ಪ್ರತಿ ದಿನ ನೀವು ಉಪಾಹಾರಕ್ಕೆ ದೋಸೆ, ಇಡ್ಲಿ, ಉಪ್ಪಿಟ್ಟು ಇಂತಹುದೇ ತಿಂಡಿಗಳನ್ನು ಮಾಡಿ ಬೇಸತ್ತಿದ್ದರೆ ಒಮ್ಮೆ ಚಿರೋಟಿ ರವೆಯ ರೊಟ್ಟಿಯನ್ನು ಮಾಡಿ ನೋಡಲೇಬೇಕು. ಸುಲಭ, ರುಚಿಕರ ಮಾತ್ರವಲ್ಲದೇ ವಿಭಿನ್ನವಾದ ಅಡುಗೆ ಮಾಡಲು ಬಯಸಿದ್ದೀರಿ ಎಂದರೆ ಈ ರೆಸಿಪಿ ನಿಮಗೆ ಸೂಕ್ತ. ನೀವಿದಕ್ಕಾಗಿ ನೆನೆಸುವುದು ಅಥವಾ ವಿಶ್ರಾಂತಿ ನೀಡುವ ಯಾವುದೇ ಅಗತ್ಯವಿಲ್ಲ. ಫಟಾಫಟ್ ಅಂತ ಮಾಡಬಹುದಾದ ಸುಲಭದ ಚಿರೋಟಿ ರವೆ ರೊಟ್ಟಿ (Chiroti Rava Roti) ರೆಸಿಪಿ ಇಲ್ಲಿದೆ.
ಬೇಕಾಗುವ ಪದಾರ್ಥಗಳು:
ಚಿರೋಟಿ ರವೆ – 1 ಕಪ್
ನೀರು – ಒಂದೂವರೆ ಕಪ್
ತುಪ್ಪ/ಎಣ್ಣೆ – 1 ಟೀಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಒಂದು ಕಡಾಯಿ ತೆಗೆದುಕೊಂಡು, ಅದಕ್ಕೆ ನೀರು, 1 ಟೀಸ್ಪೂನ್ ಎಣ್ಣೆ ಹಾಗೂ ರುಚಿಗೆ ಬೇಕಾಗುವಷ್ಟು ಉಪ್ಪು ಹಾಕಿ ಕುದಿಸಿಕೊಳ್ಳಿ.
* ನೀರು ಕುದಿ ಬರಲು ಪ್ರಾರಂಭಿಸುತ್ತಿದ್ದಂತೆ ಉರಿಯನ್ನು ಕಡಿಮೆಯಲ್ಲಿಟ್ಟು, ನಿಧಾನವಾಗಿ ಚಿರೋಟಿ ರವೆಯನ್ನು ಸೇರಿಸಿ, ಕಲಸಿಕೊಳ್ಳಿ.
* ಹಿಟ್ಟಿನಲ್ಲಿ ಯಾವುದೇ ಉಂಡೆಗಳಿಲ್ಲದಂತೆ ಮಿಶ್ರಣ ಮಾಡಿ.
* ಬಳಿಕ ಉರಿಯನ್ನು ಆಫ್ ಮಾಡಿ, ಒಂದು ಮುಚ್ಚಳ ಮುಚ್ಚಿ, 5 ನಿಮಿಷ ಹಾಗೆಯೇ ಬಿಡಿ.
* ಹಿಟ್ಟು ಬೆಚ್ಚಗಿರುವಾಗಲೇ ಅದನ್ನು ಶುಭ್ರ ಪಾಲಿಥಿನ್ ಕವರ್‌ಗೆ ಹಾಕಿ ಚೆನ್ನಾಗಿ ಬೆರೆಸಿಕೊಳ್ಳಿ.
* ಈಗ ಹಿಟ್ಟನ್ನು ಸಣ್ಣ ಸಣ್ಣ ಕಿತ್ತಲೆ ಗಾತ್ರದ ಉಂಡೆಗಳನ್ನಾಗಿ ಮಾಡಿ. ಇದನ್ನೂ ಓದಿ: ತುಂಬಾ ಸಿಂಪಲ್ ರೆಸಿಪಿ – ರುಚಿಯಾದ ರವಾ ಟೋಸ್ಟ್ ಮಾಡಿ
Advertisement
Advertisement
* ಈಗ ಎರಡು ಪ್ಲಾಸ್ಟಿಕ್ ಹಾಳೆಗಳನ್ನು ತೆಗೆದುಕೊಂಡು, ಅದರ ನಡುವೆ ಒಂದೊಂದೇ ಉಂಡೆಯನ್ನಿಟ್ಟು, ಲಟ್ಟಣಿಗೆಯಿಂದ ನಿಧಾನವಾಗಿ ಲಟ್ಟಿಸಿ.
* ರೊಟ್ಟಿಗಳನ್ನು ಲಟ್ಟಿಸಿಕೊಂಡ ಬಳಿಕ ಬಿಸಿಯಾದ ತವಾದ ಮೇಲೆ ಅದನ್ನಿಟ್ಟು, ಕಾಯಿಸಿಕೊಳ್ಳಿ.
* ಒಂದು ಬದಿ ಕಾಯಿಸುವ ವೇಳೆ ಗುಳ್ಳೆಗಳು ಕಾಣಿಸಿಕೊಳ್ಳುತ್ತಿದ್ದಂತೆ ತಿರುವಿ ಹಾಕಿ, ಇನ್ನೊಂದು ಬದಿ ಕಾಯಿಸಿಕೊಳ್ಳಿ.
* ರೊಟ್ಟಿಗೆ ಎಣ್ಣೆ ಹಚ್ಚುವ ಅಗತ್ಯವಿಲ್ಲ. ಅಂಚುಗಳನ್ನು ನಿಧಾನವಾಗಿ ಒತ್ತಿದರೆ ರೊಟ್ಟಿಯನ್ನು ಉಬ್ಬಿಸಬಹುದು. 1 ನಿಮಿಷ ಹೀಗೇ ಕಾಯಿಸಿಕೊಳ್ಳಿ.
* ನೀವಿದನ್ನು ಫುಲ್ಕಾ ಮಾಡುವಂತೆ ತವಾದಿಂದ ತೆಗೆದು ನೇರವಾಗಿ ಉರಿಯ ಮೇಲೆ ಇಟ್ಟು ಕೆಲ ಸೆಕೆಂಡು ಎರಡೂ ಬದಿ ಕಾಯಿಸಿಕೊಳ್ಳಿ.
* ಇದೀಗ ಚಿರೋಟಿ ರವೆಯ ರೊಟ್ಟಿ ತಯಾರಾಗಿದ್ದು, ಬಿಸಿಬಿಸಿಯಾಗಿ ತುಪ್ಪ ಸವರಿ ಸವಿಯಿರಿ. ಬದನೆಕಾಯಿಯ ಎಣ್ಣೆಗಾಯಿ, ಕಡಲೆ – ಬೆಳ್ಳುಳ್ಳಿ ಚಟ್ನಿಯೊಂದಿಗೆ ಇದರ ರುಚಿ ಅದ್ಭುತ ಎನಿಸುತ್ತದೆ. ಇದನ್ನೂ ಓದಿ: ಬೆಳಗ್ಗಿನ ತಿಂಡಿಗೆ ಫಟಾಫಟ್ ಅಂತ ಮಾಡಿ ಬಾಳೆಕಾಯಿ ದೋಸೆ
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k