ಕತ್ತು ಸೀಳಿ ಖ್ಯಾತ ಮಾಡೆಲ್‌ ಬರ್ಬರ ಹತ್ಯೆ – ಕಾಲುವೆಯಲ್ಲಿ ಶವ ಪತ್ತೆ

Public TV
1 Min Read
Haryanvi Model Sheetal Murdered Throat Slit Body Found In Canal

ಚಂಡೀಗಢ: ಸೋನಿಪತ್‌ ಕಾಲುವೆಯಲ್ಲಿ (Sonipat Canal) ಕತ್ತು ಸೀಳಿದ ಸ್ಥಿತಿಯಲ್ಲಿ ಹರ್ಯಾಣ (Haryana) ಮೂಲದ ಮಾಡೆಲ್‌ನ ಶವ ಪತ್ತೆಯಾಗಿದೆ.

ಹರಿಯಾಣವಿ ಸಂಗೀತ ಉದ್ಯಮದಲ್ಲಿ (Haryanvi Music) ಮಾಡೆಲ್ ಆಗಿ ಕೆಲಸ ಮಾಡುತ್ತಿದ್ದ ಶೀತಲ್‌ (Sheetal) ಶವ ಪತ್ತೆಯಾಗಿದ್ದು ಕೊಲೆಗೆ ಕಾರಣ ತಿಳಿದು ಬಂದಿಲ್ಲ.

ಶೀತಲ್ ತನ್ನ ಸಹೋದರಿ ನೇಹಾ ಜೊತೆ ಪಾಣಿಪತ್‌ನಲ್ಲಿ ವಾಸಿಸುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜೂನ್ 14 ರಂದು ಮಾಡೆಲ್ ಶೂಟಿಂಗ್‌ಗಾಗಿ ಅಹರ್ ಗ್ರಾಮಕ್ಕೆ ತೆರಳಿದ್ದರು. ಮರಳಿ ಮನೆಗೆ ಬಾರದೇ ಇದ್ದಾಗ ಸಹೋದರೆ ಪೊಲೀಸ್‌ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು.ಇದನ್ನೂ ಓದಿ: ಮಹಿಳೆಯ ನಗ್ನ ವಿಡಿಯೋ ರೆಕಾರ್ಡ್‌ ಮಾಡ್ಕೊಂಡು ಬ್ಲ್ಯಾಕ್‌ಮೇಲ್‌ – ಪ್ರತಿಷ್ಠಿತ ದೇವಸ್ಥಾನದ ಅರ್ಚಕ ಅರೆಸ್ಟ್‌

ತನಿಖೆಗೆ ಇಳಿದ ಪೊಲೀಸರಿಗೆ ಖಾಂಡಾ ಗ್ರಾಮದ ಬಳಿಯ ಕಾಲುವೆಯಲ್ಲಿ ಮೃತದೇಹವನ್ನು ಪತ್ತೆ ಹಚ್ಚಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು ಆರೋಪಿಗಳಿಗಾಗಿ ಹುಡುಕಾಟ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಪ್ರಕರಣವು ಪ್ರಾದೇಶಿಕ ಮನರಂಜನಾ ಉದ್ಯಮದಲ್ಲಿ ಮಹಿಳೆಯರ ಸುರಕ್ಷತೆಯ ಬಗ್ಗೆ ಗಂಭೀರ ಕಳವಳವನ್ನು ಹುಟ್ಟುಹಾಕಿದೆ.

Share This Article