ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ವಿರುದ್ಧ ಬೆಂಗಳೂರು ದಕ್ಷಿಣ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಆರ್. ರಮೇಶ್ (NR Ramesh) ಲೋಕಾಯುಕ್ತಕ್ಕೆ ದಾಖಲೆ ಸಮೇತ ದೂರು ನೀಡಿದ್ದಾರೆ.
10 ಬೃಹತ್ ಹಗರಣಗಳ ಬಗ್ಗೆ ಎನ್. ಆರ್.ರಮೇಶ್ ಲೋಕಾಯುಕ್ತಕ್ಕೆ ದೂರ ನೀಡಿದ್ದಾರೆ. ದೂರಿನಲ್ಲಿ ಸಿದ್ದರಾಮಯ್ಯ, ರಾಬರ್ಟ್ ವಾದ್ರಾ (Robert Vadra), ಕೆ. ಜೆ. ಜಾರ್ಜ್ (KJ George), ಕೃಷ್ಣ ಭೈರೇಗೌಡ (Krishne Byre Gowda), ಯು. ಟಿ. ಖಾದರ್ (UT Khader), ಎಂ.ಬಿ. ಪಾಟೀಲ್, ಜಮೀರ್ ಅಹಮ್ಮದ್, ದಿನೇಶ್ ಗುಂಡೂರಾವ್, ಎಂ.ಕೃಷ್ಣಪ್ಪ, ಎನ್.ಎ. ಹ್ಯಾರೀಸ್ ಹಾಗೂ ಪ್ರಿಯಾ ಕೃಷ್ಣ ವಿರುದ್ಧ ದೂರು ದಾಖಲಾಗಿದೆ.
Advertisement
Advertisement
9 ಮಂದಿ ಹಿರಿಯ ಐಎಎಸ್ ಅಧಿಕಾರಿಗಳು, 5 ಮಂದಿ ಕೆಎಎಸ್ ಅಧಿಕಾರಿಗಳು ಸೇರಿದಂತೆ 21 ಅಧಿಕಾರಿಗಳ ವಿರುದ್ಧ 3,728 ಪುಟಗಳ ಸಂಪೂರ್ಣ ದಾಖಲೆಗಳ ಸಹಿತ 10 ದೂರುಗಳು ಸಲ್ಲಿಕೆಯಾಗಿದೆ. ಅಷ್ಟೇ ಅಲ್ಲದೇ 62 ಗಂಟೆಗಳ ಅವಧಿಯ ವೀಡಿಯೋ ತುಣುಕುಗಳು ಮತ್ತು 900ಕ್ಕೂ ಹೆಚ್ಚು ಛಾಯಾಚಿತ್ರಗಳನ್ನೊಳಗೊಂಡ 2 ಡಿವಿಡಿಗಳು ಬಿಡುಗಡೆಯಾಗಿವೆ.
Advertisement
ಭ್ರಷ್ಟಾಚಾರ, ವಂಚನೆ, ಅಧಿಕಾರ ದುರುಪಯೋಗ, ನಕಲಿ ದಾಖಲೆ ತಯಾರಿಕೆ ಮತ್ತು ಸರ್ಕಾರಿ ಭೂಕಬಳಿಕೆ ಪ್ರಕರಣಗಳು ದಾಖಲಾಗಿದೆ. ಅಷ್ಟೇ ಅಲ್ಲದೇ ಸಿದ್ದರಾಮಯ್ಯ ವಿರುದ್ಧವೇ 7 ದೂರುಗಳು ದಾಖಲಾಗಿದೆ.
Advertisement
ಈ ಬಗ್ಗೆ ರಮೇಶ್ ಕುಮಾರ್ ಮಾತನಾಡಿ, ಕರ್ನಾಟಕ ರಾಜಕಾರಣ ಇತಿಹಾಸದಲ್ಲಿ ಒಂದೇ ಬಾರಿಗೆ 10 ಬೃಹತ್ ಹಗರಣ ಇದಾಗಿದ್ದು, ಬೃಹತ್ ಹಗರಣಗಳ ಲೋಕಾಯುಕ್ತರಿಗೆ ದೂರುಗಳ ಸುರಿಮಳೆ ಆಗಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ವಾದ್ರಾ, ದಿನೇಶ್ ಗುಂಡೂರಾವ್, ಕೆ.ಜೆ ಜಾರ್ಜ್ ಸೇರಿದಂತೆ ಅನೇಕರ ವಿರುದ್ಧ ದೂರು ನೀಡಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ಹಾಸನದಲ್ಲಿ ಮತ್ತೆ ಅಭ್ಯರ್ಥಿ ಗೊಂದಲ – ಕುತೂಹಲ ಮೂಡಿಸಿದ ಶಿವಲಿಂಗೇಗೌಡರ ನಡೆ
ವಂಚನೆ, ಭ್ರಷ್ಟಾಚಾರ, ಭೂ ಕಬಳಿಕೆ ಆಧಾರದ ಮೇಲೆ ದೂರು ಸಲ್ಲಿಕೆಯಾಗಿದ್ದು, ಕೃಷಿ ಭಾಗ್ಯ ಯೋಜನೆ ಅಡಿ ಸಿದ್ದರಾಮಯ್ಯ ಮತ್ತು ಕೃಷ್ಣ ಭೈರೇಗೌಡರು ಬೃಹತ್ ಹಗರಣ ಮಾಡಿದ್ದಾರೆ. ಯು.ಟಿ ಖಾದರ್ ಮತ್ತು ಸಿದ್ದರಾಮಯ್ಯ ಅವರು ಜೊತೆಗೂಡಿ ಭ್ರಷ್ಟಾಚಾರ ಮಾಡಿ ಹಣ ಕಬಳಿಸಿದ್ದಾರೆ. ಸಿದ್ದರಾಮಯ್ಯ ಮತ್ತು ಕೆ.ಜೆ ಜಾರ್ಜ್ ಸೇರಿ 40 ಕೋಟಿ ರೂ. ಬೃಹತ್ ಹಗರಣ ಮಾಡಿದ್ದಾರೆ. ಬಿಬಿಎಂಪಿ ಎಲ್‍ಇಡಿ ಬೀದಿದೀಪ ಅಳವಡಿಕೆಯಲ್ಲಿ 1,600 ಹಗರಣ ಆಗಿದೆ. ಅದರ ವಿರುದ್ಧ ದೂರು ನೀಡುತ್ತಿದ್ದೇವೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ತಮಿಳುನಾಡಿನಲ್ಲಿ ಅಕಾಲಿಕ ಮಳೆ – ನಾಗಪಟ್ಟಿಣಂನಲ್ಲಿ ಶಾಲೆಗಳಿಗೆ ರಜೆ
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k