Thursday, 23rd May 2019

ಶಿವಣ್ಣ ಏನ್ ದಡ್ಡರೇ- ಅಭಿಮಾನಿಗಳಿಗೆ ಸುದೀಪ್ ಪ್ರಶ್ನೆ

ದಾವಣಗೆರೆ: ಕರುನಾಡ ಚಕ್ರವರ್ತಿ, ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ 36 ವರ್ಷ ಸಿನಿಮಾ ಇಂಡಸ್ಟ್ರಿಯಲ್ಲಿದ್ದಾರೆ. ಸಿನಿಮಾದ ಕಥೆಯನ್ನು ಕೇಳಿಯೇ ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಶಿವಣ್ಣ ಏನೇನು ದಡ್ಡರಾ ಎಂದು ಅಭಿನಯ ಚಕ್ರವರ್ತಿ ಸುದೀಪ್ ಅಭಿಮಾನಿಗಳಿಗೆ ಪ್ರಶ್ನೆ ಮಾಡಿದ್ದಾರೆ.

ಶಿವಣ್ಣ ಕಥೆಯನ್ನು ಒಪ್ಪಿಕೊಂಡು ಚಿತ್ರ ಮಾಡಿದ್ದಾರೆ. ಕತೆ ಕೇಳಿ ಸಿನಿಮಾ ಒಪ್ಪಿಕೊಂಡಿದ್ದು ಅವರ ನಿರ್ಧಾರ ತೆಗೆದುಕೊಂಡಿದ್ದಾರೆ. ಪ್ರತಿಭಟನೆ ಮಾಡುತ್ತಿರುವ ಶಿವಣ್ಣರ ನಿರ್ಧಾರಕ್ಕೆ ವಿರೋಧ ಮಾಡಿದಂತಾಗುತ್ತದೆ. ಒಬ್ಬ ವ್ಯಕ್ತಿ ಇನ್ನೊಬ್ಬನ ಸೇರಿಸುವುದಕ್ಕೆ ಹೋದಾಗ ಮಾಡುವ ತ್ಯಾಗವನ್ನು ಅಲ್ಲಿ ತೋರಿಸಲಾಗಿದೆ.

ಪಾತ್ರ ಅಂತಾ ಬಂದಾಗ ಅಲ್ಲಿ ಶಿವಣ್ಣ ನನ್ನ ಮೇಲೆ ಕೈ ಮಾಡುವ ಸೀನ್ ಬಂದಿದ್ದರೆ, ಖಂಡಿತ ನಾನು ಹೊಡೆಸಿಕೊಳ್ಳುತ್ತಿದ್ದೆ. ಹಿಂದೆ ಒಂದು ಸಿನಿಮಾದಲ್ಲಿ ಯಾರು ಅಂತಾ ಗೊತ್ತಿಲ್ಲ. ಒಂದು ಸನ್ನಿವೇಶದಲ್ಲಿ ಅವರ ಮಗ ಸಾವನ್ನಪ್ಪಿದ್ದಕ್ಕೆ ನನಗೆ ಹೊಡೆಯುತ್ತಾರೆ. ಅಂದು ನಾನು ಹೊಡೆಸಿಕೊಂಡಿದ್ದೇನೆ. ಕಥೆಗಾಗಿ ಆ ದೃಶ್ಯಗಳನ್ನು ಮಾಡಿರುತ್ತೇವೆ. ಶಿವಣ್ಣರ ಅನುಭವವನ್ನು ನಾವು ಪ್ರಶ್ನಿಸಲು ಹೋಗುವಷ್ಟು ದೊಡ್ಡವನು ನಾನು ಅಲ್ಲ ಅಂತಾ ಹೇಳಿದರು. ಇದನ್ನೂ ಓದಿ:  ನಿರ್ದೇಶಕ ಪ್ರೇಮ್ ವಿರುದ್ಧ ತಿರುಗಿ ಬಿದ್ರು ಶಿವಣ್ಣನ ಅಭಿಮಾನಿಗಳು!

ಚಿತ್ರದಲ್ಲಿ ಮಗನನ್ನು ಕರೆದುಕೊಂಡು ಬರುತ್ತೇನೆ ಅಂತಾ ತಾಯಿಗೆ ಮಾತು ಕೊಟ್ಟಿರುತ್ತಾರೆ. ಹಾಗಾಗಿ ನನ್ನ ಮೇಲೆ ಕೈ ಮಾಡಲ್ಲ. ಕೈ ಮಾಡುವ ಮುನ್ನ ನನಗೂ ಶಿವಣ್ಣ ಯಾರು ಅಂತಾ ಗೊತ್ತಿರಲ್ಲ. ತಾಯಿ ಜೊತೆ ಸೇರಿಸಲು ಬಂದ ವ್ಯಕ್ತಿ ಅಂತಾ ಗೊತ್ತಾದ ಕೂಡಲೇ ಎಲ್ಲ ಫೈಟಿಂಗ್ ಸೀನ್ ನಿಂತು ಹೋಗುತ್ತದೆ. ಅಭಿಮಾನಿಗಳನ್ನು ಸಿನಿಮಾವನ್ನು ಸಿನಿಮಾ ರೀತಿಯಲ್ಲಿ ನೋಡಲಿ. ಬೇಕಾದ್ರೆ ಶಿವಣ್ಣ ಆ ಸೀನ್ ಕಟ್ ಮಾಡಿಸಲಿ. ನನ್ನದೇನೂ ಅಭ್ಯಂತರವಿಲ್ಲ ಅಂತಾ ಸುದೀಪ್ ಸ್ಪಷ್ಟಪಡಿಸಿದ್ರು. ಇದನ್ನೂ ಓದಿ: ‘ದಿ ವಿಲನ್’ ರಿಲೀಸ್ ದಿನವೇ ಪ್ರೇಮ್ ಕೆಂಡಾಮಂಡಲ

ನಿರ್ದೇಶಕ ಪ್ರೇಮ್ ಅವರ ಬಹುನಿರೀಕ್ಷಿತ ಚಿತ್ರ ‘ದಿ ವಿಲನ್’ ಗುರುವಾರವಷ್ಟೇ ತೆರೆಕಂಡಿದ್ದು, ಇದೀಗ ಸಿನಿಮಾ ನೋಡಿದ ಬಳಿಕ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಅಭಿಮಾನಿಗಳು ಪ್ರೇಮ್ ವಿರುದ್ಧ ತಿರುಗಿ ಬಿದ್ದಿದ್ದಾರೆ. ಸಿನಿಮಾದಲ್ಲಿ ಸುದೀಪ್ ಅವರು ಶಿವಣ್ಣನಿಗೆ ಹೊಡೆಯುವ ದೃಶ್ಯವಿದ್ದು, ಈ ದೃಶ್ಯಕ್ಕೆ ಕತ್ತರಿ ಹಾಕಬೇಕು ಅಂತ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೇ ಈ ಸಂಬಂಧ ಇಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ನರ್ತಕಿ ಚಿತ್ರಮಂದಿರದ ಮುಂದೆ ಪ್ರತಿಭಟನೆ ಮಾಡಲು ಸಜ್ಜಾಗಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

Leave a Reply

Your email address will not be published. Required fields are marked *