ಚಿಕ್ಕೋಡಿ: ಕರ್ತವ್ಯದಲ್ಲಿದ್ದ ಹವಾಲ್ದಾರ್ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಬೆಳಗಾವಿ (Belagavi) ಜಿಲ್ಲೆಯ ಕುಡಚಿ ಪೊಲೀಸ್ ಠಾಣೆಯಲ್ಲಿ (Kuduchi Police Station) ನಡೆದಿದೆ.
ಯಲ್ಲಪ್ಪ ಭೋಜ(46) ಮೃತ ಹವಾಲ್ದಾರ್. ಠಾಣೆಯಲ್ಲಿ ಕರ್ತವ್ಯದಲ್ಲಿದ್ದ ಯಲ್ಲಪ್ಪ ಅವರಿಗೆ ಇದ್ದಕ್ಕಿದ್ದಂತೆ ತೀವ್ರ ಎದೆನೋವು ಕಾಣಿಸಿಕೊಂಡಿತ್ತು. ತಕ್ಷಣವೇ ಅವರನ್ನು ಮಹಾರಾಷ್ಟ್ರದ ಸಾಂಗಲಿಯ ಭಾರತಿ ಆಸ್ಪತ್ರೆಗೆ ಕರೆದೊಯ್ದಲಾಗಿತ್ತು. ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದರು. ಇದನ್ನೂ ಓದಿ: Andhra Pradesh| ಕತ್ತು ಹಿಸುಕಿ 8 ತಿಂಗಳ ಗರ್ಭಿಣಿ ಪತ್ನಿಯನ್ನು ಕೊಂದ ಪಾಪಿ ಪತಿ
ಮೂಡಲಗಿ ತಾಲೂಕಿನ ತುಕ್ಕಾನಟ್ಟಿ ನಿವಾಸಿಯಾದ ಹವಾಲ್ದಾರ್ ಯಲ್ಲಪ್ಪ ಅವರು ಕುಡಚಿ ಚೆಕ್‌ಪೋಸ್ಟ್‌ನಲ್ಲಿ ಕರ್ತವ್ಯಕ್ಕೆ ನಿಯೋಜಿಸಲ್ಪಟ್ಟಿದ್ದರು. ಚೆಕ್‌ಪೋಸ್ಟ್‌ನಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಅವರನ್ನು ನಿಯೋಜಿಸಲಾಗಿತ್ತು. ಇದನ್ನೂ ಓದಿ: ಮುಸ್ಲಿಮರದ್ದು ಕಾಂಟ್ರ್ಯಾಕ್ಟ್ ಮ್ಯಾರೇಜ್, ಹಿಂದೂಗಳ ರೀತಿ ಏಳು ಜನ್ಮದ ಅನುಬಂಧ ಅಲ್ಲ: ರಾಯರೆಡ್ಡಿ
ಯಲ್ಲಪ್ಪ ಅವರು ಕಳೆದ 9 ತಿಂಗಳಿನಿಂದ ಕುಡಚಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಅವರು ಹೆತ್ತವರನ್ನು, ಪಿಡಿಓ ಆಗಿರುವ ಪತ್ನಿ, ಇಬ್ಬರು ಹೆಣ್ಣುಮಕ್ಕಳು ಮತ್ತು ಒಬ್ಬ ಮಗನನ್ನು ಅಗಲಿದ್ದಾರೆ.