ಚಂಡೀಗಢ: ಜಜ್ಜರ್ ಜಿಲ್ಲೆಯಲ್ಲಿ ಅಪರಿಚಿತ ಬಂಧೂಕುಧಾರಿಗಳು ಹೊಂಚುದಾಳಿ ನಡೆಸಿ ಹರಿಯಾಣದ ಭಾರತೀಯ ರಾಷ್ಟ್ರೀಯ ಲೋಕದಳದ ಅಧ್ಯಕ್ಷ ಮತ್ತು ಮಾಜಿ ಶಾಸಕ ನಫೆ ಸಿಂಗ್ ರಾಠಿ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ನಡೆದಿದೆ.
ನಫೆ ಸಿಂಗ್ ರಾಠಿ ಅವರು ಪ್ರಯಾಣಿಸುತ್ತಿದ್ದ ಎಸ್‌ಯುವಿ ಮೇಲೆ ಹೊಂಚುದಾಳಿ ನಡೆಸಿದ ಅಪರಿಚಿತ ಬಂದೂಕುಧಾರಿಗಳು ಇಂದು ಸಂಜೆ ಗುಂಡಿಕ್ಕಿ ಕೊಂದಿದ್ದಾರೆ. ರಾಠಿ ಅವರೊಂದಿಗೆ ಪ್ರಯಾಣಿಸುತ್ತಿದ್ದ ಇಬ್ಬರು ಸಾವನ್ನಪ್ಪಿದ್ದು, ಇಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ.
Advertisement
ಕಾರಿನಲ್ಲಿ ಬಂದ ವ್ಯಕ್ತಿಗಳು ಗುಂಡಿನ ದಾಳಿ ನಡೆಸಿದಾಗ ರಾಠಿ ಮತ್ತು ಅವರ ಸಹಚರರು ವಾಹನದೊಳಗೆ ಇದ್ದರು. ದಾಳಿಯ ನಂತರ ದಾಳಿಕೋರರು ಸ್ಥಳದಿಂದ ಪರಾರಿಯಾಗಿದ್ದಾರೆ. ಗಾಯಾಳುಗಳನ್ನು ತಕ್ಷಣ ವೈದ್ಯಕೀಯ ಚಿಕಿತ್ಸೆಗಾಗಿ ಬ್ರಹ್ಮ ಶಕ್ತಿ ಸಂಜೀವನಿ ಆಸ್ಪತ್ರೆಗೆ ಸಾಗಿಸಲಾಯಿತು. ಅಷ್ಟರಲ್ಲಿ ಮಾಜಿ ಶಾಸಕರು ಸಾವನ್ನಪ್ಪಿದ್ದಾರೆ.
Advertisement
ನಫೆ ಸಿಂಗ್ ರಾಠಿ ಅವರು ಬಹದ್ದೂರ್‌ಗಢದಿಂದ ಐಎನ್‌ಎಲ್‌ಡಿ ಶಾಸಕರಾಗಿ ಸೇವೆ ಸಲ್ಲಿಸಿದ್ದರು. ಆಘಾತಕಾರಿ ದಾಳಿಯ ನಂತರ ರಾಜ್ಯ ಪೊಲೀಸರು ಅಲರ್ಟ್ ಆಗಿದ್ದಾರೆ. ಅಪರಾಧದ ಸ್ಥಳಕ್ಕೆ ಹಲವಾರು ತಂಡಗಳನ್ನು ತ್ವರಿತವಾಗಿ ಸಜ್ಜುಗೊಳಿಸಲಾಗಿದೆ. ದಾಳಿ ಕುರಿತು ಪೊಲೀಸರು ತನಿಖೆಗೆ ಮುಂದಾಗಿದ್ದಾರೆ. ದಾಳಿಕೋರರು ಹೇಗೆ ಬಂದರು, ಹೇಗೆ ಪರಾರಿಯಾದರು ಎಂಬುದನ್ನು ತಿಳಿಯಲು ಅಧಿಕಾರಿಗಳು ಸುತ್ತಮುತ್ತಲಿನ ವಿವಿಧ ಸ್ಥಳಗಳಿಂದ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸುತ್ತಿದ್ದಾರೆ.