ಬೆಂಗಳೂರು: ಹಾಸನ (Hassan) ಟಿಕೆಟ್ ವಿಚಾರದಲ್ಲಿ ದಿನಕ್ಕೊಂದು ಗೊಂದಲ, ಗಲಾಟೆ ನಡೆಯುತ್ತಿದೆ. ಯಾರಿಗೆ ಹಾಸನ ಟಿಕೆಟ್ ಅನ್ನೋ ಚರ್ಚೆ ಜೋರಾಗಿ ನಡೆಯುತ್ತಿದೆ. ಸ್ವರೂಪ್ ಮತ್ತು ಭವಾನಿ ರೇವಣ್ಣ (Bhavani Revanna) ನಡುವೆ ಪೈಪೋಟಿ ಏರ್ಪಟ್ಟಿದೆ. ಹೀಗಾಗಿ ಕುಮಾರಸ್ವಾಮಿ (H.D.Kumaraswamy) ಮತ್ತು ರೇವಣ್ಣ (H.D.Revanna) ಹಾಸನ ವಿಚಾರದಲ್ಲಿ ಸಂಧಾನ ಮಾಡಿಕೊಳ್ತಾರಾ ಅಥವಾ ಸಂಘರ್ಷ ಮಾಡಿ ಕೊಳ್ತಾರಾ ಎಂಬ ಪ್ರಶ್ನೆ ಉದ್ಭವಿಸಿದೆ.
ಕುಮಾರಸ್ವಾಮಿ-ರೇವಣ್ಣ ಜೊತೆ ನಡೆಯುತ್ತಾ ಮಾತುಕತೆ? ಭವಾನಿ ಸ್ಪರ್ಧೆ ಮಾಡ್ತಾರಾ? ಸ್ವರೂಪ್ಗೆ ಟಿಕೆಟ್ ಸಿಗುತ್ತಾ? ರೇವಣ್ಣ-ಕುಮಾರಸ್ವಾಮಿ ನಡುವೆ ಆ ಒಪ್ಪಂದ ನಡೆಯುತ್ತಾ? ಹಾಸನ ಜಿಲ್ಲೆ ಟಿಕೆಟ್ ಡಿಸೈಡ್ ಅಧಿಕಾರ ಒಬ್ಬರಿಗೆ ಸಿಗುತ್ತಾ? ಗೊಂದಲಗಳಿಗೆ ತೆರೆ ಎಳೆಯೋಕೆ ಕುಮಾರಸ್ವಾಮಿ-ರೇವಣ್ಣ ಒಪ್ಪಂದ ಮಾಡಿಕೊಳ್ತಾರಾ ಎಂಬ ಚರ್ಚೆ ನಡೆಯುತ್ತಿದೆ. ಇದನ್ನೂ ಓದಿ: ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತದಲ್ಲಿ ದೂರುಗಳ ಸುರಿಮಳೆ – 7 ಕೇಸ್ ದಾಖಲು
Advertisement
Advertisement
ಕುಮಾರಸ್ವಾಮಿ, ರೇವಣ್ಣ ನಡುವೆ ನಡೆಯೋ ಒಪ್ಪಂದ ಏನಾಗುತ್ತೆ ಅಂತ ನೋಡೋದಾದ್ರೆ, ಹಾಸನ ಟಿಕೆಟ್ ವಿಚಾರದಲ್ಲಿ ಗೊಂದಲ ಶುರುವಾದ್ರೆ ಹಾಸನ ಜಿಲ್ಲೆಗೆ ಎಫೆಕ್ಟ್ ಆಗುತ್ತೆ. ಹೀಗಾಗಿ ಕೂತು ಸಮಸ್ಯೆ ಬರೆಹರಿಸೋದು ಇಬ್ಬರ ನಡೆ. ಹಾಸನದಲ್ಲಿ ನಾವು ಕಿತ್ತಾಡಿದ್ರೆ ಕಾಂಗ್ರೆಸ್- ಬಿಜೆಪಿಗೆ ಅದು ವರದಾನ ಆಗುತ್ತೆ. ಹಾಸನ ಭದ್ರಕೋಟೆ ಕೈ ಜಾರುವ ಸಮಸ್ಯೆ ಆಗಬಹುದು. ಕುಮಾರಸ್ವಾಮಿ ರಾಜ್ಯ ಸುತ್ತುತ್ತಿದ್ದಾರೆ. ಈ ವೇಳೆ ಹಾಸನ ಟಿಕೆಟ್ ಗೊಂದಲ ಆದ್ರೆ ಕುಮಾರಸ್ವಾಮಿ ಸಭೆ ಮೇಲೆ ಅದು ಇಂಪ್ಯಾಕ್ಟ್ ಆಗುತ್ತೆ. ಹೀಗಾಗಿ ಮಾತುಕತೆ ನಡೆಸಿ ಇತ್ಯರ್ಥ ಮಾಡಿಕೊಳ್ಳೋದು ಉತ್ತಮ ಅಂತಾ ಇಬ್ಬರು ನಾಯಕರು ನಿರ್ಧಾರ ಮಾಡಿದ್ದಾರಂತೆ.
Advertisement
Advertisement
ಯಾರೇ ಜವಾಬ್ದಾರಿ ತೆಗೆದುಕೊಂಡರೂ ಅವರು ಕ್ಷೇತ್ರದಲ್ಲಿ ಇರಬೇಕು. ಕುಮಾರಸ್ವಾಮಿ, ರೇವಣ್ಣ ನಡುವೆ ಡಿಸೈಡ್ ಮಾಡೋ ಅಧಿಕಾರ ಇಬ್ಬರಿಗೂ ಇದ್ದರೆ ಸಮಸ್ಯೆ ಆಗುತ್ತೆ. ಹೀಗಾಗಿ ಹಾಸನ ಜಿಲ್ಲೆ ಟಿಕೆಟ್ ವಿಚಾರದಲ್ಲಿ ಒಬ್ಬರು ನಿರ್ಧಾರ ತೆಗೆದುಕೊಳ್ಳುವುದು. ಹಾಸನದಲ್ಲಿ ಕಿತ್ತಾಡಿದ್ರೆ ಇಡೀ ರಾಜ್ಯದ ಮೇಲೆ ಇಂಪ್ಯಾಕ್ಟ್ ಆಗ್ತಿದೆ. ಇದನ್ನ ತಡೆಯಬೇಕಾದ್ರೆ ಗೊಂದಲ ನಿವಾರಣೆ ಆಗಬೇಕು. ಕಾರ್ಯಕರ್ತರ ನಡುವಿನ ಗೊಂದಲ ನಿವಾರಣೆಗೆ ಎಲ್ಲಾ ಸಂಘರ್ಷ ಮರೆತು ಟಿಕೆಟ್ ಗೊಂದಲಕ್ಕೆ ಇತಿಶ್ರೀ ಅಡೋದು ಕುಮಾರಸ್ವಾಮಿ ಪ್ಲ್ಯಾನ್ ಆಗಿದೆ. ಇದನ್ನೂ ಓದಿ: ಸಾರ್ವಜನಿಕ ಸ್ಥಳಗಳಲ್ಲಿ ಕಮಲ ಪೇಂಟಿಂಗ್ – ಸಂಸದ ತೇಜಸ್ವಿ ಸೂರ್ಯ ವಿರುದ್ಧ BBMP ಗರಂ
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k