ಹಾಸನ: ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಂದು, ಮಹಿಳೆಯ ಚಿನ್ನದ ಸರ ಕದ್ದು ಹಂತಕರು ಪರಾರಿಯಾದ ಘಟನೆ ನಗರದ ಸಕಲೇಶಪುರ ತಾಲೂಕಿನ ಹಾರಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಮಲ್ಲಮ್ಮ (85) ಕೊಲೆಯಾದ ವೃದ್ಧೆ. ಮಲ್ಲಮ್ಮ ಅವರ ಮಗ ಮೈಸೂರಿನಲ್ಲಿ ನೆಲೆಸಿದ್ದ ಕಾರಣ ಮನೆಯಲ್ಲಿ ಏಕಾಂಗಿಯಾಗಿ ವಾಸವಾಗಿದ್ದರು. ಹಂತಕರು ನಿನ್ನೆ ಸಂಜೆ ಮನೆ ಬಳಿಯೇ ಮಲ್ಲಮ್ಮರನ್ನು ಕೊಂದು ಚಿನ್ನಾಭರಣ ಹೊತ್ತೊಯ್ದಿದಿದ್ದಾರೆ. ವೃದ್ಧೆ ಇಂದು ಮನೆಯಿಂದ ಹೊರಬಾರದಿದ್ದಾಗ ಸ್ಥಳೀಯರು ಮನೆ ಬಳಿ ಹೋಗಿ ನೋಡಿದಾಗ ಕೊಲೆಯಾಗಿರುವುದು ಪತ್ತೆಯಾಗಿದೆ. ಇದನ್ನೂ ಓದಿ: 2047ರ ಮೊದಲು ನವ ಭಾರತವನ್ನು ನಿರ್ಮಿಸುವ ಗುರಿ ಹೊಂದಿದ್ದೇವೆ: ಮೋದಿ
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಯಸಳೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.