Connect with us

Bengaluru City

ನಿರ್ದೇಶಕ ಪ್ರೇಮ್ ವಿರುದ್ಧ ತಿರುಗಿ ಬಿದ್ರು ಶಿವಣ್ಣನ ಅಭಿಮಾನಿಗಳು!

Published

on

ಬೆಂಗಳೂರು: ನಿರ್ದೇಶಕ ಪ್ರೇಮ್ ಅವರ ಬಹುನಿರೀಕ್ಷಿತ ಚಿತ್ರ ‘ದಿ ವಿಲನ್’ ಗುರುವಾರವಷ್ಟೇ ತೆರೆಕಂಡಿದ್ದು, ಇದೀಗ ಸಿನಿಮಾ ನೋಡಿದ ಬಳಿಕ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಅಭಿಮಾನಿಗಳು ಪ್ರೇಮ್ ವಿರುದ್ಧ ತಿರುಗಿ ಬಿದ್ದಿದ್ದಾರೆ.

ಸಿನಿಮಾದಲ್ಲಿ ಸುದೀಪ್ ಅವರು ಶಿವಣ್ಣನಿಗೆ ಹೊಡೆಯುವ ದೃಶ್ಯವಿದ್ದು, ಈ ದೃಶ್ಯಕ್ಕೆ ಕತ್ತರಿ ಹಾಕಬೇಕು ಅಂತ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೇ ಈ ಸಂಬಂಧ ಇಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ನರ್ತಕಿ ಚಿತ್ರಮಂದಿರದ ಮುಂದೆ ಪ್ರತಿಭಟನೆ ಮಾಡಲು ಸಜ್ಜಾಗಿದ್ದಾರೆ.

ಈ ಸಂಬಂಧ ಶಿವಣ್ಣ ಅಭಿಮಾನಿ ಪುನೀತ್ ಎಂಬವರು ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಸಿನಿಮಾವನ್ನು ಸಿನಿಮಾ ತರಹ ನೋಡಿ ಅಂತ ಎಲ್ಲರೂ ಹೇಳುತ್ತಾರೆ. ಅದನ್ನೂ ನಾನು ಕೂಡ ಒಪ್ಪಿಕೊಳ್ಳುತ್ತೇನೆ. ಆದ್ರೆ ಸಿನಿಮಾದಲ್ಲಿರುವ ಹೀರೋಗೆ ಗೌರವ ಕೊಡಬೇಕು ಅನ್ನೋ ಸಾಮಾನ್ಯ ಜ್ಞಾನ ಒಬ್ಬ ನಿರ್ದೇಶಕನಿಗೆ ಯಾಕಿಲ್ಲ ಎಂದು ಪ್ರಶ್ನಿಸಿದ್ದಾರೆ.  ಇದನ್ನೂ ಓದಿ:  ಶಿವಣ್ಣ ಏನ್ ದಡ್ಡರೇ- ಅಭಿಮಾನಿಗಳಿಗೆ ಸುದೀಪ್ ಪ್ರಶ್ನೆ

ನಾನು ಸಿನಿಮಾವನ್ನು ಒಬ್ಬ ಕಲಾವಿದನಾಗಿ ಹಾಗೂ ಪಾತ್ರವಾಗಿಯೂ ನೋಡುತ್ತೇನೆ. ಇವೆರಡು ಕಣ್ಣುಗಳಿದ್ದಂತೆ. ಈ ಸಿನಿಮಾದ ಪಾತ್ರದಲ್ಲಿ ಶಿವಣ್ಣನಿಗೆ ತುಂಬಾ ಅವಮಾನ ಮಾಡಲಾಗಿದೆ ಅಂತ ಚಿತ್ರದ ಒಂದು ದೃಶ್ಯವನ್ನು ಹೇಳುವ ಮೂಲಕ ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಕೆಲವು ಸಂದರ್ಭಗಳಲ್ಲಿ ಒಬ್ಬ ನಿರ್ದೇಶಕನನ್ನು ನಾವು ಅತೀವವಾಗಿ ನಂಬುತ್ತೇವೆ. ಕಾರಣವೇನೆಂದರೆ ಒಂದು ಅವರು ಈ ಮೊದಲು 2 ಸಿನಿಮಾಗಳನ್ನು ಮಾಡಿದ್ದಾರೆ. ಆದ್ರೆ ಇಲ್ಲಿ ಪ್ರೇಮ್ ನಂಬಿಕೆಗೆ ದ್ರೋಹ ಮಾಡಿದ್ದಾರೆ. ಹೀಗಾಗಿ ಚಿತ್ರ ನೋಡಿದ ಬಳಿಕ ತುಂಬಾನೇ ಬೇಜಾರಾಗಿದೆ. ಆದ್ರೆ ಈ ಬಗ್ಗೆ ಶಿವಣ್ಣ ಅವರಿಗೆ ಹೇಳಿದ್ರೆ, ಅವರದ್ದು ಮಗು ಮನಸ್ಸು. ನೀವು ಏನು ಮಾಡಬಾರದು, ಒಂದು ಕಟೌಟ್ ಹೆಚ್ಚಾಗಿ ನಿಲ್ಲಿಸಿಬಿಡಿ. ಒಂದು ಹಾರ ಎಕ್ಸ್ಟ್ರಾ ಹಾಕಿ ಬಿಡಿ. ನೀವು ಗೌರವ ಕೊಡಿ ಸಿನಿಮಾನ ಸಿನಿಮಾದಂತೆ ನೋಡಿ.. ಹೀಗೆ ಅವರು ಧನಾತ್ಮಕವಾಗಿಯೇ ಮಾತನಾಡುತ್ತಾರೆ ಅಂತ ಪುನೀತ್ ತಿಳಿಸಿದ್ರು.

ಅವರು ಗಲಾಟೆ ಮಾಡಿದ್ರೆ ತಾಯಾಣೆ ಥಿಯೇಟರ್ ಗೆ ಬರಲ್ಲ ಅಂತ ಹೇಳಿದ್ದರು. ಹೀಗಾಗಿ ನಾವು ಗಲಾಟೆ ಮಾಡಿಲ್ಲ. ಶಿವಣ್ಣ ಹೇಳಿದ್ದು ಎಲ್ಲವನ್ನು ಸ್ವೀಕರಿಸುತ್ತೇವೆ. ಆದ್ರೆ ಇಷ್ಟೊಂದು ಬೇಸರ ಯಾವತ್ತೂ ಆಗಿಲ್ಲ ಅಂತ ಅವರು ದುಃಖ ತೋಡಿಕೊಂಡರು.

ಶಿವಣ್ಣ ಅವರು 125 ಸಿನಿಮಾ ಮಾಡಿದ ಹೀರೋ. ಸುಮ್ನೆ ಇರುತ್ತಾರೆ ಅಂತ ಇವರೆಲ್ಲರದ್ದು ಜಾಸ್ತಿ ಆಯ್ತು. ಸಿನಿಮಾದಲ್ಲಿ ಪರೋಕ್ಷವಾಗಿ ಅವಮಾನ ಮಾಡಲಾಗಿದೆ. ಉದ್ದೇಶಪೂರ್ವಕವಾಗಿಯೇ ಈ ರೀತಿ ಮಾಡಿದ್ದಾರೆ ಅನಿಸುತ್ತೆ. ಯಾಕಂದ್ರೆ ಕಾಸ್ಟ್ಯೂಮ್ ನಿಂದ ಹಿಡಿದು ಎಲ್ಲದರಲ್ಲೂ ಅವಮಾನ ಮಾಡಿದ್ದಾರೆ ಅಂತ ಪ್ರೇಮ್ ವಿರುದ್ಧ ಕಿಡಿಕಾರಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

https://www.youtube.com/watch?v=MPXuUCvMg9o

Click to comment

Leave a Reply

Your email address will not be published. Required fields are marked *