ನವದೆಹಲಿ: ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವರಾಗಿ ಅಧಿಕಾರ ಸ್ವೀಕರಿಸಿದ ನಂತರ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಅವರು ಬುಧವಾರ ಮೊದಲ ಕಡತಕ್ಕೆ ಸಹಿ ಹಾಕಿದ್ದಾರೆ.
ಉದ್ಯೋಗ ಭವನದ ಉಕ್ಕು ಸಚಿವಾಲಯದ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿದ ನಂತರ, ಕರ್ನಾಟಕದ ದೇವದಾರಿ ಕಬ್ಬಿಣ ಅದಿರು ಗಣಿಗಾರಿಕೆ ಯೋಜನೆ ಸಂಬಂಧಿಸಿದ ಕಡಿತಕ್ಕೆ ಹೆಚ್‌ಡಿಕೆ ಸಹಿ ಹಾಕಿದ್ದಾರೆ. ನಂತರ ಕೇಂದ್ರದ ಹಣಕಾಸು ಇಲಾಖೆ ಅನುಮೋದನೆಗೆ ಕಳುಹಿಸಲಾಗಿದೆ.
ಬಳ್ಳಾರಿ ಜಿಲ್ಲೆಯಲ್ಲಿ ಉದ್ದೇಶಿತ ಗಣಿಗಾರಿಕೆ ಯೋಜನೆ ಇದಾಗಿದ್ದು, ಕುದುರೆಮುಖ ಕಬ್ಬಿಣ ಅದಿರು ಕಂಪನಿ (KIOCL Limited) ಈ ಯೋಜನೆಯನ್ನು ನಿರ್ವಹಿಸಲಿದೆ. ಹಲವು ದಿನಗಳಿಂದ ಈ ಕಡರ ಬಾಕಿ ಉಳಿದಿತ್ತು ಎಂದು ಹೇಳಲಾಗಿದೆ. ಇದನ್ನೂ ಓದಿ: ಕರ್ನಾಟಕದಲ್ಲಿ ಭಾರತ್ ಮಾತಾ ಕೀ ಜೈ, ಜೈ ಶ್ರೀರಾಮ್ ಅನ್ನೋದೇ ತಪ್ಪು: ಆರ್.ಅಶೋಕ್
ಮಂಗಳವಾರವಷ್ಟೇ ಕೇಂದ್ರ ಸಚಿವರಾಗಿ ಹೆಚ್.ಡಿ ಕುಮಾರಸ್ವಾಮಿ ಅಧಿಕಾರ ವಹಿಸಿಕೊಂಡಿದ್ದರು. ಇದನ್ನೂ ಓದಿ: ಪ್ರಸಿದ್ಧರು, ಸೆಲೆಬ್ರಿಟಿಗಳೆಂದು ಬಿಡುವ ಪ್ರಶ್ನೆ ಇಲ್ಲ: ದರ್ಶನ್ ಕೇಸ್‌ಗೆ ಹೆಬ್ಬಾಳ್ಕರ್ ಪ್ರತಿಕ್ರಿಯೆ