ಹಾಸನ: ಟೆಕ್ಕಿಗಳ ಮಾಸ್ಟರ್ ಪ್ಲಾನ್‍ನಿಂದಾಗಿ 15 ಜನ ಬಡ ಮಹಿಳೆಯರಿಗೆ ಕೆಲಸ ಸಿಕ್ಕಿರುವುದರ ಜೊತೆಗೆ, ಅರಸೀಕೆರೆ ನಗರಸಭೆಗೆ ಸುಮಾರು ಹತ್ತು ಸಾವಿರದಷ್ಟು ಮಾಸ್ಕ್ ಪೂರೈಕೆಯಾಗಿದೆ.
ಅರಸೀಕೆರೆ ಮೂಲದ ಕಿರಣ್, ಶಶಿಧರ್, ಪ್ರದೀಪ್, ಪವಿತ್ರ, ಕಾವ್ಯ ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ. ಕೊರೊನಾ ಎಫೆಕ್ಟ್ ಹಿನ್ನೆಲೆ ವರ್ಕ್ ಫ್ರಮ್ ಹೋಂ ಸೂಚನೆಯಂತೆ ಐವರು ಊರಿಗೆ ವಾಪಸ್ಸಾಗಿದ್ದರು. ಈ ವೇಳೆ ಅವರು ಸ್ಥಳೀಯವಾಗಿ ಮಾಸ್ಕ್ ಗೆ ಸಮಸ್ಯೆ ಇರುವುದು ಮತ್ತು ಹೊಲಿಗೆ ಕೆಲಸ ಮಾಡುತ್ತಿದ್ದ ಮಹಿಳೆಯರ ಆರ್ಥಿಕ ಸಮಸ್ಯೆಯನ್ನು ಗಮನಿಸಿದ್ದಾರೆ. ತಾವು ಮನೆಯಲ್ಲೇ ಕುಳಿತು ಕೆಲಸ ಮಾಡಿ ಸಂಪಾದನೆ ಮಾಡುವಂತೆ ನಮ್ಮ ಊರಿನ ಮಹಿಳೆಯರಿಗೂ ಸಹಾಯವಾಗಲಿ ಎಂದು ನಿರ್ಧರಿಸಿದ ಐದೂ ಜನರು ವಿಂಗ್ಸ್ ಎನ್‍ಜಿಓ ಸಂಸ್ಥೆ ಸ್ಥಾಪನೆ ಮಾಡಿದ್ದಾರೆ.
Advertisement
Advertisement
ನಂತರ ಅರಸೀಕೆರೆ ನಗರಸಭೆ ಅಧಿಕಾರಿಗಳನ್ನು ಭೇಟಿ ಮಾಡಿ 8 ರೂಪಾಯಿಗೆ ಮಾಸ್ಕ್ ಹೊಲಿಸಿ ಕೊಡುತ್ತೇವೆ. ಇದರಿಂದ ಸ್ಥಳೀಯ ಮಹಿಳೆಯರಿಗೆ ಸಹಾಯವಾಗುವುದರ ಜೊತೆಗೆ ಮಾಸ್ಕ್ ಸಮಸ್ಯೆ ಕೂಡ ಒಂದಷ್ಟು ಪರಿಹಾರವಾಗಲಿದೆ ಎಂದು ಮಾತುಕತೆಯಾಡಿ ಕೆಲಸ ಮಾಡಲು ಒಪ್ಪಿಗೆ ಪಡೆದುಕೊಂಡಿದ್ದಾರೆ. ನಂತರ ಹೊಲಿಗೆ ಕೆಲಸ ಕಲಿತ ಮಹಿಳೆಯರ ಮನೆಗಳಿಗೆ ತಾವೇ ಸ್ವತಃ ಕಚ್ಚಾ ವಸ್ತು ಪೂರೈಕೆ ಮಾಡಿ ಮಾಸ್ಕ್ ಹೊಲಿಸಿದ್ದಾರೆ.
Advertisement
Advertisement
ಪ್ರತಿ ಒಂದು ಮಾಸ್ಕ್ ತಯಾರಿಸಲು 8 ರೂಪಾಯಿ ವೆಚ್ಚ ತಗಲುತ್ತಿದ್ದು, ಯಾವುದೇ ಲಾಭ ಪಡೆಯದೇ 8 ರೂಪಾಯಿಗೇ ಅರಸೀಕೆರೆ ನಗರಸಭೆಗೆ ಮಾಸ್ಕ್ ಪೂರೈಕೆ ಮಾಡುತ್ತಿದ್ದಾರೆ. ಇದರಿಂದ ಮಹಿಳೆಯರು ತಮ್ಮ ಮನೆಯಲ್ಲೇ ಕುಳಿತು ದಿನವೊಂದಕ್ಕೆ ಸುಮಾರು 800 ರಿಂದ 1 ಸಾವಿರ ಸಂಪಾದನೆ ಮಾಡುವಂತಾಗಿದೆ. ಆಫೀಸ್ ಕೆಲಸದ ಜೊತೆಗೆ ಮಾಸ್ಕ್ ಸಮಸ್ಯೆ ಬಗೆಹರಿಸಲು ಮತ್ತು ಮಹಿಳೆಯರ ಆರ್ಥಿಕ ಸಮಸ್ಯೆಗೆ ನೆರವಾಗಲು ಮುಂದಾದ ಟೆಕ್ಕಿಗಳ ಪ್ಲಾನ್ ಜನಸಾಮಾನ್ಯರ ಮೆಚ್ಚುಗೆಗೆ ಪಾತ್ರವಾಗಿದೆ.