿಕಾರಿಗಳಿಗೆ ಕರೆ ಮಾಡಿ ಬೀಟೆ ಮರ ಕಡಿದು ಅ ಜಾಗದಲ್ಲಿ ಹಾಕುವಂತೆ ಹೇಳಿದ್ದರು ಎಂದು ಸಿಎಂ ಮೇಲೆ ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದರು. ಬೇಕಿದ್ದರೇ ಸಿಎಂ ಫೋನ್‌ಕಾಲ್ ಲೀಸ್ಟ್ ತೆಗೆಯಿರಿ ಸತ್ಯ ಗೊತ್ತಾಗುತ್ತದೆ. ಎ1, ಎ2ಗೆ ಅರಣ್ಯಾಧಿಕಾರಿಗಳೇ ಬೇಲ್ ಕೊಟ್ಟರು. ಆದರೆ ವಿಕ್ರಂ ಸಿಂಹರ ಬಂಧನ ಮಾಡಿದರು. ಎ1, ಎ2ಗೆ ಕಚೇರಿಯಲ್ಲಿ ಬೇಲ್ ಕೊಟ್ಟು ಇವರನ್ನು ಯಾಕೆ ಅರೆಸ್ಟ್ ಮಾಡಿದಿರಿ? ಎಂದು ಸರ್ಕಾರಕ್ಕೆ ಮ್ಯಾಜಿಸ್ಟ್ರೇಟ್ ಉಗಿದರು ಆಗ ಕೋರ್ಟ್ ಬೇಲ್ ಕೊಟ್ಟರು. ಲೀಸ್ ಅಷ್ಟೇ ವಿಕ್ರಂ ತೆಗೆದುಕೊಂಡಿದ್ದ. ಮರ ಕಡಿದಿದ್ದು ಜಯಮ್ಮ ಮತ್ತು ರವಿ ಆದರೆ ಬೀಟೆ ಮರ ಇಲ್ಲಿ ತಂದು ಹಾಕಿ ಅಂದಿದ್ದು ಸರ್ಕಾರ. ಸಿಎಂ ಅವರೇ ಮರ ಕಡಿದು ಹಾಕಿ ಅಂತ ಹೇಳಿ ಬೀಟೆ ಮರ ಹಾಕಿಸಿದ್ದಾರೆ. ಬೀಟೆ ಮರವನ್ನ ಗೆಂಡೆಕೆರೆಯಿಂದ ಕಟ್ ಮಾಡಿಕೊಂಡು ಬಂದು ಇಲ್ಲಿ ಹಾಕಿದ್ದಾರೆ. ಪ್ರತಾಪ್ ಸಿಂಹನ ತಮ್ಮ ಮರ ಕಡಿದಿಲ್ಲ ಆದರೂ ಪ್ರತಾಪ್ ಸಿಂಹನ ಹೆದರಿಸೋಕೆ ಹೀಗೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಮಂಡ್ಯದಲ್ಲಿ ಪರಿಷತ್ ಸದಸ್ಯರೊಬ್ಬರು ಮರ ಕಡಿದರು. ಅವರ ಮೇಲೆ ಯಾಕೆ ಕ್ರಮ ಆಗಿಲ್ಲ? ಸಿಎಂ, ಗೃಹ ಸಚಿವರೇ ಇದಕ್ಕೆ ಉತ್ತರ ಕೊಡಿ. ಅಮಾನತು ಆಗಿರೋ ಡಿಎಫ್ಓ ದಲಿತ ಸಮುದಾಯ ವ್ಯಕ್ತಿ. ಯಾಕೆ ಅಧಿಕಾರಿ ಅಮಾನತು ಮಾಡಿದ್ರಿ? ಪ್ರಾಮಾಣಿಕ ದಲಿತ ಅಧಿಕಾರಿ. ಅವನ ಮೇಲೆ ಯಾಕೆ ಕ್ರಮ ಆಯ್ತು? ಹಾಸನಕ್ಕೆ ಯಾರ ಶಿಫಾರಸು ಮಾಡಿ ಅವನನ್ನ ಹಾಕಿದ್ರಿ? ಆತನನ್ನ ಹಾಸನಕ್ಕೆ ವರ್ಗಾವಣೆ ಮಾಡಿಸಲು ಯಾವ ಎಂಎಲ್ಎ ಕುಳಿತಿದ್ದ? ಎಷ್ಟು ಹಣ ಎಂಎಲ್ಎ ತೆಗೆದುಕೊಂಡ? ಯಶವಂತಪುರದಲ್ಲಿ ಹಣದ ವ್ಯವಹಾರ ಆಗಿದೆ. ಹಾಸನಕ್ಕೆ ಡಿಎಫ್ಓ ನೇಮಕದಲ್ಲಿ ಶಾಸಕ ಹಣ ಪಡೆದಿದ್ದಾನೆ ಎಂದು ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ. ಇದನ್ನೂ ಓದಿ: ಜೈಲು ಸೇರಿರುವ ಸಂಜಯ್ ಸಿಂಗ್‍ಗೆ ಎಂಪಿಯಾಗಿ ಮುಂದುವರಿಸಲು ಆಪ್ ನಿರ್ಧಾರ
ಶಾಸಕರೇ ಹಣ ಡಿಮ್ಯಾಂಡ್ ಮಾಡಿ ಪಡೆದಿದ್ದಾನೆ. ಹಣ ಪಡೆದು ಡಿಎಫ್ಓ ಹಾಸನಕ್ಕೆ ನೇಮಕ ಮಾಡಿದ್ದಾರೆ. ಪಾಪ ಅವನು ಹಣಕೊಟ್ಟು ಈಗ ಅಮಾನತು ಆಗಿದ್ದಾನೆ. ವಿಕ್ರಂ ಸಿಂಹ ತಪ್ಪು ಮಾಡದೇ ಹೋದರು ಅರೆಸ್ಟ್ ಮಾಡುತ್ತೀರಾ? ಸಿಎಂ ಅವರೇ ಬೀಟೆ ಮರ ಕಟ್‌ಮಾಡಿ ಅಲ್ಲಿ ಹಾಕಿ ಅಂತ ಹೇಳಿದ್ದಾರೆ. ನನಗೆ ಅಧಿಕಾರಿಗಳೇ ಮಾಹಿತಿ ಕೊಟ್ಟಿದ್ದಾರೆ. ಬೇಕಿದ್ದರೆ ಕಾಲ್ ಲೀಸ್ಟ್ ತೆಗೆಸಿ. ಬೇಕಿದ್ರೆ ನಾಗಮೋಹನ್ ದಾಸ್ ಕಮಿಟಿಗೆ ತನಿಖೆ ಮಾಡಲು ಹೇಳಿ ಅಥವಾ ಹೊಸ ಆಯೋಗ ರಚಿಸಿ ಎನಿಖೆ ನಡೆಸಿ ಎಂದರು. ಹಾಸನದ ಶಾಸಕರು ಯಾರು ಇದ್ದಾರೆ ಯಾರು ಹಾಸನದಲ್ಲಿ ವರ್ಗಾವಣೆ ನೋಡಿಕೊಳ್ತಿದ್ದಾರೆ? ಅವರೇ ಇದನ್ನ ಮಾಡಿದ್ದಾರೆ. ಅವರೇ ಡಿಎಫ್ಓ ನಿಂದ ಹಣ ಪಡೆದಿದ್ದಾರೆ ಎಂದು ಹೆಸರು ಹೇಳದೇ ಶಿವಲಿಂಗೇಗೌಡ ಮೇಲೆ ಕುಮಾರಸ್ವಾಮಿ ಆರೋಪಿಸಿದರು. ಇದನ್ನೂ ಓದಿ: ಸಿದ್ದರಾಮಯ್ಯ, ಡಿಕೆಶಿ ನಾಯಕತ್ವದಲ್ಲಿ ಕರ್ನಾಟಕ ಕಾಂಗ್ರೆಸ್ ಅಂತ್ಯವಾಗುತ್ತೆ: ಹೆಚ್‌ಡಿಡಿ ಭವಿಷ್ಯ