ಮುಂಬೈ: ಟೀಂ ಇಂಡಿಯಾ ಕ್ರಿಕೆಟ್ ಪ್ರಧಾನ ಕೋಚ್ ಆಯ್ಕೆ ಪ್ರಕ್ರಿಯೆ ನಡೆಯುತ್ತಿರುವಾಗಲೇ ತಂಡದ ನಾಯಕ ವಿರಾಟ್ ಕೊಹ್ಲಿ ತಮ್ಮ ಬೆಂಬಲ ರವಿಶಾಸ್ತ್ರಿ ಅವರಿಗೆ ಎಂದು ಹೇಳುವ ಬಗ್ಗೆ ಕ್ರಿಕೆಟ್ ವಿಶ್ಲೇಷಕ ಹರ್ಷ ಬೋಗ್ಲೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬಿಸಿಸಿಐ ಕೋಚ್ ಆಯ್ಕೆ ಮಾಡುವ ಕುರಿತ ಕಾರ್ಯಕ್ಕೆ ಚಾಲನೆ ನೀಡುವ ಸಿದ್ಧತೆಯಲ್ಲಿದೆ. ಈ ಸಂದರ್ಭದಲ್ಲಿ ಈ ರೀತಿ ಬಹಿರಂಗವಾಗಿ ಮಾತನಾಡುವುದು ಎಷ್ಟು ಸರಿ? ಈ ಪ್ರತಿಕ್ರಿಯೆ ಇನ್ನು ನಡೆಯುತ್ತಿರುವುದರಿಂದ ಕೋಚ್ ಆಯ್ಕೆಯಲ್ಲಿ ಮುಖ್ಯ ಪಾತ್ರವಹಿಸುವ ವ್ಯಕ್ತಿಗಳು ಇಂತಹ ಹೇಳಿಕೆ ನೀಡುವುದು ಸರಿಯಲ್ಲ ಎದು ಭೋಗ್ಲೆ ಕಿಡಿಕಾರಿದ್ದಾರೆ.
Advertisement
I wasn't talking specifically about Virat. I can understand that if you are asked a question, you answer it but the moment the question was asked, somebody should have said that the selection process is on and so, it wouldn't be right for him to answer it.
— Harsha Bhogle (@bhogleharsha) July 30, 2019
Advertisement
ಕಳೆದ ವಾರ ಕೋಚ್ ಆಯ್ಕೆ ಮಾಡುವ ಸಮಿತಿಯಲ್ಲಿದ್ದ ಸದಸ್ಯರಾದ ಅಂಶುಮಾನ್ ಗಾಯಕ್ವಾಡ್ ಕೂಡ ಕೋಚ್ ರವಿಶಾಸ್ತ್ರಿ ಪರವೇ ಹೇಳಿಕೆ ನೀಡಿದ್ದರು. ರವಿಶಾಸ್ತ್ರಿ ಕೋಚಿಂಗ್ ಅವಧಿಯಲ್ಲಿ ಟೀಂ ಇಂಡಿಯಾ ಉತ್ತಮ ಪ್ರದರ್ಶನವನ್ನು ನೀಡಿದೆ ಎಂದಿದ್ದರು. ಇಬ್ಬರ ಹೇಳಿಕೆಯನ್ನು ಗಮನಿಸಿರುವ ಭೋಗ್ಲೆ ಈ ಕುರಿತು ಟ್ವೀಟ್ ಮಾಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Advertisement
ವೆಸ್ಟ್ ಇಂಡೀಸ್ ಟೂರ್ನಿಗೆ ತೆರಳುವ ಮುನ್ನ ಪತ್ರಿಕಾಗೋಷ್ಠಿ ನಡೆಸಿದ್ದ ವಿರಾಟ್ ಕೊಹ್ಲಿ, ರೋಹಿತ್‍ರೊಂದಿಗೆ ತನಗೆ ಯಾವುದೇ ಅಸಮಾಧಾನವಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಈ ಸಂದರ್ಭದಲ್ಲಿ ಕೋಚ್ ಆಯ್ಕೆ ಕುರಿತ ಪ್ರಶ್ನೆಗೆ ಉತ್ತರಿಸಿ, ರವಿಶಾಸ್ತ್ರಿ ಅವರನ್ನ ಮುಂದುವರಿಸಿದರೆ ತಮಗೆ ಯಾವುದೇ ಸಮಸ್ಯೆ ಇಲ್ಲ ಎಂದಿದ್ದರು. ಅಲ್ಲದೇ ಇದುವರೆಗೂ ಆಯ್ಕೆ ಸಮಿತಿ ಕೋಚ್ ನೇಮಕ ಬಗ್ಗೆ ಯಾವುದೇ ಅಭಿಪ್ರಾಯವನ್ನು ಕೇಳಿಲ್ಲ. ನನಗೂ ರವಿಶಾಸ್ತ್ರಿ ಅವರ ನಡುವೆ ಉತ್ತಮ ಸಮನ್ವಯ ಇದ್ದು, ಅವರೆ ಕೋಚ್ ಆಗಿ ಮುಂದುವರಿಯಬೇಕೆಂದು ಕೇಳಿಕೊಳ್ಳುತ್ತೇನೆ. ನನ್ನ ಅಭಿಪ್ರಾಯವನ್ನು ಸಮಿತಿ ಮುಂದೆ ಹೇಳುತ್ತೇನೆ ಎಂದಿದ್ದರು.
Advertisement
It isn't a good idea, when applications are being invited, for key influencers to be stating their preference. https://t.co/Ooh6lLiFFZ
— Harsha Bhogle (@bhogleharsha) July 30, 2019